
ಭಟ್ಕಳ: ನಗರದ ಮಧ್ಯದಲ್ಲಿದ್ದರೂ ಸರಿಯಾದ ಕಟ್ಟಡವಿಲ್ಲದೇ ಇದ್ದ ಮುಗಳಿಕೋಣೆ ಅಯ್ಯಪ್ಪ ಭಜನಾ ಮಂಟಪದ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಶಾಸಕ ಸುನಿಲ್ ನಾಯ್ಕ ಅವರು ಭೇಟಿ ನೀಡಿ ದೇವಸ್ಥಾನದ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಿದರು.
ಸುಮಾರು ೩೦ ವರ್ಷಗಳಿಂದ ಮುಗುಳಿಕೋಣೆ ಅಯ್ಯಪ್ಪ ಭಜನಾ ಮಂಟಪ ಹಾಗೂ ದೇವಸ್ಥಾನವು ಆಸ್ತಿಕ ಭಕ್ತರ ಭಕ್ತಿಯ ತಾಣವಾಗಿದ್ದು, ಪ್ರತಿನಿತ್ಯ ಅಯ್ಯಪ್ಪ ಸ್ವಾಮಿಯ ಪೂಜೆ ಪುನಸ್ಕಾರಗಳು ಈ ಕ್ಷೇತ್ರದಲ್ಲಿ ನಡೆಯುತ್ತಿದೆ. ನೂರಾರು ಅಯ್ಯಪ್ಪ ಸ್ವಾಮಿಯ ಭಕ್ತರು ಪ್ರತಿ ವರ್ಷವೂ ಇಲ್ಲಿ ವೃಥಾಚರಣೆಯನ್ನು ಕೈಗೊಂಡು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದರು.
ಹಲವಾರು ವರ್ಷಗಳಿಂದ ದೇವಸ್ಥಾನದ ಕಟ್ಟಡ ಅಭಿವೃದ್ಧಿಗೊಳಿಸಲು ಭಕ್ತರು ಶ್ರಮಿಸುತ್ತಿದ್ದು ಆ ಪ್ರಯುಕ್ತ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಕಟ್ಟಡ ಅಭಿವೃದ್ಧಿಗೆ ಧನ ಸಹಾಯ ಮಾಡಿದ್ದಾರೆ. ಅಲ್ಲದೇ ಸರಕಾರದ ಅನುದಾನವನ್ನು ಮಂಜೂರಿ ಮಾಡಿಸುವ ಕುರಿತು ಆಡಳಿತ ಕಮಿಟಿಯೊಂದಿಗೆ ಚರ್ಚಿಸಿದ್ದಾರೆ.



More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ