April 17, 2025

Bhavana Tv

Its Your Channel

ಪೆರ್ವಾಜೆ ಕಜಲ ಕಲದ ಸೋಲಾರ್ ದೀಪದ ಉದ್ಘಾಟನಾ ಸಮಾರಂಭ

ಕಾರ್ಕಳ: ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ (ರಿ.) ಮತ್ತು ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲ (ರಿ.), ಪತ್ತೊಂಜಿಕಟ್ಟೆ, ಪೆರ್ವಾಜೆ, ಕಾರ್ಕಳ ಹಾಗೂ ದಾನಿಗಳ ಸಹಾಯದಿಂದ ಪೆರ್ವಾಜೆ ಹನಿಮುಗೇರ, ಹಲೇರ ಪಂಜುರ್ಲಿ ದೈವಸ್ಥಾನದ (ಕಜಲ ಕಲ)ಆವರಣದಲ್ಲಿ ಅಳವಡಿಸಲಾದ ಸೋಲಾರ್ ದೀಪದ ದೀಪಸ್ತಂಭದ ಉದ್ಘಾಟನಾ ಕಾರ್ಯಕ್ರಮವು ಶನಿವಾರ ಕಜಲ ಕಲದ ಆವರಣದಲ್ಲಿ ಜರುಗಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಾರ್ಕಳದ ಖ್ಯಾತ ನ್ಯಾಯವಾದಿ ಎಂ.ಕೆ.ವಿಜಯಕುಮಾರ್ ಸೋಲಾರ್ ದೀಪವನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು…

ಈ ಸಂದರ್ಭದಲ್ಲಿ ಯುವಕ ಮಂಡಲ ಅಧ್ಯಕ್ಷರಾದ ಪ್ರಸಾದ್ ದೇವಾಡಿಗ, ಕಾರ್ಯದರ್ಶಿ ದಿನೇಶ್ ಕೊರಳಕೋಡಿ, ಕೋಶಾಧಿಕಾರಿ ಪ್ರಸನ್ನ ರಾವ್, ಮಹಿಳಾ ಮಂಡಲದ ಅಧ್ಯಕ್ಷೆ ಅಮ್ರತಾ ಭಾಸ್ಕರ್ ಶೆಟ್ಟಿ, ಕಾರ್ಯದರ್ಶಿ ವೀಣಾ ರಾಜೇಶ್, ಸಂಘದ ಗೌರವ ಸಲಹೆಗಾರರು, ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು..

ವರದಿ: ಅರುಣ ಭಟ್ ಕಾರ್ಕಳ

error: