May 5, 2024

Bhavana Tv

Its Your Channel

ರಕ್ತದಾನ ದೇಶ ಸೇವೆಗೆ ಸಮಾನ : ಜೇಸಿ ಕೆ ನರೇಂದ್ರ ಶೇಟ್

ಬೈಂದೂರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು, ಜೇಸಿಐ ಬೈಂದೂರು ಸಿಟಿ, ಟೆಂಪೋ ಆಟೋರಿಕ್ಷಾ ಚಾಲಕರ ಮಾಲಕರ ಸಂಘ ಬೈಂದೂರು, ರಾಮಕ್ಷತ್ರಿಯ ಸಮಾಜ ಸಂಘ ಬೈಂದೂರು ಇದರ ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ಗುರುವಾರ ಬೈಂದೂರು ಸಮುದಾಯ ಆರೋಗ್ಯದಲ್ಲಿ ನಡೆಯಿತು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ ಸಿ ಸೌಕೂರು ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಬಹುತೇಕ ಜನರಲ್ಲಿ ರಕ್ತ ಕುರಿತಾಗಿ ವಿವರವಾದ ಮಾಹಿತಿ ಇಲ್ಲ, ಹೀಗಾಗಿ ಹಣ ಕೊಟ್ಟರೆ ಸಿಗುವಂತಹ ವಸ್ತು ಎಂಬ ಭಾವನೆ ಬಹುತೇಕ ಜನರ ಮನಸ್ಸಿನಲ್ಲಿದೆ, ಹಣ ಕೊಟ್ಟು ಪಡೆದ ರಕ್ತವು ಸಹ ಇನ್ನೊಬ್ಬರ ದೇಹದಿಂದ ಬಂದ ದೇಣಿಗೆ ಎಂಬ ಬಗ್ಗೆ ವಿವರವಾದ ಮಾಹಿತಿಗಳು ಸಾರ್ವಜನಿಕರಲ್ಲಿ ರವಾನೆಯಾಗಬೇಕಾಗಿದೆ ಎಂದರು.

ಜೇಸಿಐ ಬೈಂದೂರು ಸಿಟಿ ಅಧ್ಯಕ್ಷ ಜೇಸಿ ನರೇಂದ್ರ ಶೇಟ್ ಮಾತನಾಡಿ, ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದು ದೇಶ ಸೇವೆಗೆ ಸಮಾನವಾದ ಪ್ರಕ್ರಿಯೆ, ರಕ್ತದಾನದಿಂದ ಮಾತ್ರ ವೈದ್ಯಕೀಯ ಲೋಕ ಬಹಳಷ್ಟು ವರ್ಷಗಳ ಕಾಲ ಭದ್ರವಾಗಿರಲು ಸಾಧ್ಯ. ಮನುಷ್ಯನ ವಯಸ್ಸು ರಕ್ತದ ಶುದ್ಧತೆಯ ಮಾನದಂಡವಾಗಿದ್ದು ವಯೋವೃದ್ದರ ದೇಹದಿಂದ ರಕ್ತವನ್ನು ಪಡೆದರೂ ಸಹ ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ, ಅಷ್ಟಕ್ಕೂ ವಯೋವೃದ್ಧರ ದೇಹದಲ್ಲಿ ಅದಾಗಲೇ ರಕ್ತ ಸಂಬAಧಿ ಕಾಯಿಲೆಗಳು ಸಾಮಾನ್ಯವಾಗಿ ತಗುಲಿರುತ್ತವೆ ಹೀಗಾಗಿ ಅವರಲ್ಲಿ ರಕ್ತದ ಉತ್ಪದನಾ ಸಾಮರ್ಥ್ಯವೂ ಕೂಡ ಕಡಿಮೆಯಾಗಿರುತ್ತದೆ ಇದರಿಂದ ರೋಗಿಯ ದೇಹಕ್ಕೆ ಹಾಕಲು ಅಷ್ಟೊಂದು ಸೂಕ್ತವಾಗಿರುವುದಿಲ್ಲ ಈ ಎಲ್ಲ ಕಾರಣಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗಬೇಕು ಎಂದರು.

ಬೈAದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ರಕ್ತನಿಧಿ ಕೇಂದ್ರ ಉಡುಪಿ ವೈದ್ಯಾಧಿಕಾರಿ ಡಾ ಮಂಜುಶ್ರೀ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು ಮಕ್ಕಳ ತಜ್ಞ ಡಾ. ನಂದಿನಿ, ಬೈಂದೂರು ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ರಂಗ ಎಸ್ ಯಡ್ತರೆ, ರಾಮಕ್ಷತ್ರಿಯ ಸಮಾಜ ಸಂಘ ಬೈಂದೂರು ಅಧ್ಯಕ್ಷ ರಾಮಕೃಷ್ಣ ಸಿ, ಜೇಸಿಐ ಬೈಂದೂರು ಸಿಟಿ ಪೂರ್ವಾಧ್ಯಕ್ಷೆ ಪ್ರಿಯದರ್ಶಿನಿ ಕಮಲೇಶ್ ಬೆಸ್ಕೂರು ಇದ್ದರು.

ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಸಂತೋಷ್ ಸ್ವಾಗತಿಸಿದರು, ಬೈಂದೂರು ತಾಲೂಕಿ ಕ್ಷಯ ಘಟಕದ ಹಿರಿಯ ಚಿಕ್ಸಿತಾ ಮೇಲ್ವಿಚಾರ ಸಂದೀಪ್ ಕಾರ್ಯಕ್ರಮ ನಿರ್ವಹಿಸಿ/ವಂದಿಸಿದ್ದರು.

ವರದಿ : ಭಾವನಾ ಟಿವಿ ಎಚ್. ಸುಶಾಂತ್ ಬೈಂದೂರು

error: