April 27, 2024

Bhavana Tv

Its Your Channel

ಅಂಕೋಲಾದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ!

ಅoಕೋಲಾ: ಫೆಬ್ರವರಿ 26 ರಂದು ಅಂಕೋಲಾದ ಶ್ರೀ ವಿಠ್ಠಲ ಸದಾಶಿವ ದೇವಸ್ಥಾನದ ಸಭಾಭವನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಆಯೋಜನೆಯಲ್ಲಿ ಹಿಂದೂರಾಷ್ಟ್ರ ಜಾಗೃತಿ ಸಭೆಯನ್ನು ನಡೆಸಲಾಯಿತು.

ಸಭೆಯ ವಕ್ತಾರರಾಗಿ ಹಿಂದೂ ಜನಜಾಗೃತಿ ಸಮಿತಿಯ ಉತ್ತರಕನ್ನಡ ಜಿಲ್ಲಾ ಸಮನ್ವಯಕರಾದ ಶರತಕುಮಾರ ನಾಯ್ಕ್ ಹಾಗೂ ಅಂಕೋಲಾ ನ್ಯಾಯವಾದಿ ಎಂ ಪಿ ಭಟ್ ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಎಂ ಪಿ ಭಟ್ ಅವರು ಮಾತನಾಡುತ್ತ ನಮ್ಮ ಸನಾತನ ಸಂಸ್ಕೃತಿ ಮತ್ತು ಪರಂಪರೆಯ ಶ್ರೇಷ್ಠತೆ ಅರಿತು ನಮ್ಮ ಸಾಧು ಸಂತರ ಮಹತ್ವ ತಿಳಿದು ಜೀವನ ನಡೆಸಬೇಕಿದೆ ಅಲ್ಲದೆ ನಾವೆಲ್ಲಾ ಹಿಂದೂಗಳು ಹಿಂದೂರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಸಹಭಾಗಿ ಆಗಿ ಭಾರತವನ್ನು ಹಿಂದೂರಾಷ್ಟ್ರ ಮಾಡಲು ಪ್ರಯತ್ನ ಮಾಡೋಣ ಎಂದು ಕರೆ ಕೊಟ್ಟರು.

ಹಿಂದೂ ಜನಜಾಗೃತಿ ಸಮಿತಿಯ ಶರತಕುಮಾರ ನಾಯ್ಕ್ ಮಾತನಾಡುತ್ತ ಹಿಂದೂಗಳು ಧರ್ಮ ಶಿಕ್ಷಣದ ಅಭಾವದಿಂದಾಗಿ ಆತ್ಮಬಲವನ್ನು ವೃದ್ಧಿಮಾಡುವಲ್ಲಿ ವಂಚಿತರಾಗಿ ವೈಯಕ್ತಿಕ ಜೀವನದಲ್ಲಿ ಮತ್ತು ರಾಷ್ಟ್ರೀಯ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದಕ್ಕೆ ಪರಿಹಾರೋಪಾಯವಾಗಿ ಪ್ರತಿಯೊಬ್ಬ ಹಿಂದೂಗಳು ಧಾರ್ಮಿಕ ಶಿಕ್ಷಣ ಪಡೆದುಕೊಂಡು ಯೋಗ್ಯ ಧರ್ಮಚರಣೆಯನ್ನು ಮಾಡಬೇಕು ಅಲ್ಲದೆ ಇಂದು ಹಲಾಲ್ ಜಿಹಾದ್ ಮೂಲಕ ಭಾರತದ ಎಲ್ಲ ಕ್ಷೇತ್ರದ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿ ಭಾರತವನ್ನು ಇಸ್ಲಾಮಿಕರಣ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಇಷ್ಟೆ ಅಲ್ಲದೆ ಲವ್ ಜಿಹಾದ್, ಉಗುಳು ಜಿಹಾದ್, ಲ್ಯಾಂಡ್ ಜಿಹಾದ್ ಹೀಗೆ ಹಲವಾರು ಜಿಹಾದ್ ಗಳ ಮೂಲಕ ಭಾರತವನ್ನು ಇಸ್ಲಾಮಿಕರಣ ಮಾಡುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಒಂದೇ ಪರಿಹಾರ ಹಿಂದೂ ರಾಷ್ಟ್ರ ಅದಕ್ಕಾಗಿ ನಾವೆಲ್ಲರೂ ಕಟ್ಟಿಬದ್ದರಾಗೋಣ ಎಂದು ಕರೆ ನೀಡಿದರು.

ಈ ಸಂಧರ್ಭದಲ್ಲಿ ಅಂಕೋಲಾ ದ ಬೇರೆ ಬೇರೆ ಭಾಗಗಳಿಂದ ಹಿಂದೂಗಳು ಉಪಸ್ಥಿತರಿದ್ದರು.
ಹಿಂದೂ ಜನಜಾಗೃತಿ ಸಮಿತಿಯ ಪರಿಚಯವನ್ನು ಕಾರವಾರದ ಸಮಿತಿ ಕಾರ್ಯಕರ್ತರಾದ ಪರೇಶ್ ಗೋವೇಕರ್ ಅವರು ಮಾಡಿದರು. ಕಾರ್ಯಕ್ರಮದ ಸೂತ್ರ ಸಂಚಲನೆಯನ್ನು ಪೂಜಾ ಅಂಕೋಲೆಕರ್ ಅವರು ಮಾಡಿಕೊಟ್ಟರು.

error: