
ಭಟ್ಕಳ: ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರು ಪರ್ತಕರ್ತರಿಗೆ ನೀಡಿದ ಆರೋಗ್ಯ ಕಿಟನ್ನು ಗುರುವಾರ ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಣ ಸಂತೋಷ ನಾಯ್ಕ ತಾಲ್ಲೂಕಾ ಪತ್ರಕರ್ತರಿಗೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಅವರು ಕರ್ನಾಟಕ ಕಾರ್ಯನಿರತ ಪರ್ತಕರ್ತ ಸಂಘದ ಜಿಲ್ಲಾ ಅಧ್ಯಕ್ಣ ರಾಧಕೃಷ್ಣ ಭಟ್ ಕೋರಿಗೆ ಮೇರೆಗ ದೇಶಪಾಂಡೆಯವರು ಜಿಲ್ಲೆಯ ೨೫೦ಪತ್ರಕರ್ತರಿಗೆ ಅರೋಗ್ಯ ಕಿಟ್ ನೀಡಿದ್ದಾರೆ. ಕರೋನಾ ಸಂಕಷ್ಟ ಕಾಲದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ ಪತ್ರಕರ್ತರಿಗೆ ಸರ್ಕಾರ ಯಾವುದೇ ಪ್ಯಾಕೇಜ್ ಘೋಷಣೆ ಮಾಡದೇ ಕಡೆಗಣಿಸಿರುವ ಬಗ್ಗೆ ಖಂಡಿಸಿದ ಅವರು ಮುಖ್ಯಮಂತ್ರಿಗಳು ಕೂಡಲೇ ಪತ್ರಕರ್ತರಿಗೆ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿದರು. ಕೋವಿಡ್ ನಲ್ಲಿ ಮರಣ ಹೊಂದಿದ ಬಡ ಕುಟುಂಬಗಳಿಗೆ ಪ್ರಕೃತಿ ವಿಕೋಪದಡಿ ೪ ಲಕ್ಷ ಪರಿಹಾರ ನೀಡಲು ಅವಕಾಶವಿದ್ದರೂ ಸರ್ಕಾರ ೧ ಲಕ್ಷ ಘೋಷಣೆ ಮಾಡಿರುವುದು ಹಾಸ್ಯಾಸ್ಪದ ಎಂದು ತಿಳಿಸಿದರು.. ಕಾಂಗ್ರೇಸ್ ಅಲ್ಪಸಂಖ್ಯಾತ ಜಿಲ್ಲಾ ಅಧ್ಯಕ್ಷ ಅಬ್ದುಲ್ ಮಜೀದ್, ಕಾಂಗ್ರೇಸ್ ಮುಖಂಡ ಸತೀಶ ಅಚಾರಿ ಇದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ