
ಮಣಿಪಾಲ : ಜು೧೦: ಕೋವಿಡ್ ಸಂದರ್ಭದಲ್ಲಿ ಕಷ್ಟ ನಷ್ಟಗಳನ್ನು ಅನುಭವಿಸಿದರೂ ಅನೇಕ ಮಹಿಳಾ ಸ್ವ ಉದ್ಯೋಗಿಗಳು ಧೃತಿ ಕೆಡದೇ ಪುನ: ತಮ್ಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿದಾಗ ಸಂತೋಷವಾಗುತ್ತದೆ. ಕೋವಿಡ್ ಮಹಾಮಾರಿಯ ಹೊರತಾಗಿಯೂ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಉತ್ತಮ ದಕ್ಷತೆಯಿಂದ ಕೆಲಸಮಾಡಿದರೆ ಯಶಸ್ಸು ಖಚಿತ ಎಂದು ಸಿಂಡಿಕೇಟ್ ಬ್ಯಾಂಕಿನ ನಿವೃತ ಮಹಾಪ್ರಬಂಧಕ ಭಾಸ್ಕರ ಹಂದೆಯವರು ನುಡಿದರು. ಭಾರತೀಯ ವಿಕಾಸ ಟ್ರಸ್ಟಿನಲ್ಲಿ ತರಬೇತಿ ಪಡೆದ ಫಲಾನುಭವಿಗೆ ತಾವೇ ಉಚಿತವಾಗಿ ಕೊಡಮಾಡಿದ ಹೊಲಿಗೆ ಯಂತ್ರವನ್ನು ಹಸ್ತಾಂತರಿಸುತ್ತಾ ಮಾತನಾಡಿದರು.
ಭಾರತೀಯ ವಿಕಾಸ ಟ್ರಸ್ಟಿನ ಹಿರಿಯ ಸಲಹೆಗಾರ ಶ್ರೀಕಾಂತ ಹೊಳ್ಳ ಸ್ವಾಗತಿಸಿದರು. ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ ಪ್ರಸ್ಥಾವನೆಗೈದರು. ಮಾನವ ಸಂಪನ್ಮೂಲ ವಿಭಾಗದ ಗೀತಾ ಆರ್ ರಾವ್ ಧನ್ಯವಾದವಿತ್ತರು. ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಕಾರ್ಯಕ್ರಮ ಸಂಯೋಜಿಸಿದರು. ಫಲಾನುಭವಿ ಫ್ಲೋರಾ ರೋಡ್ರಿಗಸ್, ಮುಖ್ಯ ವ್ಯವಸ್ಥಾಪಕ ಮನೋಹರ ಕಟ್ಗೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

More Stories
ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ, ಅಂಗದಾನದಿoದ ಪ್ರಯೋಜನ ಪಡೆದ 6 ರೋಗಿಗಳು
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ವಿಶ್ವ ಥೈರಾಯ್ಡ್ ದಿನದ ಅಂಗವಾಗಿ ಜಾಗೃತಿ ಮತ್ತು ಉಚಿತ ಥೈರಾಯ್ಡ್ ತಪಾಸಣೆ
ಮಳವಳ್ಳಿ ಸಿಡಿ ಹಬ್ಬವನ್ನು ಸರಳವಾಗಿ ಆಚರಿಸಲು ಅನುಮತಿ ನೀಡಿದ ತಾಲೂಕು ಆಡಳಿತ