
ಕಾರ್ಕಳ ಡಿ:೨೫: ಕಾರ್ಕಳ ಶಾಸಕರ ಕಛೇರಿ ವಿಕಾಸದಲ್ಲಿ ಭಾರತದ ಮಾಜಿ ಪ್ರಧಾನಿ ವಿಶ್ವ ಕಂಡ ಶ್ರೇಷ್ಠ ನಾಯಕ, ಜನಸಂಘ ಹಾಗೂ ಭಾರತೀಯ ಜನತಾ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಕಾರ್ಕಳದ ಜನತೆಗೆ ತಿಳಿಸುವ ಮೂಲಕ ಪಕ್ಷದ ಹಿರಿಯರಾದ ಎಂ.ಕೆ ವಿಜಯಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀಯುತ ಎಂ.ಕೆ ವಿಜಯ ಕುಮಾರ್ ಮಾತನಾಡುತ್ತಾ ಅಟಲ್‌ಜೀ ಕೇವಲ ಅಜಾತ ಶತ್ರುವಲ್ಲ, ನಿಜಾರ್ತದಲ್ಲಿ ವಿಶ್ವ ಮಾನವ ಎಂಬುವುದಕ್ಕೆ ಅವರ ನಡೆ, ನುಡಿ ಶಾಕ್ಷಿ. ಅತ್ಯಂತ ಸರಳ ಜೀವನ ಶೈಲಿ ಅಳವಡಿಸಿಕೊಂಡಿದ್ದ ವಾಜಪೇಯಿ ಯಾರ ಮನಸ್ಸನ್ನು ನೋವಿಸಿದವರಲ್ಲ. ಪ್ರತಿಪಕ್ಷಗಳನ್ನು ಸಹ ಗೌರವಯುತವಾಗಿ ಕಾಣುತ್ತಿದ್ದರು. ೧೯೮೫ ರಲ್ಲಿ ಕಾರ್ಕಳಕ್ಕೆ ಭೇಟಿ ನೀಡಿ ಕಾರ್ಯಕರ್ತರಿಗೆ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರೇರಣೆ ನೀಡಿರುವುದು ಇವತ್ತಿಗೂ ಸ್ಮರಣೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರಾಧ್ಯಕ್ಷರಾದ ಮಹಾವೀರ ಹೆಗ್ಡೆ, ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್, ನಗರಾಧ್ಯಕ್ಷ ಅನಂತಕೃಷ್ಣ ಶೆಣೈ, ಮಾಜಿ ವಕ್ತಾರ ಕೆ.ಎಸ್ ಹರೀಶ್ ಶೆಣೈ, ಶಾಸಕರ ಆಪ್ತ ಕಾರ್ಯದರ್ಶಿ ಹರೀಶ್ ಅಂಚನ್, ಎಸ್.ಸಿ ಮೋರ್ಚಾ ಪ್ರಮುಖರಾದ ಶ್ರೀನಿವಾಸ ಕಾರ್ಲ ಮತ್ತಿತರರು ಉಪಸ್ಥಿತರಿದ್ದರು.
More Stories
ಕರಾವಳಿ ಕಾವಲು ಪಡೆಯ ಎಸ್ಐ ಅಣ್ಣಪ್ಪ ಮೊಗೇರ ಸೇವಾ ನಿವೃತ್ತಿ
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ