April 10, 2025

Bhavana Tv

Its Your Channel

ಜ್ಞಾನಧಾರೆ ಹಸ್ತಪತ್ರಿಕೆ ಬಿಡುಗಡೆ

ವರದಿ: ವೇಣುಗೋಪಾಲ ಮದ್ಗುಣಿ

ಅಂಕೋಲಾ: ಶಿಕ್ಷಕರು ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳಲ್ಲಿ ಶಿಸ್ತುಬದ್ದವಾಗಿ, ನಿಯಮಬದ್ದವಾಗಿ ಜ್ಞಾನ ನೀಡುವ ಕೆಲಸ ಮಾಡಬೇಕು ಯಾಕೆಂದರೆ ಶಿಕ್ಷಕ ದೇಶ ಕಟ್ಟುವ ಕಾಯಕದಲ್ಲಿ ತೊಡಗಿರುವದರಿಂದ ಆ ವೃತ್ತಿಗೆ ಶ್ರೇಷ್ಠತೆ, ಇದೆ ಎಂದು ತೆಂಕಣಕೇರಿಯ ಆದರ್ಶ ಪ್ರೌಢಶಾಲೆಯ ಮುಖ್ಯೋದ್ಯಾಪಕರಾದ ನಿತ್ಯಾನಂದ ಆರ್. ನಾಯ್ಕ ಹೇಳಿದರು.

ಅವರು ಕೆ.ಎಲ್.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ತಂಡ ಬೋಧನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಜ್ಞಾನಧಾರೆ ಹಸ್ತಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡುತ್ತಾ ಜಗತ್ತು ಸ್ಪರ್ಧಾತ್ಮಕವಾಗಿರುವದರಿಂದ ಆ ಸ್ಪರ್ಧೆಗೆ ಹೊಂದಿಕೊAಡು ಬಾಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ.ವಿನಾಯಕ ಜಿ ಹೆಗಡೆ ಶಿಕ್ಷಕ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಮನೋಭಾವ ತುಂಬಿ ಪರೀಕ್ಷೆಗಳಲ್ಲಿ ಸಾಧನೆ ಮಾಡುವಂತೆ ಪ್ರೇರೆಪಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಕು. ನಿಶಾರಾ ಸಂಗಡಿಗರು ಪ್ರಾರ್ಥಿಸಿದರು, ಕು.ಚೇತನ ಜಿ.ಎನ್ ಸ್ವಾಗತಿಸಿದರು, ಕು. ಯಶೋಧಾ ಗೌಡ ವರದಿ ವಾಚಿಸಿದರು. ಶಾಲೆಯ ಶಿಕ್ಷಕರಾದ ರಜನಿ ಹಾಗೂ ಶ್ರೀಧರ ನಾಯ್ಕ ಮಾತನಾಡಿದರು. ಪ್ರಶಿಕ್ಷಣಾರ್ಥಿಗಳಾದ ಸುಮಂಗಲಾ ಗೌಡ, ಪವಿತ್ರಾ ಪಾಲನಕರ, ತೃಪ್ತಿ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು. ಮಾರ್ಗದರ್ಶಕರಾದ ಡಾ. ಪುಷ್ಫಾ ನಾಯ್ಕ ಶಾಲೆಗೆ ನೆನೆಪಿನ ಕಾಣಿಕೆ ಹಸ್ತಾಂತರಿಸಿದರು. ಕು.ಅಕ್ಷತಾ ನಾಯಕ ವಂದಿಸಿದರು, ಕು.ಅಮಿತಾ ನಾಯ್ಕ ನಿರೂಪಿಸಿದರು.

error: