March 5, 2024

Bhavana Tv

Its Your Channel

ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ

ಉಡುಪಿ ; ಶ್ರೀ ಪುತ್ತಿಗೆ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸಂಕಲ್ಪದAತೆ ಪರ್ಯಾಯದ ಅಪೂರ್ವ ಯೋಜನೆ ಕೋಟಿ ಗೀತಾ ಲೇಖನ ಯಜ್ಞ ದೀಕ್ಷಾ ಅಭಿಯಾನದ ಅಂಗವಾಗಿ ಇದೇ ಬರುವ ಡಿಸೆಂಬರ್ 23, 24ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಆಯೋಜಿಸಲಾಗಿರುವ ಗೀತೋತ್ಸವ ಸಮಾರಂಭದ ಪೂರ್ವಭಾವಿಯಾಗಿ ಗೀತಾ ಪ್ರಚಾರದ ನಿಮಿತ್ತದಿಂದ ಗೀತಾ ರಥದ ಚಾಲನೆಯನ್ನು ನವಂಬರ್ 26 ಭಾನುವಾರದಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಶ್ರೀ ಗೋವರ್ಧನ ಕ್ಷೇತ್ರದಲ್ಲಿ ನೀಡಲಾಗುತ್ತಿದೆ. ರಾಜಕೀಯ ಧುರೀಣರಾದ ಶ್ರೀ ಎನ್ ಆರ್ ರಮೇಶ್ ಗೀತೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಕಾರ್ಯಾಧ್ಯಕ್ಷರಾದ ಪ್ರಸಿದ್ಧ ಆಹಾರ ತಜ್ಞ ಶ್ರೀಮತಿ ಡಾ|| ಎಚ್.ಎಸ್ ಪ್ರೇಮ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಚಾಲನೆ ಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಅಂದ ಗಾಣಿಸಿಕೊಡಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ .
ಕೋಟಿಗೀತಾ ಲೇಖನ ಯಜ್ಞ ಸಮಿತಿ ಭಾವಿ ಪರ್ಯಾಯ ಉಡುಪಿ ಶ್ರೀಪುತ್ತಿಗೆ ಮಠ ಬೆಂಗಳೂರು

error: