May 15, 2024

Bhavana Tv

Its Your Channel

ಆಶಯ ಸೌಹಾರ್ದ ಸಹಕಾರ ಸಂಘದಲ್ಲಿ ಇ ಸ್ಟ್ಯಾಂಪಿoಗ್ ಸೇವೆಯ ಲೋಕಾರ್ಪಣೆ

ಕಾರ್ಕಳ ಪುರಸಭಾ ಕಟ್ಟಡದ ಮುಂಭಾಗದಲ್ಲಿರುವ ಶ್ರೇಯಸ್ ಕಟ್ಟಡದ ಪ್ರಥಮ ಮಹಡಿಯಲ್ಲಿರುವ ಆಶಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯಲ್ಲಿ ಜನತೆಯ ಉಪಯೋಗಕ್ಕಾಗಿ ಇ – ಸ್ಟ್ಯಾಂಪಿAಗ್ ಸೇವೆಯ ಲೋಕಾರ್ಪಣೆಯ ಕಾರ್ಯಕ್ರಮವು ದಿನಾಂಕ 18/10/2022 ಮಂಗಳವಾರ ಸಂಜೆ 5.00 ಘಂಟೆಗೆ ಜರಗಿತು.ಇದೇ ಸಂದರ್ಭದಲ್ಲಿ ಕಾರ್ಕಳ ವಕೀಲರ ಸಂಘ ಹಾಗೂ ಆಶಯ ಸೌಹಾರ್ದ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಮುದ್ರಾoಕ ಹಾಗೂ ನೋಂದಣಿ ಕಾನೂನಿನ ಬಗ್ಗೆ ಅರಿವು, ನೆರವು ಹಾಗೂ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಯಿತು.
ಕಾರ್ಕಳ ವಕೀಲರ ಸಂಘದ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿ ಶ್ರೀ ಸುನಿಲ್ ಕುಮಾರ್ ಶೆಟ್ಟಿಯವರು ಆಶಯ ಸೌಹಾರ್ದ ಸಹಕಾರಿ ಸಂಘದ ಇ ಸ್ಟ್ಯಾಂಪಿAಗ್ ಸೇವೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಆಶಯ ಸೌಹಾರ್ದ ಸಹಕಾರ ಸಂಸ್ಥೆಯು ಕಾರ್ಕಳ ನಗರದ ಬಸ್ ನಿಲ್ದಾಣದ ಪಕ್ಕದಲ್ಲಿ ಕಾರ್ಕಳದ ಹೃದಯ ಭಾಗದಲ್ಲಿ ಈ ರೀತಿಯ ಜನಸೇವಾ ಕಾರ್ಯಕ್ರಮ ಆರಂಭಿಸಿರುವುದು ಅತ್ಯಂತ ಶ್ಲಾಘನೀಯ, ಈ ಸೇವೆಯ ಉಪಯೋಗವನ್ನು ಜನತೆಯು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಲಿ ಎಂದು ಆಶಿಸಿದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ನ್ಯಾಯವಾದಿ ಶ್ರೀ ಮುರಳೀಧರ ಭಟ್ ಅವರು ಮುದ್ರಾoಕ ಹಾಗೂ ನೊಂದಣಿ ಕಾನೂನಿನ ಬಗ್ಗೆ ಅರಿವು ಹಾಗೂ ಮಾಹಿತಿಯನ್ನು ನೀಡಿದರು. ಈ ಕಾನೂನಿನ ಪೂರ್ಣ ಮಾಹಿತಿ ಹಾಗೂ ಅರಿವಿನೊಂದಿಗೆ ಸಾರ್ವಜನಿಕರು ಮುದ್ರಾoಕವನ್ನು ಉಪಯೋಗಿಸಿದಲ್ಲಿ ನಾಗರೀಕರಿಗೆ ಹಾಗೂ ಸರಕಾರಕ್ಕೆ ಒಳಿತಾಗುವುದು ಎಂದು ಹೇಳಿದರು. ಸರಿಯಾದ ಅರಿವಿನೊಂದಿಗೆ ಕಾರ್ಯ ನಿರ್ವಹಿಸಿದಲ್ಲಿ ಅನೇಕ ಲೋಪದೋಷಗಳನ್ನು ತಡೆಯಬಹುದು ಎಂದು ಅವರು ಅಭಿಪ್ರಾಯ ಪಟ್ಟರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಆಶಯ ಸಹಕಾರಿ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಶ್ರೀ ಎಂ. ಕೆ.ಸುವ್ರತ್ ಕುಮಾರ್ ರವರು ಮಾತನಾಡಿ ಸಹಕಾರಿಯು ಈಗಾಗಲೇ ತನ್ನ ಮೂಡಬಿದ್ರಿ ಶಾಖೆಯಲ್ಲಿ ಇ ಸ್ಟ್ಯಾಂಪಿAಗ್ ಸೇವೆಯನ್ನು ತನ್ನ ಸದಸ್ಯರಿಗೆ ಅತ್ಯಂತ ವ್ಯವಸ್ಥಿತವಾಗಿ ನೀಡುತ್ತಿದೆ ನಮ್ಮ ಸಹಕಾರಿಯ ಸಿಬಂದಿ ಗಳು ಇ ಸ್ಟ್ಯಾಂಪಿAಗ್ ಸೇವೆಯ ಶೀಘ್ರ, ಸುಲಭ ಹಾಗೂ ಸರಳ ಸೇವೆಗಾಗಿ ವೃತ್ತಿಪರ ತರಭೇತಿಯನ್ನು ಪಡೆದಿದ್ದು ಸಾರ್ವಜನಿಕರ ಸೇವೆಗಾಗಿ ನಮ್ಮ ಸಹಕಾರಿಯು ಸದಾ ಕಾತರವಾಗಿರುತ್ತದೆ ಎಂದು ತಿಳಿಸಿದರು. ಈಗಾಗಲೇ ನಮ್ಮ ಸಂಸ್ಥೆಯು ಒಕ್ಸಿಜೆನ್ ಕಾನ್ಸೆನ್ಟ್ರೇಷನ್ ಬ್ಯಾಂಕ್ ನಂತ ವಿಶೇಷ ಸೇವಾ ಕಾರ್ಯಕ್ರಮವನ್ನು ಆಯೋಜಿಸಿದ್ದು ಸದಸ್ಯರು ಹಾಗೂ ಜನತೆ ನಮ್ಮ ಸೇವಾ ಸೌಲಭ್ಯಗಳನ್ನು ಉಪಯೋಗಿಸಲು ಮುಕ್ತ ಅವಕಾಶವಿದೆ ಎಂದರು ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವಾ ಚಟುವಟಿಕೆಗಳನ್ನು ನಮ್ಮ ಆಶಯ ಸೌಹಾರ್ದ ಸಹಕಾರಿ ಸಂಸ್ಥೆಯು ಹಮ್ಮಿಕೊಳ್ಳಲಿದೆ ಎಂದರು.
ಈ ಸಂದರ್ದಲ್ಲಿ ಕಾರ್ಕಳ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ನ್ಯಾಯವಾದಿ ಶ್ರೀ ಪದ್ಮ ಪ್ರಸಾದ್ ಹಾಗೂ ಕೆನರಾ ಬ್ಯಾಂಕಿನ ಕಾರ್ಕಳ ಶಾಖೆಯ ಶಾಖಾ ವ್ಯವಸ್ಥಾಪಕರಾದ ಶ್ರೀ ಕೆ ಪಿ ಶ್ರೀಕಾಂತ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಹಿರಿಯ ನ್ಯಾಯವಾದಿ ಶ್ರೀ ಎಂ. ಕೆ. ವಿಜಯ್ ಕುಮಾರ್ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ನಿರ್ದೇಶಕರಾದ ಶ್ರೀ ನಿರಂಜನ್ ಕುಮಾರ್ ಜೈನ್ ರವರು ನಿರ್ವಹಿಸಿದರು. ಸಂಸ್ಥೆಯ ಸಿಬಂದಿ ಶ್ರೀ ಮಂಜುನಾಥ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಸಲಹಾ ಸಮಿತಿ ಸದಸ್ಯರು ಮತ್ತು ಮಾಜಿ ಪುರಸಭಾ ಸದಸ್ಯರಾದ ಶ್ರೀ ಪ್ರಕಾಶ್ ರಾವ್ ವಂದನಾರ್ಪಣೆ ಮಾಡಿದರು
ಕಾರ್ಯಕ್ರಮದಲ್ಲಿ ಆಶಯ ಸೌಹಾರ್ದ ಸಹಕಾರಿ ಸಂಸ್ಥೆಯ ಉಪಾಧಕ್ಷರಾದ ರಾಬರ್ಟ್ ರೋನಾಲ್ಡ್ ಫೆರ್ನಾಂಡಿಸ್, ನಿರ್ದೇಶಕರಾದ ಡೆನಿಸ್ ಪಿರೇರಾ, ಮುಖ್ಯ ಆರ್ಥಿಕ ಸಲಹಗಾರರಾದ ಶ್ರೀ ಎ ಮೋಹನ್ ಪಡಿವಾಲ್, ಸಲಹಾ ಸಮಿತಿಯ ಸದಸ್ಯರಾದ ಪ್ರಭಾತ್ ಏನ್, ಶ್ರೀ ವಿಜಯ ಕಡ್ತಲ, ಶಶಿಕಲಾ ಹೆಗ್ಡೆ, ಶ್ರೀ ಮೋಹನ ಶೆಣೈ ,ಮುಖ್ಯi ಕಾರ್ಯ ನಿರ್ವಹಣಧಿಕಾರಿ ಶಶಿಶೇಖರ್ ರಾವ್, ಶಾಖಾ ವ್ಯವಸ್ಥಾಪರಾದ ರಾಜಾರಾಮ್ ಹೆಗ್ಡೆ ಹಾಗೂ ಸಂಸ್ಥೆಯ ಸದಸ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: