
ಮಣಿಪಾಲ : ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಪ್ರಾದೇಶಿಕ ಕಛೇರಿ, ಮಂಗಳೂರು, ಇವರ ಪ್ರಾಯೋಜಕತ್ವದಲ್ಲಿ ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ, ಇವರ ಸಹಕಾರದೊಂದಿಗೆ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ನಡೆದ ತರಕಾರಿ ಕೈತೋಟ ಮತ್ತು ತಾರಸಿ ಕೃಷಿ ಮಾಹಿತಿ ಮತ್ತು ತರಕಾರಿ ಬೀಜ ವಿತರಣಾ ಕಾರ್ಯಕ್ರಮ ನಡೆಯಿತು.
ಸಮಾರಂಭದÀ ಉದ್ಘಾಟನೆಯನ್ನು ದೀಪಬೆಳಗಿಸಿ ಮತ್ತು ತರಕಾರಿ ಬೀಜಗಳ ಪ್ಯಾಕೇಟನ್ನು ಸಾಂಕೇತಿಕವಾಗಿ ವಿತರಿಸಿದ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಾದ ಸೂರ್ಯನಾರಾಯಣ ರಾವ್ ಬಳಿಕ ಮಾತನಾಡುತ್ತಾ ಮನೆಯಲ್ಲಿ ಸ್ಥಳಾವಕಾಶ ಇರುವವರು ತರಕಾರಿ ಕೈತೋಟ ಬೆಳೆಸುವುದು ತುಂಬಾ ಅವಶ್ಯಕ. ಹಲವಾರು ತರಕಾರಿಗಳನ್ನು ಮನೆಯಂಗಳದಲ್ಲೇ ಬೆಳೆಸಿ ಉಪಯೋಗಿಸಬಹುದು. ಇದರಿಂದ ತಾಜಾ ತರಕಾರಿ ಬೆಳೆದ ತೃಪ್ತಿ ಸಿಗುದಲ್ಲದೇ ದಿನನಿತ್ಯದ ವ್ಯಾಯಾಮವೂ ಮಾಡಿದಂತಾಗುತ್ತದೆ ಎಂದು ತಿಳಿಸಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ತಾರಸಿ ಕೃಷಿ ಮತ್ತು ಮಳೆ ನೀರು ಸಂಗ್ರಹಕ್ಕಾಗಿ ಸಾಲ ನೀಡುವ ಯೋಜನೆಯನ್ನು ಹೊಂದಿದ್ದು ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದರು. ಬಿವಿಟಿ ಹಿರಿಯ ಸಲಹೆಗಾರ ಶ್ರೀಕಾಂತ ಹೊಳ್ಳ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವನೆಗೈದರು. ಸೆಲ್ಕೋ ಸಂಸ್ಥೆಯು ಮಹಾಪ್ರಬಂಧಕ ಜಗದೀಶ್ ಪೈ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮಖ್ಯಸ್ಥ ಮತ್ತು ಹಿರಿಯ ವಿಜ್ಙಾನಿ ಡಾ. ಧನಂಜಯ, ಬಿವಿಟಿ ಮಾಸ್ಟರ್ ಟ್ರೆöÊನರ್ ಸುಧೀರ್ ಕುಲಕರ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ರಾಘವೇಂದ್ರ ಉಪಾಧ್ಯಾಯ ಕೊನೆಯಲ್ಲಿ ವಂದಿಸಿದರು. ಬಿವಿಟಿ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಕಾರ್ಯಕ್ರಮ ನಿರ್ವಹಿಸಿದರು
ಈ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮಖ್ಯಸ್ಥ ಮತ್ತು ಹಿರಿಯ ವಿಜ್ಙಾನಿ ಡಾ. ಧನಂಜಯ ದೃಶ್ಯ ಮಾಧ್ಯಮದ ಮೂಲಕ ಮನೆಯಂಗಳದಲ್ಲಿ ಬೆಳೆಸಬಹುದಾದ ತರಕಾರಿ ಬೆಳೆ ಮಾಹಿತಿ ನೀಡುತ್ತಾ ಅಪಾಯಕಾರಿ ಕೀಟನಾಶಕವನ್ನು ಬಳಸಿದ ತರಕಾರಿ ಸೇವಿಸಿದರೆ ಮಾರಕ ಕಾಯಿಲೆಗಳಿಗೆ ಆಹ್ವಾನ ವಿತ್ತಂತೆ. ಆದುದರಿಂದ ಸಾವಯವ ಗೊಬ್ಬರವನ್ನು ಬಳಸಿ ತಮ್ಮ ಮನೆಯಂಗಳದಲ್ಲಿ ತರಕಾರಿಗಳನ್ನು ಬೆಳೆಸಿ ಉಪಯೋಗಿಸುವುದು ಉತ್ತಮ ಎಂದು ಅಭಿಪ್ರಾಯ ಪಟ್ಟರು. ಮೆಣಸು, ಅರಸಿನ, ಶುಂಠಿಯAತಹಾ ನಿತ್ಯ ಉಪಯೋಗದ ಗಿಡಗಳನ್ನು ಸುಲಭವಾಗಿ ಬೆಳೆಸಬಹುದು ಎಂದು ತಿಳಿಸಿದರು. ಉಡುಪಿ ಪರಿಸರದ ಅನೇಕ ಆಸಕ್ತರು ತಮ್ಮ ಕೈತೋಟ, ತಾರಸಿ ತೋಟ ಗಳಲ್ಲಿ ಗಿಡಗಳ ನಿರ್ವಹಣೆ, ರೋಗ ನಿಯಂತ್ರಣ ಕುರಿತು ಸಂದೇಹಗಳಿಗೆ ತಜ್ಞರಿಂದ ಮಾಹಿತಿ ಪಡೆದುಕೊಂಡರು. ಶಿಬಿರಾರ್ಥಿಗಳಿಗೆ ಉಚಿತ ತರಕಾರಿ ಬೀಜಗಳ ವಿತರಣೆ ಇದೇ ಸಂದರ್ಭದಲ್ಲಿ ನಡೆಯಿತು.
More Stories
ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ, ಅಂಗದಾನದಿoದ ಪ್ರಯೋಜನ ಪಡೆದ 6 ರೋಗಿಗಳು
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ವಿಶ್ವ ಥೈರಾಯ್ಡ್ ದಿನದ ಅಂಗವಾಗಿ ಜಾಗೃತಿ ಮತ್ತು ಉಚಿತ ಥೈರಾಯ್ಡ್ ತಪಾಸಣೆ
ಮಳವಳ್ಳಿ ಸಿಡಿ ಹಬ್ಬವನ್ನು ಸರಳವಾಗಿ ಆಚರಿಸಲು ಅನುಮತಿ ನೀಡಿದ ತಾಲೂಕು ಆಡಳಿತ