December 22, 2024

Bhavana Tv

Its Your Channel

ಸಂಸದ ಜಿಎಸ್ ಬಸವರಾಜು ಕೋವಿಡ್೧೯ ಎರಡನೇ ಅಲೆಯ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಚರ್ಚೆ .

ಮಧುಗಿರಿ ; ಮಧುಗಿರಿ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸಂಸದ ಜಿಎಸ್ ಬಸವರಾಜು ರವರು ಕೋವಿಡ್೧೯ ಎರಡನೇ ಅಲೆಯ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಜಿಎಸ್ ಬಸವರಾಜು ಕೋವಿಡ್೧೯ ಮಧುಗಿರಿಯಲ್ಲಿ ಅತಿ ಹೆಚ್ಚು ಆಗಿದೆ, ಸಂಬAಧಪಟ್ಟ ಪಿಡಿಓಗಳು ಹಾಗೂ ವಿಲೇಜ್ ಅಕೌಂಟೆAಟ್ ಗಳು ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಎರಡು ದಿನಕ್ಕೆ ಒಂದು ಬಾರಿ ಟ್ರಾನ್ಸ್ಪೋರ್ಟ್ ಸಭೆಯನ್ನು ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದು ಹೇಳಿದರು.ಹಾಗೂ ಪ್ರಪಂಚಾದ್ಯAತ ಕೋವಿಡ್ ಮಹಾಮಾರಿ ವ್ಯಾಪಕವಾಗಿ ಹರಡಿದೆ. ಈ ಸಮಯದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಇಲ್ಲಸಲ್ಲದ ಅಪವಾದಗಳನ್ನು ನಿಲ್ಲಿಸಿ. ಎಲ್ಲರೂ ಕೊರೋನಾ ಮಹಾಮಾರಿಯನ್ನು ಓಡಿಸಲು ಕೈಜೋಡಿಸೋಣ ಎಂದು ಹೇಳಿದರು.
ವರದಿ: ಮಧುಸೂದನ್ ಮಧುಗಿರಿ, ತುಮಕೂರು

error: