May 7, 2024

Bhavana Tv

Its Your Channel

ನಂದಿನಿ ಶ್ರೇಷ್ಠತೆಯ ಸಂಕೇತ : ಕೆ.ಪಿ. ಸುಚರಿತ ಶೆಟ್ಟಿ

ಕಾರ್ಕಳ ; ಗೋವಿನಿಂದ ಗ್ರಾಹಕನವರೆಗೆ ಶ್ರೇಷ್ಠ ಗುಣಮಟ್ಟವನ್ನು ಕಾಯ್ದುಕೊಂಡು ನಂದಿನಿ ಲಕ್ಷಾಂತರ ಗ್ರಾಹಕರ ಮನೆ ಮನಗಳನ್ನು ಮುಟ್ಟಿ ಶ್ರೇಷ್ಠತೆಯ ಸಂಕೇತವಾಗಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ(ಉಡುಪಿ_ ದ .ಕ.)ಯಲ್ಲಿ ಹಾಲು ಒಕ್ಕೂಟವು ದಿನಂಪ್ರತಿ ೪.೫ಲಕ್ಷ ಲೀಟರ್ ಗಿಂತಲೂ ಹೆಚ್ಚಿನ ಹಾಲನ್ನು ಸಂಗ್ರಹಿಸುತ್ತಿದ್ದು, ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟವನ್ನು ನಿರಂತರವಾಗಿ ಕಾಯ್ದುಕೊಂಡು ಬರುತ್ತಿದೆ ಎಂದು ದ .ಕ .ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ.ಪಿ ಸುಚರಿತ ಶೆಟ್ಟಿ ಅವರು ಜುಲೈ ೧೫, ಗುರುವಾರದಂದು ಕಾರ್ಕಳ ನಗರದ ಅನಂತಶಯನ ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ನಂದಿನಿ ಮಳಿಗೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಾರ್ಕಳ ನಗರದಲ್ಲಿ ಐದನೇ ನಂದಿನಿ ಫ್ರಾಂಚೈಸಿ ಅನಂತಶಯನ ರಸ್ತೆಯಲ್ಲಿರುವ ಸದಾನಂದ ಕಾಂಪ್ಲೆಕ್ಸ್ ಬಳಿಯಲ್ಲಿ ಉದ್ಘಾಟನೆ ಗೊಳ್ಳುತ್ತಿದ್ದು, ಉಡುಪಿ ಜಿಲ್ಲೆಯ ೨೭ನೇ ಫ್ರಾಂಚೈಸಿಯಾಗಿ, ಬೆಳೆಯುತ್ತಿರುವ ಕಾರ್ಕಳ ನಗರದ ಜನತೆಗೆ ನಂದಿನಿ ಉತ್ಪನ್ನಗಳನ್ನು ನಿರಂತರವಾಗಿ ಪೂರೈಸಲಿದೆ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾರ್ಕಳ ಕ್ರೈಸ್ಟ್ ಕಿಂಗ್ ಚರ್ಚ್ನ ಧರ್ಮ ಗುರುಗಳಾದ ರೆವರೆಂಡ್ ಫಾದರ್ ಕ್ಲೆಮಂಟ್ ಮಸ್ಕರೇನಸ್ ರವರು ಸಾಂಪ್ರದಾಯಿಕ ಪ್ರಾರ್ಥನೆಯ ಬಳಿಕ, ನೂತನ ನಂದಿನಿ ಮಳಿಗೆಯು ಗ್ರಾಹಕರಿಗೆ ಅತ್ಯುತ್ತಮ ಸೇವೆಯ ಮೂಲಕ ಮನೆ ಮಾತಾಗಲಿ ಎಂದು ಶುಭ ಹಾರೈಸಿದರು.

ಒಕ್ಕೂಟದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ರಾದ ಡಾ. ರವಿರಾಜ ಉಡುಪರವರು ವೈವಿಧ್ಯಮಯ ನಂದಿನಿ ಉತ್ಪನ್ನಗಳ ಗುಣಮಟ್ಟ ಮತ್ತು ವೈವಿಧ್ಯತೆಗಳ ಬಗ್ಗೆ ಮಾಹಿತಿ ನೀಡುತ್ತಾ , ೧೪೫ ಕಿಂತಲೂ ಹೆಚ್ಚಿನ ವೈವಿಧ್ಯಮಯ ಹಾಲಿನ ಉತ್ಪನ್ನಗಳು ಅಂತರರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಕಾಯ್ದುಕೊಂಡು ಶುಚಿ-ರುಚಿಯಾಗಿ ಗ್ರಾಹಕರ ವಿಶ್ವಾಸಾರ್ಹತೆಯನ್ನು ನಿರಂತರವಾಗಿ ಕಾಯ್ದುಕೊಂಡು ಬರುತ್ತಿದೆ ಎಂದು ವಿವರಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ದ.ಕ. ಹಾಲು ಒಕ್ಕೂಟದ ನಿರ್ದೇಶಕರುಗಳಾದ ಶ್ರೀ ಬೋಳ ಸದಾಶಿವ ಶೆಟ್ಟಿ, ಶ್ರೀ ಸಾಣೂರು ನರಸಿಂಹ ಕಾಮತ್ ಮತ್ತು ಶ್ರೀ ಮುಡಾರು ಸುಧಾಕರ ಶೆಟ್ಟಿಯವರು ಶುಭ ಹಾರೈಸಿದರು.

ಕಾರ್ಕಳ ಪುರಸಭಾ ಸದಸ್ಯರುಗಳಾದ ಶುಭದ ರಾವ್, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀಮತಿ ರೆಹ್ಮತ್, ಉದ್ಯಮಿಗಳಾದ ಸಂದೇಶ್ ವರ್ಮ, ರಾಜೇಂದ್ರ, ನೇ ವಿಲ್ ಡಿಸೋಜ, ನಂದಿನಿ ಮಾರುಕಟ್ಟೆ ವಿಭಾಗದ ಅಧಿಕಾರಿಗಳಾದ ಸಂದೀಪ್ ನಾಯಕ್ ಮತ್ತು ರಕ್ಷಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.+

ವರದಿ ; ಅರುಣ ಭಟ್, ಕಾರ್ಕಳ

error: