December 22, 2024

Bhavana Tv

Its Your Channel

ಎನ್ ಟಿ ಎಂ ಶಾಲೆ ಉಳಿವಿಗಾಗಿ ಕಾವಲುಪಡೆಯ ರಾಜ್ಯ ಅಧ್ಯಕ್ಷರಾದ ಎಂ ಮೋಹನ್ ಕುಮಾರ್ ಗೌಡರ ನೇತೃತ್ವದಲ್ಲಿ ಪ್ರತಿಭಟನೆ

ಮೈಸೂರು ತಾಲೂಕಿನ ನಂಜನಗೂಡು ನಂಜುAಡೇಶ್ವರನ ದೇವಾಲಯದ ಆವರಣದಲ್ಲಿ ಮೈಸೂರಿನ ಹೆಸರಾಂತ ಎನ್. ಟಿ.ಎಂ. ಶಾಲೆ ಉಳಿವಿಗಾಗಿ ಕರ್ನಾಟಕ ಕಾವಲು ಪಡೆಯ ರಾಜ್ಯ ಅಧ್ಯಕ್ಷರಾದ ಎಂ. ಮೋಹನ್ ಕುಮಾರ್ ಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ನಂತರ ಮಾತನಾಡಿದ ಅವರು ಎನ್ ಟಿ ಎಂ ಶಾಲೆ ಉಳಿಯಬೇಕು ಮತ್ತು ಸ್ವಾಮಿ ವಿವೇಕಾನಂದ ಸ್ಮಾರಕ ಆಗಬೇಕು ಎಂದು ಸಂಸದರಾದ ವಿ .ಶ್ರೀನಿವಾಸ್ ಪ್ರಸಾದ್ ರವರ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಮಾಡಲಾಯಿತು. ಚಕಾರ ಎತ್ತದೆ ಶಾಲೆಯನ್ನು ಉಳಿಸಬೇಕಿತ್ತು. ಈಗ ರಾಮಕೃಷ್ಣ ಆಶ್ರಮದವರು ಮಾತಿಗೆ ತಪ್ಪಿದ್ದಾರೆ. ಶಾಲೆಯನ್ನು ಉಳಿಸಿದಿದ್ದರೆ ಬೃಹತ್ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಾವಲು ಪಡೆಯ ತಾಲೂಕು ಅಧ್ಯಕ್ಷರಾದ ಅಬ್ದುಲ್ ಮಾಲಿಕ್, ಜಿಲ್ಲಾ ಅಧ್ಯಕ್ಷರಾದ ಪರಶಿವಮೂರ್ತಿ , ಜಿಲ್ಲಾ ಕಾರ್ಯಾಧ್ಯಕ್ಷರಾದ ಅಬ್ದುಲ್ ರಶೀದ್, ಜಿಲ್ಲಾ ಉಪಾಧ್ಯಕ್ಷರಾದ ಅಮೀರ್, ತಾಲೂಕು ಸಂಚಲಕರಾದ ಕುಂಜುಟ್ಟಿ ,ಕಾವಲು ಪಡೆಯ ಪದಾಧಿಕಾರಿಗಳಾದ ಸಾಧಿಕ್ ಪಾಷಾ, ಶಕೀಲ್, ಎಚ್ ರಾಜು, ಮಿಮಿಕ್ರಿ ರಾಜು, ಇಲಿಯಾಸ್ ಸೇರಿದಂತೆ ಹಲವಾರು ಸಂಘಟನೆಯ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: