
ಕಾರ್ಕಳ ಪುರಸಭಾ ಸದಸ್ಯ ಶುಭದ ರಾವ್ ನೇತೃತ್ವದಲ್ಲಿ ಬಸ್ಸ್ ಏಜೆಂಟರ ಬಳಗದ ಪದಾದಿಕಾರಿಗಳು, ಟ್ಯಾಕ್ಸಿ ಯೂನಿಯನ್ ಪದಾದಿಕಾರಿಗು ಸೇರಿ ಸುಮಾರು ಐವತ್ತಕ್ಕೂ ಹೆಚ್ಚು ಜನ ಕಾರ್ಕಳದಿಂದ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಸುರತ್ಕಲ್ ಟೋಲ್ ಬಳಿ ಸಾವಿರಾರು ಜನರು ಜಮಾಯಿಸಿ ವಿರೋದ ವ್ಯಕ್ತ ಪಡಿಸಿದರು, ಪೋಲಿಸರ ತಡೆಯನ್ನು ಲೆಕ್ಕಿಸದೇ ಮುನ್ನುಗ್ಗಿದರು, ಟೋಲ್ ಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಇವರ ಜೊತೆಗೆ, ಶುಭದರಾವ್, ಇಕ್ಬಾಲ್ ಅಹಮ್ಮದ್, ಬಾಲಕೃಷ್ಣ ದೇವಾಡಿಗ, ಹರೀಶ್ ಪೂಜಾರಿ ಮೊದಲಾದವರನ್ನು ಬಂಧಿಸಿದ ಪೋಲೀಸರು ಪಾಂಡೇಶ್ವರ ಠಾಣೆಗೆ ಕರೆದುಕೊಂಡು ಬಂದನದಲ್ಲಿರಿಸಿದರು, ಬೇರೆ ಬೇರೆ ಠಾಣೆಯಲ್ಲಿ ಬಂಧನಕ್ಕೊಳಗಾದ ಪ್ರತಿಭಟನಾಕಾರರನ್ನು ಒಂದೇ ಕಡೆ ಇರಿಸಿ ಮಾತನಾಡಲು ಅವಕಾಶ ನೀಡಬೇಕು ಎಂದು ಪ್ರತಿಭಟನಾಕಾರರು ಮಾಡಿದ ಮನವಿಗೆ ಸ್ಪಂದಿಸಿದ ಕಮಿಷನರ್ ಶಶಿಕುಮಾರ್ ಎಲ್ಲರನ್ನು ಸುರತ್ಕಲ್ ಬಂಟರ ಭವನಕ್ಕೆ ಸ್ಥಳಾಂತರಿಸಿದರು, ಅನಂತರ ಪ್ರತಿಭಟನಾಕಾರರನ್ನು ಬೇಷರತ್ ಬಿಡುಗಡೆ ಮಾಡಲಾಯಿತು.
ವರದಿ: ಅರುಣ ಭಟ್ ಕಾರ್ಕಳ
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ