ಬೈಂದೂರು: ಬಿಪರ್ ಜಾಯ್ ಚಂಡಮಾರುತದ ಎಫೆಕ್ಟ್ ಕರಾವಳಿ ಭಾಗದಲ್ಲಿ ಜೋರಾಗಿಯೇ ತಟ್ಟಿದ್ದು ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ, ಹಾಗೂ ಸಮುದ್ರದ ಅಲೆಗಳು ಬೊಬ್ಬೆರಿಯುತ್ತಿದೆ.
ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಮರವಂತೆ ಹಾಗೂ ಬೈಂದೂರು ಕುಂದಾಪುರ ಭಾಗದಲ್ಲಿ ಕಡಕ್ಕೊರೆತ ತೀವ್ರಗೊಂಡಿದೆ. ಮರವಂತೆ, ಗಂಗೊಳ್ಳಿ, ತ್ರಾಸಿ, ನಾಗೂರು, ಭಾಗದಲ್ಲಿ ಕಡಲೊರೆತದಿಂದ ದಡದಲ್ಲಿ ನಿರ್ಮಿಸಿದ ಕಲ್ಲು ಬಂಡೆಗಳ ತಡೆಗೋಡೆ, ಮನೆ ದೋಣಿ ಬಲೆ ಹಾಗೂ ಸಲಕರಣಿಗಳು ಸಮುದ್ರ ಪಾಲಾಗುತ್ತಿವೆ. ಪ್ರತಿ ವರ್ಷವೂ ಕಡಲ ತೀರದ ನಿವಾಸಿಗಳು ಆತಂಕದಲ್ಲಿ ದಿನದೂಡಬೇಕಾಗಿದೆ ತಕ್ಷಣ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು, ಮೀನುಗಾರಿಕಾ ಸಚಿವರು, ಸ್ಥಳಕ್ಕೆ ಆಗಮಿಸಿ ಸೂಕ್ತ ಪರಿಹಾರ ನೀಡಬೇಕೆಂದು ಮೀನುಗಾರ ಮುಖಂಡರು ಸಚಿವರಿಗೆ, ಸರ್ಕಾರಕ್ಕೆ, ಶಾಸಕರಿಗೆ ಮನವಿ ಮಾಡಿದರು.
ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ ಬೈಂದೂರು ಭಾಗದಲ್ಲಿ ಬಿಪರ್ ಜಾಯ್ ಚಂಡಮಾರುತದ ಎಫೆಕ್ಟ್ ತೀವ್ರಗೊಂಡಿದರಿAದ ಮೂರು ದಿನ ಬೆಂಗಳೂರು ಪ್ರವಾಸ ಮುಟುಕುಗೊಳಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರಕ್ಕಾಗಿ ಮೀನುಗಾರಿಕಾ ಸಚಿವರ ಜೊತೆ ಸಂಪರ್ಕದಲ್ಲಿದ್ದು ಸರಕಾರದ ಗಮನ ಸೆಳೆಯುತ್ತೇನೆ ಹಾಗೂ ಒಂದು ವೇಳೆ ಸರಕಾರ ಸ್ಪಂದಿಸದೆ ಇದ್ದರೆ ಮೀನುಗಾರ ಜೊತೆಗೂಡಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇನ್ನೆರಡು ದಿನದಲ್ಲಿ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿದರು.
ಮರವಂತೆ ಮೀನುಗಾರ ಸಮಿತಿ ಅಧ್ಯಕ್ಷರಾದ ವಾಸುದೇವಾ ಖಾರ್ವಿ ಮಾತನಾಡಿ ಕಳೆದ ವರ್ಷ ಕಡಲ್ ಕೊರೆತವನ್ನು ವೀಕ್ಷಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳು ಭೇಟಿ ನೀಡಿದರು ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ 600ಕ್ಕೂ ಹೆಚ್ಚು ತೆಂಗಿನ ಮರ ಕಡಲಬ್ಬರಕ್ಕೆ ಕೊಚ್ಚಿ ಹೋಗಿದೆ ರಸ್ತೆ ಸಂಪರ್ಕಗಳು ಕಳೆದುಕೊಂಡಿದೆ ಈ ಬಗ್ಗೆ ಶಾಸಕರ ಗಮನಕ್ಕೆ ತಂದು ಸಚಿವರ ಗಮನಕ್ಕೆ ತಂದಿದ್ದೇವೆ ಆದಷ್ಟು ಬೇಗ ತುರ್ತು ಕಾಮಗಾರಿಯಾಗಬೇಕಾಗಿ ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಬೈಂದೂರು ಮಂಡಲ ಅಧ್ಯಕ್ಷರು, ಜಿಲ್ಲಾ ಉಪಾಧ್ಯಕ್ಷರು, ಪಕ್ಷದ ಪ್ರಮುಖರು ಮುಖಂಡರು ಗ್ರಾಮ ಪಂಚಾಯತ್ ಸದಸ್ಯರು, ಮೀನುಗಾರಿಕೆ ಸೇವಾ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವರದಿ ಭಾವನಾ ಟಿವಿ ಎಚ್ ಸುಶಾಂತ್ ಬೈಂದೂರು
More Stories
ಮಕ್ಕಳಿಗಾಗಿ ಸಿದ್ಧ ಸಮಾಧಿ ಯೋಗ ಸಂಸ್ಕಾರ ಶಿಬಿರ ಮತ್ತು ಗಾಂಧಾರಿ ವಿದ್ಯೆ.
ಸೈಬರ್ ಜಾಗ್ರತಿ ಕಾರ್ಯಾಗಾರ
ಯು. ರಾಘವೇಂದ್ರ ಹೊಳ್ಳ ಅವರಿಗೆ ಬೀಳ್ಕೋಡಿಗೆ ಸಮಾರಂಭ