
ಕಾರ್ಕಳದಲ್ಲಿ ವಿನೂತನ ಕೆಲಸಗಳಿಂದಲೇ ಪ್ರಸಿದ್ಧವಾದ ಸ್ವಚ್ಛ ಕಾರ್ಕಳ ಬ್ರಿಗೇಡ್ ನ ವಿಶೇಷ ಅಭಿಯಾನ ಸ್ವಚ್ಛ ಮಾರ್ಗಮ್ ” ನಮ್ಮ ರಸ್ತೆ -ಸ್ವಚ್ಛ ರಸ್ತೆ” ಎಂಬ 4ನೇ ಅವತರಣಿಕೆ ಭಾನುವಾರ ನಡೆಯಿತು
ಡಿಸಂಬರ್ 18, ಭಾನುವಾರ ಬೆಳಗ್ಗೆ 6.30 ಯಿಂದ 8.00 ವರೆಗೆ, ಕಾಳಿಕಾಂಬಾ ದೇವಸ್ಥಾನ ರಸ್ತೆಯ ಹೆಗ್ಡೆ ಹಾಡ್ವೇðರ್ ಕ್ರಾಸ್ ನಿಂದ ಕರಿಯಕಲ್ಲು ಜಂಕ್ಷನ್ವರೆಗೆ ಸ್ವಚ್ಛತಾ ಕಾರ್ಯ ನಡೆಯಿತು, “ಸ್ವಚ್ಛ ಕಾರ್ಕಳ ಬ್ರಿಗೇಡ್” ಸದಸ್ಯರಾದ ವಸಂತ್ ಮಾಸ್ಟರ್, ಪ್ರಕಾಶ್ ರಾವ್, ಸುರೇಶ್ ಕುಲಾಲ್ ರವರ ಮುಂದಾಳತ್ವದಲ್ಲಿ ನಡೆಯಿತು.ಇವರ ಜೊತೆ ಂಓಈ ನಕ್ಸಲ್ ನಿಗ್ರಹ ಪಡೆ,ಕಾರ್ಕಳ, ಬಜರಂಗ ದಳ ವೀರ ಮಾರುತಿ ಶಾಖೆ ಕರಿಯಕಲ್ಲು, ಗ್ಯಾರೇಜ್ ಮಾಲೀಕರ ಸಂಘ ಹಾಗೂ 13 ಮತ್ತು 14 ವಾರ್ಡ್ ನ ನಾಗರಿಕರು ಸ್ವಚ್ಛತೆಯಲ್ಲಿ ಕೈ ಜೋಡಿಸಿದರು.
ಕಾರ್ಯಕ್ರಮದ ನಂತರ ಬ್ರಿಗೇಡ್ ಸದಸ್ಯರಾದ ಪ್ರಕಾಶ್ ರಾವ್ ಮತ್ತು ವಸಂತ್ ಮಾಸ್ಟರ್ ರವರು ನೆರೆದಿದ್ದ ಸ್ಥಳೀಯರಿಗೆ ಸ್ವಚ್ಛತೆಯ ಅರಿವು ಮೂಡಿಸಿದರು ಮತ್ತು ನಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ನಮ್ಮೆಲ್ಲರ ಆದ್ಯ ಕರ್ತವ್ಯ, ಇದನ್ನು ಮುಂದುವರೆಸಿಕೊAಡು ಹೋಗುವುದು ನಿಮ್ಮ ನಮ್ಮೆಲ್ಲರ ಜವಾಬ್ದಾರಿ ಎಂಬ ವಿಷಯವನ್ನು ಮನವರಿಕೆ ಮಾಡಿದರು.
ಸುಮಾರು 70ಕ್ಕೂ ಅಧಿಕ ಸ್ವಯಂಸೇವಕರು ಈ ಅಭಿಯಾನದಲ್ಲಿ ಭಾಗವಹಿಸಿ, ರಸ್ತೆ ಬದಿಯಲ್ಲಿ ಮತ್ತು ಚರಂಡಿಗಳಲ್ಲಿ ಜನರು ನಿರ್ಲಕ್ಷತನದಿಂದ ಎಸೆದ ಕಸಗಳನ್ನು, 25 ಕ್ಕೂ ಅಧಿಕ ಗೋಣಿ ಚೀಲಗಳಲ್ಲಿ ಸಂಗ್ರಹಿಸಲಾಯಿತು.
ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಸದಸ್ಯರು ಮತ್ತು ಪುರಸಭಾ ಸದಸ್ಯ ಪ್ರಶಾಂತ್ ಕೋಟ್ಯಾನ್,ಖ್ಯಾತ ವರ್ಣ ಕಲಾಕಾರ ಸೂರ್ಯ ಪುರೋಹಿತ್,ಮನೋಜ್ ಸಾಲಿಯಾನ್, ರಾಘವೇಂದ್ರ ಉಪಾಧ್ಯಾಯ,ಪ್ರಶಾಂತ್, ರತ್ನಾವತಿ ನಾಯಕ್, ರುಕ್ಮಿಣಿ, ಅಶೋಕ್ ಆಚಾರ್, ಗಿರೀಶ್, ತಾರನಾಥ್ ಶೆಟ್ಟಿಗಾರ್,ಮುಂತಾದವರು ಈ ಅಭಿಯಾನದಲ್ಲಿ ಭಾಗವಹಿಸಿದ್ದರು.
ವರದಿ::-ಅರುಣ ಭಟ್ ಕಾರ್ಕಳ

More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ