March 13, 2025

Bhavana Tv

Its Your Channel

ಹೆಬ್ರಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ಹೆಬ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಿಲ್ಲಾಳಿ ವಾರ್ಡ್ ನಿಂದ ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತರಾದ ಶ್ರೀ ಪ್ರವೀಣ್ ಆಚಾರ್ಯ, ಶ್ರೀ ನಾಗರಾಜ ನಾಯಕ್ ಮತ್ತು ಶ್ರೀ ರಾಜೇಶ್ ನಾಯ್ಕರವರು ಏಪ್ರಿಲ್ 16 ಆದಿತ್ಯವಾರದಂದು ವಿ .ಸುನಿಲ್ ಕುಮಾರ್ ರವರ ವಿಕಾಸ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ವಿ. ಸುನಿಲ್ ಕುಮಾರ್ ರವರು ಬಿಜೆಪಿ ಪಕ್ಷದ ಧ್ವಜ ನೀಡಿ ಕಾಂಗ್ರೆಸ್ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ಮಹಾವೀರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್, ಹೆಬ್ರಿಯ ಬಿಜೆಪಿ ಪ್ರಮುಖರಾದ ಗುರುದಾಸ ಶೆಣೈ, ಜಯಕರ ಪೂಜಾರಿ, ಎಚ್ಕೆ ಸುಧಾಕರ, ಹೆಬ್ರಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ರಮೇಶ್ ಪೂಜಾರಿ, ಮಾಜಿ ಜಿ. ಪಂ. ಸದಸ್ಯರಾದ ಶ್ರೀಮತಿ ಜ್ಯೋತಿ ಹರೀಶ್ ಉಪಸ್ಥಿತರಿದ್ದರು.
ವರದಿ ; ಅರುಣ ಭಟ್, ಕಾರ್ಕಳ

error: