May 6, 2024

Bhavana Tv

Its Your Channel

ಮಿಯಾರು ರಾಜ್ಯ ಮಟ್ಟದ ಕಂಬಳ ಕ್ರೀಡಾಕೂಟ

ಕಂಬಳ ಕ್ರೀಡೆಗೆ ಆಧುನಿಕ ಸ್ಪರ್ಶದ ಪ್ರಯತ್ನ; ಸುನಿಲ್ ಕುಮಾರ್

ಕಾರ್ಕಳ, : ಕಂಬಳ ಕ್ರೀಡೆಗೆ ಸರಕಾರದ ಅನುದಾನಗಳಿಲ್ಲದೆ ನಡೆಯುವ ಕಾಲವೊಂದಿತ್ತು.ಆದರೆ ರಾಜ್ಯ ಸರಕಾರ ಕಂಬಳ ಕ್ರೀಡೆಯನ್ನು ಗ್ರಾಮೀಣ ಕ್ರೀಡೆಗೆ ಸೇರ್ಪಡೆಗೊಳಿಸಿ ಈಗ ಅನುದಾನಗಳನ್ನು ನೀಡುತ್ತಿದೆ. ಸರಕಾರದ ನೇತ್ರತ್ವದಲ್ಲೇ ಕಂಬಳ ಕ್ರೀಡೆಗೆ ಪ್ರೋತ್ಸಾಹ ಸಿಗುತಿದ್ದು, ಕಂಬಳ ಕ್ರೀಡೆಗೆ ಆಧುನಿಕ ಸ್ಪರ್ಶ ನೀಡುವ ಪ್ರಯತ್ನ ನಡೆಯುತ್ತಿದೆ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಮಿಯಾರು ಕಂಬಳ ಸಮಿತಿ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಸಹಯೋಗದಲ್ಲಿ ಮಿಯಾರಿನಲ್ಲಿ ನಡೆದ ಲವ-ಕುಶ ಜೋಡುಕರೆ ರಾಜ್ಯಮಟ್ಟದ ಬಯಲು ಕಂಬಳ ಮಹೋತ್ಸವ ಹಾಗೂ ಲವ- ಕುಶ ನೂತನ ಸಭಾ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು. ರೈತಾಪಿ ವರ್ಗ ಕೃಷಿ ಚಟುವಟಿಕೆ ಮುಗಿಸಿ ಒಗ್ಗೂಡುವ ಕೇಂದ್ರವೇ ಕಂಬಳ. ಜಾತಿ, ರಾಜಕೀಯ ಸ್ಪರ್ಶ , ವಯಸ್ಸಿನ ಅಂತರವಿಲ್ಲದೆ ಕಂಬಳ ನಡೆಯುತ್ತದೆ ಎಂದ ಅವರು ತುಳುನಾಡು ಸೃಷ್ಟಿಯ ನಾಡು ಎನ್ನುವ ಕಾರಣದಿಂದ ಬೈಲೂರಿನಲ್ಲಿ ಪರಶುರಾಮ ಪ್ರತಿಮೆಯುಳ್ಳ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ ಎಂದರು. ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ ಎನ್ ರಾಜೇಂದ್ರಕುಮಾರ್, ಕರಾವಳಿ ಪ್ರಾಧಿಕಾರದ ನಿಕಟಪೂರ್ವಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಗೇರು ಅಭಿವ್ರದ್ದಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಭಾಸ್ಕರ್ ಕೋಟ್ಯಾನ್, ಮಿಯಾರು ಗ್ರಾ.ಪಂ ಅಧ್ಯಕ್ಷ ಗಿರೀಶ್ ಅಮಿನ್, ಉಯಕುಮಾರ್ ಮುನಿಯಾಲು, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಜಿಲ್ಲಾ ಕ್ರೀಡಾಧಿಕಾರಿ ರೋಶನ್ ಶೆಟ್ಟಿ, ಗುಣಪಾಲ ಕಡಂಬ ಮತ್ತಿತರರು ಉಪಸ್ಥಿತರಿದ್ದರು.
ಎಸ್ ಉದಯ್ ಕೋಟ್ಯಾನ್ ಪ್ರಸ್ತಾವನೆಗೈದರು.
ಪ್ರಶಾಂತ್ ಶೆಣೈ ನಿರ್ವಹಿಸಿದರು. ಕಂಬಳ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅನುದಾನ ನೀಡಿದ ಮಟ್ಟಾರು ರತ್ನಾಕರ ಹೆಗ್ಡೆಯವರನ್ನು ಸಮ್ಮಾನಿಸಲಾಯಿತು. ಅಗಲಿದ ಕಂಬಳ ಕೋಣಗಳ ಯಜಮಾನರಿಗೆ ನುಡಿನಮನ ಸಲ್ಲಿಸಲಾಯಿತು.

ದಾಖಲೆ ಜೋಡಿಯ ಕೋಣಗಳು ಭಾಗಿ:-
ದ.ಕ ಉಡುಪಿ ಜಿಲ್ಲೆಯಲ್ಲಿ ನಡೆಯುವ ಕಂಬಳದ ಪೈಕಿ ಮಿಯಾರು ಕಂಬಳ ಬಹಳ ಪ್ರಸಿದ್ದಿ ಪಡೆದಿದೆ. ರವಿವಾರ ಮಿಯಾರು ಲವ-ಕುಶ ಜೋಡುಕರೆ ಕಂಬಳದಲ್ಲಿ 264 ಕೋಣಗಳ ಜೋಡಿ ಭಾಗವಹಿಸುವ ಮೂಲಕ ದಾಖಲೆ ಬರೆದಿದೆ. ಇತ್ತೀಚೆಗೆ ಮೂಡಬಿದ್ರೆಯಲ್ಲಿ ನಡೆದ ಕಂಬಳದಲ್ಲಿ 258 ಜೋಡಿಗಳು ಭಾಗವಹಿಸಿದ್ದವು.

error: