May 6, 2024

Bhavana Tv

Its Your Channel

ತಾ.ಪಂ ಆಡಳಿತಾಧಿಕಾರಿ ರಂಗೇಗೌಡರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ

ಮಳವಳ್ಳಿ : ಆಡಳಿತಾಧಿಕಾರಿ ಗಳ ಅಧ್ಯಕ್ಷತೆಯಲ್ಲಿ ಇಂದು ಕರೆಯಲಾಗಿದ್ದ ತಾಲೂಕು ಪಂಚಾಯ್ತಿಯ ಸಾಮಾನ್ಯ ಸಭೆಗೆ ಹಲವಾರು ಇಲಾಖಾ ಅಧಿಕಾರಿಗಳು ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಗೈರು ಹಾಜರಾಗಿದ್ದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಆಡಳಿತಾಧಿಕಾರಿಗಳು ಸೂಚಿಸಿದರು.
ಸಭೆ ಆರಂಭವಾಗುತ್ತಿದ್ದAತೆ ಹಲವಾರು ಇಲಾಖಾ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವ ಕುರಿತು ಅಸಮಧಾನ ವ್ಯಕ್ತಪಡಿಸಿದ ತಾ.ಪಂ ಆಡಳಿತಾಧಿಕಾರಿ ರಂಗೇಗೌಡ ಅವರು ಹಿಂದಿನ ಸಭೆಯಲ್ಲಿ ಈ ಕುರಿತು ಎಚ್ಚರಿಕೆ ನೀಡಿದ್ದರು ಸಹ ಅಧಿಕಾರಿಗಳು ಇದೇ ಚಾಳಿ ಮುಂದುವರಿಸಿದ್ದು ಅವರೆಲ್ಲರಿಗೂ ಶೋಕಾಸ್ ನೋಟಿಸ್ ನೀಡುವಂತೆ ಇಒ ರಾಮಲಿಂಗಯ್ಯ ಅವರಿಗೆ ಸೂಚಿಸಿದರು.
ಪಿ ಎಂ ಆರ್ ವೈ ಯೋಜನೆಯಡಿ ಸಹಾಯ ಧನಕ್ಕಾಗಿ 40 ಸಾವಿರ ಮಂದಿ ರೈತರು ಅರ್ಜಿ ಸಲ್ಲಿಸಿದ್ದು ಈ ಪೈಕಿ 13 ಸಾವಿರ ಮಂದಿ ರೈತರ ಅರ್ಜಿಗಳು ವಿವಿಧ ಕಾರಣಗಳಿಗಾಗಿ ತಿರಸ್ಕೃತ ಗೊಂಡಿದ್ದು ಅವುಗಳನ್ನು ಸರಿಪಡಿಸಿ ಪುನರ್ ಸಲ್ಲಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕರಾದ ಪರಮೇಶ್ ಸಭೆಗೆ ತಿಳಿಸಿದರು.
ಕೋವಿಡ್‌ಗೆ ಸಂಬAಧಿಸಿದAತೆ ಲಸಿಕೆ ನೀಡಿಕೆಯಲ್ಲಿ ಮಳವಳ್ಳಿ ತಾಲ್ಲೂಕು ಇಡೀ ಜಿಲ್ಲೆಯಲ್ಲೇ ಹಿಂದೆ ಉಳಿದಿರುವ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ವಿಷಯ ಪ್ರಸ್ತಾಪಿಸಿದ ಜಿಲ್ಲೆಯ ಕೋವಿಡ್ ಲಸಿಕಾ ವಿಭಾಗದ ಸಂಯೋಜಕರಾದ ಡಾ. ಸಂಜಯ್ ಅವರು ಜಿಲ್ಲೆಯ ಕೆಲ ತಾಲೂಕುಗಳು ಲಸಿಕೆ ನೀಡಿಕೆಯಲ್ಲಿ ಶೇಕಡ ನೂರರಷ್ಟು ಸಾಧನೆ ಮಾಡಿದ್ದರೆ ಇನ್ನೂ ಕೆಲವು ತಾಲೂಕುಗಳು ಶೇ 97- 98 ರಷ್ಟು ಸಾಧನೆ ಮಾಡಿವೆ ಆದರೆ ಮಳವಳ್ಳಿ ತಾಲ್ಲೂಕು ಮಾತ್ರ ಶೇ 91 ರಷ್ಟು ಮಾತ್ರ ಸಾಧನೆ ಮೂಲಕ ಜಿಲ್ಲೆಯಲ್ಲೇ ಕೊನೆಯ ಸ್ಥಾನದಲ್ಲಿದೆ ಎಂದು ವಿವರಿಸಿದರಲ್ಲದೆ ಈ ಅಂಶ ಕೂಡ ತಾಲ್ಲೂಕಿನಲ್ಲಿ ಕೋವಿಡ್ ಮೂರನೇ ಅಲೆ ಹೆಚ್ಚಿನ ಪ್ರಮಾಣದಲ್ಲಿ ಹರಡಲು ಕಾರಣವಾಗಿದೆ ಎಂದು ವಿವರಿಸಿದರು.
ಈ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಗೆ ಬರುವ ಜನರು ಲಸಿಕೆ ಪಡೆದಿರುವ ಕುರಿತು ಪರಿಶೀಲಿಸಿ ಶೇ ನೂರರಷ್ಟು ಸಾಧನೆಗೆ ಸಹಕರಿಸಬೇಕೆಂದು ಕೋರಿದರು.
ಇಒ ರಾಮಲಿಂಗಯ್ಯ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: