May 4, 2024

Bhavana Tv

Its Your Channel

ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಗುದ್ದಲಿ ಪೂಜೆ ನೆರವೇರಿಸಿದ ಸಚಿವ ವಿ ಸುನಿಲ್ ಕುಮಾರ್

ಕಾರ್ಕಳ:- ಈದು ಗ್ರಾಮದ ಇಂಜಿನಡ್ಕ ಎಂಬಲ್ಲಿ ರೂ. ೧ಕೋಟಿ ೨೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಹಾಗೂ ಈದು ಗುತ್ತು ಬಳಿ ರೂ. ೭೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟುಗಳನ್ನು ಕರ್ನಾಟಕ ಸರ್ಕಾರದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ ಸುನಿಲ್ ಕುಮಾರ್ ಲೊಕಾರ್ಪಣೆ ಮಾಡಿದರು.
ಮಂಗಳಪಾರ್ಮ್ ಬಳಿಯಿಂದ ನೂರಾಳ್ ಬೆಟ್ಟು ಗ್ರಾಮದ ಪೆಲತ್ತಕಟ್ಟೆ, ಮುಜಿಲೆ ಸಂಪರ್ಕಿಸುವ ರೂ ೧ ಕೋಟಿ ವೆಚ್ಚದ ರಸ್ತೆ ಕಾಂಕ್ರಿಟೀಕರಣದ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಬಳಿಕ ಪಿಲತಕಟ್ಟೆ ಸಂಜೀವ ಮೂಲ್ಯರವರ ಮನೆಯಂಗಳದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ಗ್ರಾಮಾಂತರ ಪ್ರದೇಶಗಳಲ್ಲಿ ಸುಗಮ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ಸಂಪೂರ್ಣವಾಗಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುತ್ತಿದ್ದು ೨ ವರ್ಷಗಳಲ್ಲಿ ಎಲ್ಲಾ ಪ್ರಮುಖ ರಸ್ತೆಗಳ ಕಾಂಕ್ರಿಟೀಕರಣ ಮಾಡುವುದಾಗಿ ತಿಳಿಸಿದರು.
ಈ ಮಧ್ಯೆ ಅಕಾಲಿಕ ಮರಣ ಹೊಂದಿದ ರವಿ ಪೂಜಾರಿ ಇಂಜಿನಡ್ಕ ಇವರ ಮನೆಗೆ ಭೇಟಿ ನೀಡಿ ಪತ್ನಿ , ಪುತ್ರರಿಗೆ ಸಾಂತ್ವನ ಹೇಳಿದರು.
ಬಿಡುವಿಲ್ಲದ ಕಾರ್ಯಕ್ರಮದ ಮಧ್ಯೆ ಜಿಲ್ಲಾ ಪಂಚಾಯಿತ್ ಉಡುಪಿ ಇದರ ವತಿಯಿಂದ ಹೆಬ್ಬಾರಬೆಟ್ಟು ಎಂಬಲ್ಲಿ ರೂ.೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆ ಕಾಂಕ್ರಿಟೀಕರಣವನ್ನು ಪರಿಶೀಲಿಸಿ ಹೊಸ್ಮಾರು ಬಲ್ಯೊಟ್ಟು ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ನಾರಾಯಣ ಗುರು ಸಭಾಭವನದ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಉದಯ್ ಎಸ್ ಕೋಟ್ಯಾನ್, ದಿವ್ಯಶ್ರೀ ಗಿರೀಶ್ ಅಮಿನ್, ಮಾಜಿ ತಾಲೂಕ್ ಪಂಚಾಯತ್ ಸದಸ್ಯರಾದ ಮಂಜುಳಾ ವಿಶ್ವನಾಥ್, ಎಪಿಎಂಸಿ ಸದಸ್ಯರಾದ ಮಾಪಾಲು ಜಯವರ್ಮ ಜೈನ್, ನಾರಾಯಣ ಸುವರ್ಣ, ಪಂಚಾಯತ್ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷರಾದ ವಿಜಯ್ ಕುಮಾರ್, ಬಿಜೆಪಿ ಪಕ್ಷದ ಪ್ರಮುಖರಾದ ಮಹಾವೀರ ಜೈನ್, ನವೀನ್ ನಾಯಕ್, ಶ್ರೀಧರ ಗೌಡ ಮುಂತಾದವರು ಉಪಸ್ಥಿತಿದ್ದರು.
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುರುಷೋತ್ತಮ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ವರದಿ: ಅರುಣ ಭಟ್ ಕಾರ್ಕಳ

error: