ಕಾರ್ಕಳ, ರೋಟರಿ ಅನ್ಸ್ ಕ್ಲಬ್ ಕಾರ್ಕಳ ಒಂದು ವರ್ಷದ ತಮ್ಮ ಅಧಿಕಾರವಧಿಯಲ್ಲಿ ೬೨೫ ಕಾರ್ಯಕ್ರಮಗಳನ್ನು ಮಾಡಿ ಜನರ ಪ್ರೀತಿಗೆ ಪಾತ್ರವಾಗಿದೆ ಎಂದು ರಮಿತಾ ಶೈಲೆಂದ್ರ ರಾವ್ ಮಾದ್ಯಮದವರಿಗೆ ಮಾಹಿತಿ ನೀಡಿದರು
ಕಳೆದ ಜೂನ್ ತಿಂಗಳಲ್ಲಿ ಅಧ್ಯಕ್ಷ ಅಧಿಕಾರ ಸ್ವೀಕರಿಸಿದ ಅನ್ಸ್ ರಮಿತಾ ಶೈಲೆಂದ್ರ ರಾವ್ ಮತ್ತು ಕಾರ್ಯದರ್ಶಿ ಅನ್ಸ್ ಸುಮನ ನಾಯಕ್ ಅವರ ತಂಡ ದಿನಕ್ಕೊಂದು ಸೇವೆ ಎಂಬ ಪ್ರತಿಜ್ಞೆಯನ್ನು ಹೊತ್ತು ಕಾರ್ಕಳ ದ ಪರಿಸರದಲ್ಲಿ ಅಲ್ಲದೆ ಹಲವಾರು ಆನ್ಲೈನ್ ಸ್ಪರ್ಧೆಗಳ ಮುಖಾಂತರ ರಾಜ್ಯದ ಮೂಲೆಮೂಲೆಗೂ ತಲುಪಿದ್ದೇವೆ ಎಂದು ಹೇಳಲು ಹೆಮ್ಮೆ ಪಡುತ್ತೇವೆ ಎಂದು ಸಂಸ್ಥೆಯ ಅಧ್ಯಕ್ಷೆಯಾದ ರಮಿತಾ ಶೈಲೆಂದ್ರ ರಾವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಜನರ ಒಟ್ಟುಗೂಡುವಿಕೆ ಸಾಧ್ಯವಿಲ್ಲದ ಕಾರಣ ಸಾಮಾಜಿಕ ಜಾಲತಾಣಗಳ ಮೂಲಕ ಹಲವಾರು ಪ್ರಮುಖ ವ್ಯಕ್ತಿಗಳ ಮುಖಾಂತರ ಜನರಿಗೆ ಮಾಹಿತಿ ಕಾರ್ಯಕ್ರಮಗಳನ್ನು ಮಾಡಿದ್ದು ಹತ್ತು ದಿವಸ ೨೦ ವಿಷಯ ಮಹಿಳೆಯರಿಗೆ ಟೈಲರಿಂಗ್ ಕ್ಲಾಸ್ ಭಗವದ್ಗೀತೆಯ ಎಲ್ಲಾ ಅಧ್ಯಾಯದ ಅರ್ಥಸಹಿತ ವಿವರಣೆಯನ್ನು ನುರಿತ ಶಿಕ್ಷಕರಿಂದ ನೀಡುವ ಪ್ರಯತ್ನ ಮಾಡಿದ್ದೇವೆ. ಹಲವಾರು ದಾನಿಗಳ ಸಹಾಯದಿಂದ ಕರುಣಾಳು ಬಾ ಬೆಳಕು ಎಂಬ ಅದ್ಭುತ ಕಾರ್ಯಕ್ರಮವನ್ನು ಮಾಡಿ ಕಾರ್ಕಳದ ೩೫ ಮನೆಗಳಿಗೆ ಸೋಲಾರ್ ಲೈಟ್ ನೀಡುವ ಮುಖ್ಯನ ಬೆಳಕೆ ಇಲ್ಲದ ಮನೆಯಲ್ಲಿ ಬೆಳಕನ್ನು ಮೂಡಿಸಿದ್ದೇವೆ. ಸುವರ್ಣ ನದಿಯ ಜಾಗೃತಿಯ ಬಗ್ಗೆ ನಡೆದ ಸ್ವರ್ಣ ರಾಧನ ಕಾರ್ಯಕ್ರಮ ಕ್ಯಾನ್ಸರ್ ಪೀಡಿತ ಮಹಿಳೆಯರಿಗೆ ಕೇಶ ದಾನ ಮಾಡುವಂತ ಕಾರ್ಯಕ್ರಮ ಹಾಗೂ ಉಚಿತ ವಿಗ್ ನೀಡುವ ಕಾರ್ಯಕ್ರಮವನ್ನುಮಾಡಿದ್ದೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಸುಮಾ ನಾಯಕ್,ಸಂಚಾಲಕರು ಅರುಣ ಶೆಟ್ಟಿ,ಜೊತೆ ಕಾರ್ಯದರ್ಶಿ ಗಾಯತ್ರಿ ವಿಜೇಂದ್ರ, ಪದ್ಮಜ, ಸುವರ್ಣ ನಾಯಕ್ ಉಪಸ್ಥಿತರಿದ್ದರು
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ