September 16, 2024

Bhavana Tv

Its Your Channel

೧೮ ವರ್ಷದ ಯುವಕ ರವೀಶ್ ಹರಿಕಾಂತ್‌ನ ಕಲಾ ಪ್ರೌಢಿಮೆ

ಅಂಕೊಲಾ : ಕಲೆ ಯಾರ ಸ್ವತ್ತು ಅಲ್ಲ. ಪ್ರಯತ್ನಿಸಿದರೆ ಕಲೆ ಕರಗತವಾಗುವುದು ಎನ್ನುವಂತೆ ಅಂಕೋಲಾದ ೧೮ ವರ್ಷದ ಯುವಕ ರವೀಶ್ ಹರಿಕಾಂತ್, ತನ್ನ ಕಲಾ ಪ್ರೌಢಿಮೆಯ ಮೂಲಕ ಕಲಾಕೃತಿ ಬಿಡಿಸಿ ಜನ ಮನ್ನಣೆ ಗಳಿಸುತ್ತಿದ್ದಾನೆ.

ಬೆಳಸೆ ಗ್ರಾಮದ ಶಿರೂರು ನಿವಾಸಿ ರವೀಶ್ ಪ್ರಸ್ತುತ ಅಂಕೋಲಾದ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅಭ್ಯಾಸ ಮಾಡುತ್ತಿದ್ದಾನೆ. ಬಾಲ್ಯದ ದಿನಗಳಿಂದ ಓದಿನ ಜೊತೆಗೆ ಚಿತ್ರ ಬಿಡಿಸುವ ಹವ್ಯಾಸ ರೂಢಿಸಿಕೊಂಡ ಈತನಿಗೆ ಅಂಕೋಲಾದ “ಆದಿ ಟ್ಯಾಟೊ”ದ ಮಾಲಿಕ ಆದಿ ನಾಯ್ಕ್ ಮೊದಲ ಗುರುವಂತೆ.
ಅAಕೋಲಾ ಉತ್ಸವ, ಕುಮಟಾ ಸಂಭ್ರಮ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಾಂತಾರ ಪಂಜುರ್ಲಿ ದೈವದ ಚಿತ್ರ ಬಿಡಿಸಿ ಸೈ ಎನಿಸಿಕೊಂಡಿದ್ದಾನೆ. ಮುಖಚರ್ಯೆ ನೋಡಿ ಒಂದು ವ್ಯಕ್ತಿಯ ಚಿತ್ರವನ್ನು ಬಿಡಿಸುವ ಸಾಮರ್ಥ್ಯವುಳ್ಳ ರವೀಶನ ಬಳಿ ಕೆಲವರು ತಮ್ಮ ಚಿತ್ರವನ್ನು ಬಿಡಿಸಲು ಹೇಳಿದಾಗ, ಓದಿನ ಜೊತೆಗೆ ಅವರ ಚಿತ್ರವನ್ನೂ ಬಿಡಿಸುವ ಮೂಲಕ ಆರ್ಥಿಕ ಸಂಪನ್ಮೂಲ ಕಂಡುಕೊAಡಿದ್ದಾನೆ.
ಲೀಪ್ ಆರ್ಟ್, ಪೆನ್ಸಿಲ್ ಸ್ಕೆಚ್, ತ್ರಿಬಲ್ ಆರ್ಟ್, ವಾಟರ್ ಕಲರ್, ಕ್ಲೇ ಮಾಡಾಲಿಂಗ್ ಮತ್ತು ಸ್ಪೀಡ್ ಆರ್ಟ್. ಈ ಆರು ಬಗೆಯ ಚಿತ್ರಕಲೆಗಳನ್ನು ಕರಗತ ಮಾಡೋಕೊಂಡಿರುವ ರವೀಶನ ಕೈಯಿಂದ ದೇವರು, ಗಣ್ಯರು, ರಾಜಕೀಯ ನಾಯಕರು, ಚಲನಚಿತ್ರ ನಟರು, ಕ್ರೀಡಾಪಟುಗಳು ಹಾಗೂ ಪ್ರಮುಖ ಸಂದೇಶ ಸಾರುವ ಸಾಮಾಜಿಕ ಕಳಕಳಿಯ ಚಿತ್ರಗಳು ಮೂಡಿಬಂದಿದೆ.
ಸಧ್ಯ ಪಾಯಿಂಟ್ ಔಟ್ ಡಾನ್ಸ್ ಅಕಾಡೆಮಿಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ತರಬೇತಿ ನೀಡುತ್ತಿದ್ದಾನೆ. ಜೊತೆಗೆ ಜಿಲ್ಲೆಯ “ದಿ ಬೆಸ್ಟ್ ಲೀಪ್ ಆರ್ಟಿಸ್ಟ್” ಅನ್ನೋ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
“ತಾಯಿ ಸುಧಾ ಅವರ ಕಲೆಯ ಮೇಲಿನ ಆಸಕ್ತಿ, ತಂದೆ ಉತ್ತಮ ಹರಿಕಾಂತರ ಪ್ರೋತ್ಸಾಹ, ಸ್ನೇಹಿತರ ಸಹಕಾರವೇ ನನಗೆ ಚಿತ್ರಕಲೆಯಲ್ಲಿ ಸಾಧನೆ ಮಾಡಲು ಸ್ಫೂರ್ತಿ” ಎನ್ನುವುದು ರವೀಶನ ಮನದಾಳದ ಮಾತು.
ವರದಿ: ನರಸಿಂಹ ನಾಯ್ಕ್ ಹರಡಸೆ

error: