
ಕಾರ್ಕಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಿರಿಯಂಗಡಿ ಕಾರ್ಕಳದಲ್ಲಿ ಕಾರ್ತೀಕ ದೀಪೋತ್ಸವ ದಿನಾಂಕ 08/11/2022 ರಂದು ಮಂಗಳವಾರ ಧಾರ್ಮಿಕ ವಿಧಿವಿಧಾನದಲ್ಲಿ ನಡೆಯಿತು
ನವಕಪ್ರಧಾನ ಹೋಮ, ಮಹಾಪೂಜೆ, ಅನ್ನಸಂತರ್ಪಣೆ, ರಂಗಪೂಜೆ ಉತ್ಸವ ಬಲಿ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಭಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಗಿರೀಶ್ ರಾವ್,ಕಾರ್ಯಕ್ರಮದ ಉದ್ಘಾಟಕರು ಅಧ್ಯಕ್ಷರು ಕರ್ನಾಟಕ ಮರಾಠ ಸಮುದಾಯದ ಅಭಿವೃದ್ದಿ ನಿಗಮ ನಿಯಮಿತ ಕರ್ನಾಟಕ ಸರ್ಕಾರ ಡಾ.ಎಂ.ಜಿ.ಮೂಳೆ, ಮುಖ್ಯ ಅತಿಥಿ ತೀರ್ಥಹಳ್ಳಿ ಸಾರ್ವಜನಿಕ ಸಂಪರ್ಕಾಧಿಕಾರಿ ,ಮಂಗಳೂರು,/ಕಾಸರಗೊಡು ವಿನಯ್ ಜಾಧವ್ , ರಮೇಶ್ ರಾವ್ ಬೆಂಗಳೂರು, ಯೂನಿವರ್ಸಲ್ ಸೌಹಾರ್ದ ಸಹಕಾರಿ ನಿಯಮಿತ ಉಡುಪಿಯ ಅಧ್ಯಕ್ಷರಾದ ಮದ್ವೇಶ್ ಬಹುಮಾನ್, ಶುಭದ ರಾವ್,ಗುರುಪ್ರಸಾದ್ ರಾವ್,ಹಾಗೂ ಎಲ್ಲಾ ಪದಾಧಿಕಾರಿಗಳು, ಉಪಸ್ಥಿತರಿದ್ದರು.
ಕ್ಷೇತ್ರದ ತಂತ್ರಿಗಳಾದ ಏಡಪದವು ಶ್ರೀ .ಬಿ.ಸುಬ್ರಮಣ್ಯ ತಂತ್ರಿ ಹಾಗೂ ಪ್ರಧಾನ ಅರ್ಚಕರು ಕೈಲಾಜೆ ದಿನೇಶ್ ಭಟ್,ಅನಿಲ್ ಭಟ್,ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಎಲ್.ಸಿ,ಪಿಯಸಿಯಲ್ಲಿ ಗರಿಷ್ಟ ಅಂಕ ಪಡೆದವರಿಗೆ ಸನ್ಮಾನ ಕಾರ್ಯಕ್ರಮ,ನವರಾತ್ರಿ ಮಹೋತ್ಸವ ಅನ್ನದಾನ ಸೇವಾ ದಾರರಿಗೆ ಗೌರವಾರ್ಪಣೆ ,ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ಷೇತ್ರದಲ್ಲಿ ನಡೆಯಿತು.
ವರದಿ: ಅರುಣ ಭಟ್ ಕಾರ್ಕಳ
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ