December 21, 2024

Bhavana Tv

Its Your Channel

ಮೋಟಾರ್ ರಿವೈಂಡಿOಗ್ ಅಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣ ಭೇದಿಸುವಲ್ಲಿ ಬೆಳಕವಾಡಿ ಪಿಎಸ್ ಐ ಅಶೋಕ್ ನೇತೃತ್ವದ ತನಿಖಾ ತಂಡ ಯಶಸ್ವಿ

ಮಳವಳ್ಳಿ : ತಾಲ್ಲೂಕಿನ ಬೆಳಕವಾಡಿ ಗ್ರಾಮದ ನಂದಿ ಮೋಟಾರ್ ರಿವೈಂಡಿAಗ್ ಅಂಗಡಿಯಲ್ಲಿ ಕಳೆದ ಜನವರಿ 22 ರ ರಾತ್ರಿ ನಡೆದಿದ್ದ ಕಳ್ಳತನ ಪ್ರಕರಣ ಭೇದಿಸುವಲ್ಲಿ ಬೆಳಕವಾಡಿ ಪಿಎಸ್ ಐ ಅಶೋಕ್ ನೇತೃತ್ವದ ತನಿಖಾ ತಂಡ ಯಶಸ್ವಿಯಾ ಗಿದೆ .
ಅಂದು ರಾತ್ರಿ ಅಂಗಡಿಯ ಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಅಂಗಡಿಯಲ್ಲಿದ್ದ ಮೋಟಾರ್ ಪಂಪ್‌ಗಳು ಹಾಗೂ ರಿವೈಂಡಿAಗ್‌ಗೆ ಬಳಸುವ ತಂತಿಯನ್ನು ಕಳುವು ಮಾಡಿಕೊಂಡು ಪರಾರಿಯಾಗಿದ್ದರು.
ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಪ್ರಸಾದ್, ಸಿಪಿಐ ಧನರಾಜ್ ಅವರ ಮಾರ್ಗದರ್ಶನ ದಲ್ಲಿ ತನಿಖೆ ಕೈಗೊಂಡ ಪಿಎಸ್ ಐ ಅಶೋಕ್, ಎ ಎಸ್ ಐ ರಾಜು, ಸಿಬ್ಬಂದಿಗಳಾದ ನಾಗೇಂದ್ರ, ಜಯಕುಮಾರ್, ನಿಂಗರಾಜು, ಅಜೀಮ್ ಪಾಷಾ, ಸುನಿಲ್ ಕುಮಾರ್ , ಮಹೇಂದ್ರ, ರವಿಕಿರಣ್, ಮಹೇಶ್ ಇವರನ್ನೊಳಗೊಂಡ ತಂಡ ಸಿಸಿಟಿವಿ ಪುಟೇಜ್ ಆಧಾರದ ಮೇಲೆ ತುಮಕೂರಿನ ವಾಸಿ ಸಮೀರ್ ಪಾಷಾ ಎಂಬಾತನನ್ನು ಬಂಧಿಸಿ ಬೆಳಕವಾಡಿಯ ಒಂದು ಅಂಗಡಿ ಅಲ್ಲದೆ ಕಿಕ್ಕೇರಿಯ ಎರಡು, ನಾಗಮಂಗಲ ಹಾಗೂ ಕೆಸ್ತೂರಿನ ತಲಾ ಒಂದು ಅಂಗಡಿ ಸೇರಿದಂತೆ ಒಟ್ಟು ಐದು ಕಡೆ ನಡೆದಿದ್ದ ಕಳ್ಳತನ ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿAದ 16 ದೊಡ್ಡ ಮೋಟಾರ್ ಗಳು, ಮೂರು ಚಿಕ್ಕ ಮೋಟಾರ್‌ಗಳು, ಆರು ಪಂಪ್ ಮೋಟಾರ್‌ಗಳು, 25 ಕೆ..ಜಿ ರಿವೈಂಡಿAಗ್ ವೈರ್ ಜೊತೆಗೆ ಈ ಕೃತ್ಯಕ್ಕೆ ಬಳಸಿದ್ದ ಒಂದು ಟಾಟಾ ಇಂಡಿಕಾ ಕಾರನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊAಡಿರುವ ಕಳುವು ಮಾಲಿನ ಮೌಲ್ಯ ಸುಮಾರು 3.58 ಲಕ್ಷ ರೂಗಳೆಂದು ಅಂದಾಜಿಸಲಾಗಿದೆ.
ಈ ಪ್ರಕರಣದ ಮತ್ತೊಬ್ಬ ಆರೋಪಿ ತಲೆ ಕರೆಸಿಕೊಂಡಿದ್ದು ಆತನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣ ಭೇದಿಸುವಲ್ಲಿ ಯಶಸ್ವಿ ಯಾಗಿರುವ ಬೆಳಕವಾಡಿ ಪೊಲೀಸರ ಕಾರ್ಯವನ್ನು ಎಸ್ಪಿ ಯತೀಶ್, ಎಎಸ್ಪಿ ವೇಣುಗೋಪಾಲ್ ಪ್ರಶಂಸಿದ್ದಾರೆ.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: