December 22, 2024

Bhavana Tv

Its Your Channel

ಈರಣ್ಣ ಕಡಾಡಿರವರ ಪತ್ರಿಕಾಗೋಷ್ಠಿ ಹಾಗೂ ಯಮದೂರು ಸಿದ್ದರಾಜು ಅವರಿಂದ ಈರಣ್ಣ ಅವರಿಗೆ ಸನ್ಮಾನ.

ಮಳವಳ್ಳಿ: ರಾಜ್ಯದಲ್ಲಿ ಐದು ವರ್ಷಗಳ ಕಾಲ ಜನವಿರೋಧಿ ಆಡಳಿತ ನಡೆಸಿ ನಂತರ ನಡೆದ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ಗೆ ಬಿಜೆಪಿಯಿಂದ ಯಾರೂ ಹೋಗುವುದಿಲ್ಲ ಎಂದು ರಾಜ್ಯ ಸಭಾ ಸದಸ್ಯರೂ ಆಗಿರುವ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.
ಚಾಮರಾಜನಗರಕ್ಕೆ ತೆರಳುವ ಮಾರ್ಗಮಧ್ಯೆ ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿದ್ದರಾಮಯ್ಯ ಅವರ ಜನವಿರೋಧಿ ಆಡಳಿತದಿಂದ 2018ರ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿಯನ್ನು ಮತದಾರರು ಆಯ್ಕೆ ಮಾಡಿದರು. ಆದರೆ ಕಾಂಗ್ರೆಸ್ ಜೆಡಿಎಸ್ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಿದಾಗ ಅವರ ಆಡಳಿತ ವೈಖರಿಯಿಂದ ಬೇಸತ್ತ ಹಲವು ಶಾಸಕರು ಸ್ವಯಂಪ್ರೇರಿತವಾಗಿ ನಮ್ಮ ಪಕ್ಷಕ್ಕೆ ಬಂದಿದ್ದರು. ಈಗ ನಮ್ಮ ಪಕ್ಷದಿಂದ ಯಾರೂ ಕಾಂಗ್ರೆಸ್ ಗೆ ಹೋಗುವುದಿಲ್ಲ. ಕಾಂಗ್ರೆಸ್ ನಿಂದಲೇ ಹತ್ತಾರು ಮಂದಿ ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದರು.
ಉತ್ತರ ಪ್ರದೇಶದಲ್ಲಿ ಕೆಲ ಶಾಸಕರ ಪಕ್ಷಾಂತರ ಬಗ್ಗೆ ಪ್ರತಿಕ್ರಿಯಿಸಿದ ಅವರು ಕೆಲವರು ಅಧಿಕಾರದ ಆಸೆಗಾಗಿ ಅಲ್ಲಿ ಬೇರೆ ಪಕ್ಷಗಳಿಗೆ ಹೋಗುತ್ತಿದ್ದು, ಅವರಿಗೆ ಮತದಾರರೇ ಸರಿಯಾದ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಮನ್ ಮುಲ್ ನ ಹಾಲಿಗೆ ನೀರು ಮತ್ತು ರಾಸಾಯನಿಕ ಬೆರೆಸಿರುವ ಪ್ರಕರಣ ಸಂಬAಧ ಈಗಾಗಲೇ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಜೊತೆ ಚರ್ಚೆ ನಡೆಸಿದ್ದು, ನಂದಿನಿ ಎಂಬುವುದು ರೈತರ ಬ್ರಾಂಡ್ ಆಗಿದ್ದು, ಕೆಎಂಎಫ್ ರೈತರ ಜೀವನಾಡಿಯಾಗಿ ಕೃಷಿ, ಬೇರೆ ಬೇರೆ ಉಪಕಸುಬುಗಳ ಜೊತೆ ಆದಾಯ ದ್ವಿಗುಣ ಮಾಡಿಕೊಳ್ಳಲು ಹೈನುಗಾರಿಕೆ ಸಹಾಯಕವಾಗಿದೆ. ಇದರ ನಡುವೆ ಕೆಲವು ಜನರು ನಮ್ಮ ವೈಯಕ್ತಿಕ ಲಾಭಕ್ಕಾಗಿ ಈ ಸಂಸ್ಥೆಯ ಹೆಸರು ಕೆಡಿಸುವ ಕೆಲಸ ಮಾಡಬಾರದು ಎಂದರು. ಈ ಬಗ್ಗೆ ಸಮಗ್ರ ತನಿಖೆ ಮಾಡಿ ಸಂಬAಧಪಟ್ಟ ಕಿಡಿಗೇಡಿಗಳಿಗೆ ಶಿಕ್ಷೆಯಾಗಬೇಕು ಹಾಗೂ ಸಂಸ್ಥೆಗಳು ಪಾರದರ್ಶಕವಾಗಿ ನಡೆಯಬೇಕು ಎಂದರು.
ಕೋವಿಡ್‌ನಿಂದಾದ ಆರ್ಥಿಕ ಬಿಕ್ಕಟ್ಟಿನಿಂದ ಕೆಲವು ಹನಿ ನೀರಾವರಿ ಯೋಜನೆಗಳಿಗೆ ಹಣ ಕಡಿಮೆಯಾಗಿತ್ತು. ಮುಖ್ಯಮಂತ್ರಿಗಳು, ಕೃಷಿ ಮತ್ತು ತೋಟಗಾರಿಕೆ ಸಚಿವರ ಭೇಟಿ ಮಾಡಿ ಮನವಿ ಮಾಡಿದ ಸಂದರ್ಭದಲ್ಲಿ ಅವುಗಳನ್ನು ವಾಪಾಸು ನೀಡಲಾಗಿದೆ ಎಂದರು.
ಈಗಾಗಲೇ ಕೃಷಿ ಇಲಾಖೆಯ ಸಂಬAಧಿದAತೆ ಶೇ.90 ಸಬ್ಸಡಿ ನೀಡಲಾಗಿದೆ. ಕೃಷಿ ಸಿಂಚಾಯಿ ಯೋಜನೆಯ ಉದ್ದೇಶದಂತೆ ಬರಗಾಲ ಪೀಡಿತ ಪ್ರದೇಶ ಜಿಲ್ಲೆಗಳನ್ನು ಗುರುತಿಸಿ ಹರಿದು ಹೋಗುವ ನೀರನ್ನು ಚೆಕ್ ಡ್ಯಾಂ, ಕೃಷಿ ಹೊಂಡಗಳ ಮೂಲಕ ನೀರನ್ನು ಹಿಡಿದಿಟ್ಟು ಅಲ್ಲಿಯೇ ಅಂರ್ತಜಲ ಹೆಚ್ಚು ಮಾಡುವ ನಿಟ್ಟಿನಲ್ಲಿ ಇಂಗುವ ರೀತಿಯ ಯೋಜನೆಗಳನ್ನು ಕೇಂದ್ರ ಸರ್ಕಾರ ಕೊಟ್ಟಿದೆ. ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಹನಿ ಹನಿ ನೀರು ಬಹಳ ಮುಖ್ಯ. ಹೀಗಾಗಿ ರೈತರು ನಮ್ಮ ಜೊತೆ ಕೈಜೋಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಈರಣ್ಣಕಡಾಡಿ ಅವರನ್ನು ಮಂಡ್ಯ ಜಿಲ್ಲಾ ರೈತಮೋರ್ಚಾ ಉಪಾಧ್ಯಕ್ಷರಾದ ಯಮದೂರು ಸಿದ್ದರಾಜು ಅವರು ತಾಲೂಕು ಬಿಜೆಪಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿದರು
ಪ್ರತಿಕಾಗೋಷ್ಠಿ ಯಲ್ಲಿ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಅಪ್ಪಾಜಿಗೌಡ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಚೇತನ್ ಕುಮಾರ್, ಮುಖಂಡರಾದ ಕೆ.ಸಿ.ನಾಗೇಗೌಡ, ರಾಜಣ್ಣ ಸೇರಿದಂತೆ ಹಲವರು ಇದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: