
ಅoಕೋಲಾ:- ಅಂಕೋಲಾ ತಾಲೂಕಿನ ಕಲ್ಲೇಶ್ವರದಲ್ಲಿ ಕುಳಿನಾಡು ಸೀಮೆ ಸ್ವರ್ಣವಲ್ಲಿ ಮಠ ಹವ್ಯಕ ಜಾಗ್ರತ ಪಡೆ ಇವರ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಕ್ಕೆ ಶ್ರೀ ಗಂಗಾಧರೆAದ್ರ ಸರಸ್ವತಿ ಮಹಾಸ್ವಾಮಿಗಳು ಆಗಮಿಸಿದ್ದರು.
ಡೋಂಗ್ರಿ ಪಂಚಾಯತದ ಹಳವಳ್ಳಿ, ಕನಕನಹಳ್ಳಿ, ಕಲ್ಲೇಶ್ವರ, ಹೆಗ್ಗಾರ ಊರುಗಳಿಗೆ ಕಳೆದ ವರ್ಷದ ಪ್ರವಾಹದಿಂದ ಸೇತುವೆ ಕೊಚ್ಚಿ ಹೋಗಿ ಕಷ್ಟ ಪಟ್ಟು ಕೊರಕಲು ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿಯಲ್ಲಿ ಸುಸ್ಥಿತಿಯಲ್ಲಿರದ ಕಾರಣ ಕನಕನಹಳ್ಳಿ ಹಳವಳ್ಳಿ ಉತ್ಸಾಹಿಗಳು , ಶಾಸಕಿ ರೂಪಾಲಿ ನಾಯ್ಕ ಸಹಕಾರದೊಂದಿಗೆ ಸಿರ್ಸಿ ಗೆ ಹತ್ತಿರವಾದ ಹಾಗೂ ಯಲ್ಲಾಪುರಕ್ಕೂ ಸುಲಭವಾಗಿ ಹೋಗ ಬಹುದಾದ ಕಡಿಮೆ ಘಟ್ಟ ಹಾಗೂ ತಿರುವುಗಳಿರುವ ಉತ್ತರ ಕನ್ನಡಕ್ಕೆ ಹೊಸ ರೂಪ ನೀಡಿದಂತ ಮಾಜಿ ಮುಖ್ಯಮಂತ್ರಿ ದಿ ರಾಮಕೃಷ್ಣ ಹೆಗಡೆಯವರ ಕನಸಿನ ಮಾರ್ಗವಾದ ಕಕ್ಕಳ್ಳಿ ಮುಸ್ಕಿ ಕನಕನಹಳ್ಳಿ ಹಳವಳ್ಳಿ ರಸ್ತೆಯನ್ನು ಫಲಾನುಭವಿ ಗ್ರಾಮಸ್ಥರ ದೇಣಿಗೆಯೊಂದಿಗೆ
ಶ್ರಮದಾನ ಮಾಡಿ ಸುರಕ್ಷಿತ ವಾಹನ ಓಡಾಡುವಂತೆ ಒಂದೆರಡು ದಿನದಲ್ಲಿ ಸಿದ್ದ ಪಡಿಸಿದರು.ಇದೇ ಮಾರ್ಗದಲ್ಲಿ ಶ್ರೀಗಳು ಆಗಮಿಸಿ ಉತ್ತಮವಾಗಿ ರಸ್ತೆ ಮಾಡಿದ್ದೀರಿ ಆದಷ್ಟು ಬೇಗನೆ ಸಾರ್ವಕಾಲಿಕ ರಸ್ತೆ ಆಗಲಿ ಎಂದು ಹಾರೈಸಿ ದೀಪ ಬೆಳಗಿ ಆಶಿರ್ವಾದ ರೂಪದ ಮಂತ್ರಾಕ್ಷತೆ ನೀಡಿದರು.
ಈ ಸಂದರ್ಭದಲ್ಲಿ ಮುಸ್ಕಿ ಗ್ರಾಮಸ್ಥರು ,ರಸ್ತೆಯ ಶ್ರಮದಾನಕ್ಕೆ ಸಹಕರಿಸಿದ ಕನಕನಹಳ್ಳಿ ಹಳವಳ್ಳಿಯ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ವೇಣುಗೋಪಾಲ ಮದ್ಗುಣಿ

More Stories
ಕಾವ್ಯ ಕಟ್ಟುವುದಲ್ಲ-ಬದಲಿಗೆ ಹುಟ್ಟುವುದು: ಮಂಜುನಾಥ ಗಾಂವಕರ, ಬರ್ಗಿ
೧೮ ವರ್ಷದ ಯುವಕ ರವೀಶ್ ಹರಿಕಾಂತ್ನ ಕಲಾ ಪ್ರೌಢಿಮೆ
“ಕನ್ನಡ ಕೇವಲ ಭಾಷೆಯಲ್ಲ; ಅದೊಂದು ಸಂಸ್ಕೃತಿ -ವೈಶಾಲಿ ಹೆಗಡೆ