January 25, 2022

Bhavana Tv

Its Your Channel

ಮತ್ತೂರಿನಲ್ಲಿ ಅಚ್ಚುಕಟ್ಟು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

ಶಿವಮೊಗ್ಗ:– ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಶಿವಮೊಗ್ಗ ತಾಲ್ಲೂಕು ಮತ್ತೂರು ಗ್ರಾಮದಲ್ಲಿ ಜಮೀನುಗಳಿಗೆ ಹೋಗುವ ಅಚ್ಚುಕಟ್ಟು ರಸ್ತೆ ಅಭಿವೃದ್ದಿ ಕಾಮಗಾರಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಶ್ರೀ ಪಟ್ಟಾಭಿರಾಮ ಅವರ ಸಮ್ಮುಖದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಈ ಸಮಯದಲ್ಲಿ ಮಾತನಾಡಿದ ಭಾನುಪ್ರಕಾಶ್ ಅವರು, ಭದ್ರಾ ಕಾಡಾ ವ್ಯಾಪ್ತಿಗೆ ರಾಜ್ಯ ಸರ್ಕಾರ ಸರಿ ಸುಮಾರು ಸಾವಿರಾರು ಕೋಟಿ ಅನುದಾನ ನೀಡಿದರು ರೈತರ ಭವಣೆ ತೀರಿದಷ್ಟು ಸಮಸ್ಯೆಗಳು ಬಾಕಿ ಇದ್ದು, ನೀಡಿದ ಅಲ್ಪ ಅನುದಾನದಲ್ಲಿ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಿತ್ತಿರುವ ನಿಮಗೆ ಅಭಿನಂದಿಸುತ್ತೇನೆ ಎಂದರು.

ಪಟ್ಟಾಭಿರಾಮ ಅವರು ಮಾತನಾಡಿ,  ರೈತರ ಸಮಸ್ಯೆಗಳನ್ನು  ಖುದ್ದು ಆಲಿಸುತ್ತಾ, ಸಮಸ್ಯೆ ಪರಿಹರಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಅವರೊಂದಿಗೆ ನಿಕಟವಾಗಿ ಸಂಪರ್ಕ ಹೊಂದಿರುವ ನಿಮ್ಮ ಕಾರ್ಯ ಶ್ಲಾಘನೀಯ, ಅನುದಾನದ ಕೊರತೆಯ ಮಧ್ಯೆಯು ಕೊನೆಯ ಭಾಗಕ್ಕೆ ಯಾವುದೇ ಅಡೆ ತಡೆ ಇಲ್ಲದೇ ನೀರು ತಲುಪಿಸಿರುವುದು ನಿಮ್ಮ ಕಾರ್ಯ ವೈಖರಿ ತೋರಿಸುತ್ತದೆ ಎಂದರು. 

error: