ಮಳವಳ್ಳಿ : ಮಳವಳ್ಳಿ ತಾಲ್ಲೂಕಿನಾದ್ಯಂತ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಆಂದೋಲನ ಭರದಿಂದ ಸಾಗಿದೆ ಎಂದು ಮಾಜಿ ಸಚಿವ ಪಿ ಎಂ ನರೇಂದ್ರಸ್ವಾಮಿ ತಿಳಿಸಿದ್ದಾರೆ.
ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಕಾಂಗ್ರೆಸ್‌ನಲ್ಲಿ ರಶೀದಿ ನೀಡುವ ಮೂಲಕ ಸದಸ್ಯ ನೋಂದಣಿ ಮಾಡಿಕೊಳ್ಳುವ ಕಾಲ ಮುಗಿದಿದ್ದು ಈಗ ಆನ್‌ಲೈನ್ ಮೂಲಕ ನೋಂದಣಿ ಮಾಡುವ ಕಾರ್ಯಕ್ಕೆ ಚಾಲನೆ ದೊರಕಿದೆ, ಇದಕ್ಕಾಗಿ ಏಳು ಜಿ.ಪಂ ಕ್ಷೇತ್ರ ಹಾಗೂ ಪಟ್ಟಣಕ್ಕೆ ಮಹಿಳೆ ಪುರಷ ಸೇರಿದಂತೆ ತಲಾ ಇಬ್ಬರು ಮುಖ್ಯ ನಿಯಂತ್ರಕರನ್ನು ನೇಮಕ ಮಾಡಲಾಗುತ್ತಿದ್ದು ಒಟ್ಟು 16 ಮಂದಿಯ ಈ ತಂಡ ನಂತರದಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಇಬ್ಬರು ಸದಸ್ಯತ್ವ ನೋಂದಣಿಕಾರರನ್ನು ನೇಮಕ ಮಾಡಿಕೊಂಡು ಆ ಮೂಲಕ ನೋಂದಣಿ ಕಾರ್ಯವನ್ನು ಚುರುಕು ಗೊಳಿಸಲಿದ್ದಾರೆ ಎಂದು ವಿವರಿಸಿದರು.
ಪ್ರತಿ ಬೂತ್ ಮಟ್ಟದಲ್ಲಿ ಕನಿಷ್ಠ 250 ಜನರನ್ನು ಸದಸ್ಯರನ್ನಾಗಿ ಮಾಡುವುದು ಪಕ್ಷದ ಗುರಿಯಾಗಿದ್ದು ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಕಾರ್ಯೋನ್ಮುಖ ರಾಗುವುದರ ಜೊತೆಗೆ ಕ್ಷೇತ್ರದ ಜನರು ಸಹ ಅತಿ ಹೆಚ್ಚು ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯುವ ಮೂಲಕ ಈ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ತಮ್ಮ ಅವಧಿಯಲ್ಲಿ ಪಟ್ಟಣದ ಕ್ರೀಡಾಂಗಣಕ್ಕೆ ಕನಕದಾಸ ಕ್ರೀಡಾಂಗಣ ಎಂದು ನಾಮಕರಣ ಮಾಡಿದ್ದನ್ನು ಬದಲಾಯಿಸಿ ತಾಲೂಕು ಕ್ರೀಡಾಂಗಣ ಎಂದು ಹೊಸ ನಾಮ ಫಲಕ ಹಾಕಿರುವ ಕ್ರಮದ ಪ್ರತಿಕ್ರೀಯಿಸಿದ ನರೇಂದ್ರಸ್ವಾಮಿ ಕನಕದಾಸರ ಮೇಲಿನ ಭಕ್ತಿ ಗೌರವದಿಂದ ಕ್ರೀಡಾಂಗಣಕ್ಕೆ ಕನಕದಾಸರ ಹೆಸರಿಡಲಾಗಿದೆ. ಇದಕ್ಕೆ ತಾಂತ್ರಿಕ ಅಡಚಣೆಗಳೇನಾದರು ಇದ್ದಲ್ಲಿ ನಾನೇ ಮುಖ್ಯಮಂತ್ರಿ ಗಳಿಗೆ ಪತ್ರ ಬರೆದು ಸರಿಪಡಿಸುತ್ತೇನೆ ಇದೇನು ದೊಡ್ಡ ವಿಚಾರ ಅಲ್ಲ, ಇದನ್ನೇ ಮುಂದಿಟ್ಟುಕೊAಡು ಬೇರೆ ಫಲಕ ಹಾಕಿರುವುದು ಇಂತಹ ಗೊಂದಲ ಸೃಷ್ಟಿ ಮಾಡಲೆಂದೇ ಕೆಲ ಪಟ್ಟಭದ್ರರಿದ್ದು ಇದಕ್ಕೆ ಜನರೇ ಮುಂದೆ ತಕ್ಕ ಉತ್ತರ ನೀಡುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಜೆ ದೇವರಾಜು, ಸುಂದರ್ ರಾಜ್, ಮಾಜಿ ತಾ ಪಂ ಅಧ್ಯಕ್ಷ ರಾದ ನಾಗೇಶ್, ಆರ್ ಎನ್ ವಿಶ್ವಾಸ್ ಮತ್ತಿತರರು ಹಾಜರಿದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ