
ಅಂಕೋಲಾ: ಅರಣ್ಯ ಭೂಮಿ ಹಕ್ಕಿಗೆ ಸಾಂಘೀಕ ಹೋರಾಟ ಅನಿವಾರ್ಯ, ಕಾನೂನಾತ್ಮಕ ತೊಡಕುಗಳಿಂದ ಅರಣ್ಯ ಭೂಮಿ ವಂಚಿತರಾಗುವುದೆAಬ ಭೀತಿಯಲ್ಲಿ ಅರಣ್ಯವಾಸಿಗಳಿದ್ದಾರೆ. ಅತೀ ಶೀಘ್ರದಲ್ಲಿ ರಾಜ್ಯ ಸರಕಾರವು ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರವಾಗಿ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಅರಣ್ಯ
ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ಅಂಕೋಲಾ ತಾಲೂಕಿನ ಅಚವೆ ಗ್ರಾಮದ ಸಮುದಾಯ ಭವನದಲ್ಲಿ ಜರುಗಿದ ಅರಣ್ಯವಾಸಿಗಳನ್ನ ಉಳಿಸಿ- ಜಾಥ ಹಾಗೂ ಬೃಹತ್‌ಅರಣ್ಯವಾಸಿಗಳ ಸಮ್ಮೇಳನ ಕಾರ್ಯಕ್ರಮ ಉದ್ದೇಶಿಸಿ ಮೇಲಿನಂತೆ ಮಾತನಾಡಿದರು.
30 ವರ್ಷ ಹೋರಾಟದ ಹಿನ್ನಲೆಯಲ್ಲಿ ಹಳ್ಳಿಯಿಂದ ಸಂಘಟನೆಗೊAಡು ಡೆಲ್ಲಿಯ ಸುಫ್ರೀಂ ಕೋರ್ಟನವರೆಗೂ ಹಮ್ಮಿಕೊಂಡ ಹೋರಾಟದ ಹೆಜ್ಜೆ ಐತಿಹಾಸಿಕ ಆಗಿರುವಂತಹ ಅಂಶ ಸರಕಾರದ ವೈಫಲ್ಯತೆ ಮಧ್ಯದಲ್ಲೂ ಹೋರಾಟಗಾರರ ವೇದಿಕೆಯು ಅರಣ್ಯವಾಸಿಗಳ ಪರವಾಗಿ ನಿಂತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಉದಯ ಗುನಗ ಮಾತನಾಡುತ್ತಾ ನಿರಂತರ ಹೋರಾಟವು ಸಂಘಟನೆಯ ಸಾಮರ್ಥ್ಯ ಹೆಚ್ಚಿಸಿದೆ. ಹಕ್ಕಿಗಾಗಿ ಹೋರಾಟ ಅನಿವಾರ್ಯ ಎಂದು ಹೇಳಿದರು.
ತಾಲೂಕ ಅಧ್ಯಕ್ಷ ರಮಾನಂದ ನಾಯ್ಕ ಅಚಿವೆ ಅಧ್ಯಕ್ಷತೆ ವಹಿಸಿ ಹೋರಾಟದಿಂದ ಹಕ್ಕು ಪಡೆಯಲು ಅತೀಕ್ರಮಣದಾರರು ಸನ್ನದ್ಧರಾಗಬೇಕು. ಸಮಗ್ರ ಹೋರಾಟಕ್ಕೆ ಕಾರ್ಯಯೋಜನೆ ಏರ್ಪಡಿಸುತ್ತೇವೆ ಎಂದು ಅವರು ಹೇಳಿದರು.
ಸಭೆಯನ್ನು ಉದ್ದೇಶಿಸಿ ದೇವರಾಜ ನಾಯಕ, ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀದೇವಿ ಪಟಗಾರ ಮಾತನಾಡಿದರು. ವೇದಿಕೆಯ ಮೇಲೆ ಗ್ರಾಮ ಪಂಚಾಯತ ಸದಸ್ಯರಾದ ಗುರುಮೂರ್ತಿ ಹೆಗಡೆ, ಪ್ರಶಾಂತ ನಾಯಕ, ನಾಗಮ್ಮ ಹಳ್ಳೇರ, ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರಾದ ಮೋಹನ ಸಿದ್ಧಿ, ರಾಮ ಸಿದ್ಧಿ, ಅರವಿಂದ್‌ನಾಯ್ಕ, ಸ್ವ ಸಹಾಯ ಸೇವಾ ಸಂಘದ ಅಧ್ಯಕ್ಷ ಬಾಬು ಸುಂಕೇರಿ ಮುಂತಾದವರು ಉಪಸ್ಥಿತರಿದ್ದರು.
ಹೋರಾಟ ಅನಿವಾರ್ಯ:
ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟ ಅನಿವಾರ್ಯ. ಹಕ್ಕಿನ ಹೋರಾಟ 30ವರ್ಷದ ನಿರಂತರ ಹೋರಾಟದಿಂದ ಬದುಕಿನ ಹೋರಾಟವಾಗಿದೆ. ಒಗ್ಗಟ್ಟಿನ ಹೋರಾಟ ಅನಿವಾರ್ಯ ಎಂದು ಜಿಲ್ಲಾ ಪ್ರಧಾನ ಸಂಚಾಲಕ ಜಿ ಎಮ್ ಶೆಟ್ಟಿ ಹೇಳಿದರು.

More Stories
ಕಾವ್ಯ ಕಟ್ಟುವುದಲ್ಲ-ಬದಲಿಗೆ ಹುಟ್ಟುವುದು: ಮಂಜುನಾಥ ಗಾಂವಕರ, ಬರ್ಗಿ
೧೮ ವರ್ಷದ ಯುವಕ ರವೀಶ್ ಹರಿಕಾಂತ್ನ ಕಲಾ ಪ್ರೌಢಿಮೆ
“ಕನ್ನಡ ಕೇವಲ ಭಾಷೆಯಲ್ಲ; ಅದೊಂದು ಸಂಸ್ಕೃತಿ -ವೈಶಾಲಿ ಹೆಗಡೆ