
ಕಾರ್ಕಳ ಸ:೧೨: ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಮೊದಲ ಬಾರಿ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಬೇಟಿ ನೀಡಿ ಶ್ರೀ ಶ್ರೀನಿವಾಸ, ವೆಂಕಟರಮಣ ದೇವರ ದರ್ಶನ ಗೈದು ಪೂಜೆ ಸಲ್ಲಿಸಿದರು.
ಬಳಿಕ ಪ್ರತಾಪ ಸಿಂಹ ನಾಯಕ್ ರವರನ್ನು ಶ್ರೀ ದೇವಳದ ಪರ್ಯಾಯ ಅರ್ಚಕರಾದ ಶ್ರೀ ಗಣೇಶ್ ಭಟ್, ಶ್ರೀ ಮಂಜುನಾಥ ಭಟ್, ರವೀಂದ್ರ ಪುರಾಣಿಕ್ ಮತ್ತು ಅನಿಲ್ ಜ್ಯೋಶಿ ಯವರು ಶಾಲು, ಫಲ ಪುಷ್ಪ, ಗಂಧ ಪ್ರಸಾದ ನೀಡಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರಾಧ್ಯಕ್ಷರಾದ ಮಹಾವೀರ ಹೆಗ್ಡೆ, ಕೈಗಾರಿಕೋದ್ಯಮಿ ಬೋಳ ಶ್ರೀನಿವಾಸ ಕಾಮತ್, ನಗರ ಬಿಜೆಪಿ ಅಧ್ಯಕ್ಷರಾದ ಅನಂತಕೃಷ್ಣ ಶೆಣೈ, ಪುರಸಭೆಯ ನಿಕಟ ಪೂರ್ವ ಸದಸ್ಯರಾದ ಕೆ.ಎಸ್ ಹರೀಶ್ ಶೆಣೈ, ಪ್ರಕಾಶ್ ರಾವ್, ಉದ್ಯಮಿಗಳಾದ ಸತ್ಯನಾರಾಯಣ ಕಾಮತ್, ಪಿ. ದಿನೇಶ್ ಪೈ, ಬೈಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಚ್ಚಿದಾನಂದ ಶೆಟ್ಟಿ, ವಿದ್ಯಾನಂದ ಕಾಮತ್ ಮತ್ತು ಬಿಜೆಪಿ ಕಾರ್ಯಕರ್ತ ವಿಜಯ ಸಪಳಿಗ ಉಪಸ್ಥಿತರಿದ್ದರು.
More Stories
ಕರಾವಳಿ ಕಾವಲು ಪಡೆಯ ಎಸ್ಐ ಅಣ್ಣಪ್ಪ ಮೊಗೇರ ಸೇವಾ ನಿವೃತ್ತಿ
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ