April 28, 2024

Bhavana Tv

Its Your Channel

ಅಕ್ಕಮಹಾದೇವಿ ಜನ್ಮ ಸ್ಥಳ ಉಡುತಡಿ ಗ್ರಾಮದಲ್ಲಿ 62 ಅಡಿ ಎತ್ತರದ ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣ.

ಶಿವಮೊಗ್ಗಾ;-– ಶಿಕಾರಿಪುರ ತಾಲ್ಲೂಕಿನ ಅಕ್ಕಮಹಾದೇವಿ ಜನ್ಮ ಸ್ಥಳ ಉಡುತಡಿ ಗ್ರಾಮದಲ್ಲಿ 62 ಅಡಿ ಎತ್ತರದ ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣ ಗೊಳಿಸಿದರು

ದೆಹಲಿ ಅಕ್ಷರಧಾಮ ಮಾದರಿಯ ಉದ್ಯಾನವನ ಹಾಗೂ ತಾಲ್ಲೂಕಿನ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಪೂಜ್ಯಶ್ರೀ ಮುರುಘರಾಜೇಂದ್ರ ಸ್ವಾಮೀಜಿಗಳು ಹಾಗೂ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಹಾಗೂ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಭದ್ರಾಅಚ್ಚುಕಟ್ಟುಪ್ರದೇಶಾಭಿವೃದ್ಧಿ_ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ ಶಿವಮೊಗ್ಗ ಸಂಸದರಾದ ಬಿ ವೈ ರಾಘವೇಂದ್ರ, ಹಾಗು ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್, ಹಾಗೂ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಹಾಗೂ ಸೊರಬ ಶಾಸಕರಾದ ಕುಮಾರ್ ಬಂಗಾರಪ್ಪ, ಹಾಗೂ ವಿಧಾನಪರಿಷತ್ ಸದಸ್ಯರುಗಳಾದ ರುದ್ರೇಗೌಡರು, ಹಾಗೂ ಶ್ರೀಮತಿ ಭಾರತಿ ಶೆಟ್ಟಿ, ಹಾಗೂ ಪಕ್ಷದ ಇನ್ನಿತರ ಮುಖಂಡರುಗಳು, ಹಾಗೂ ಮಠಾಧೀಶರುಗಳು, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

error: