March 12, 2025

Bhavana Tv

Its Your Channel

ಕೂಲಿ ಕಾರ್ಮಿಕರ ಸೌಹಾರ್ಧ ಸಹಕಾರಿ ನಿಯಮಿತ ಭಟ್ಕಳ ಉದ್ಘಾಟನೆಯನ್ನು ಮಾಡಿದ ಶಾಸಕ ಸುನಿಲ್ ನಾಯ್ಕ

ಭಟ್ಕಳ: ಕೂಲಿ ಕಾರ್ಮಿಕರ ಸೌಹಾರ್ಧ ಸಹಕಾರಿ ನಿಯಮಿತ ಭಟ್ಕಳ ಇದರ ಉದ್ಘಾಟನೆಯನ್ನು ಶಾಸಕ ಸುನಿಲ್ ನಾಯ್ಕ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಹಣಕಾಸಿನ ಸಂಸ್ಥೆಗಳಲ್ಲಿ ಶಿಸ್ತು ಪಾಲನೆ ಮುಖ್ಯವಾಗಿದೆ. ಅಗತ್ಯವುಳ್ಳವರಿಗೆ ಸಾಲವನ್ನು ನೀಡಿದರೆ ಸರಿಯಾದ ಸಮಯಕ್ಕೆ ಮರುಪಾವತಿಯಾಗುತ್ತದೆ. ಪ್ರಮಾಣಿಕತೆಯಿಂದ ಇರುವ ಕೂಲಿ ಕಾರ್ಮಿಕರ ಹಿತ ಕಾಪಾಡುವಲ್ಲಿ ಸಂಸ್ಥೆ ಸಹಕಾರಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸೌಹಾರ್ಧ ಸಹಕಾರಿಯ ಅಧ್ಯಕ್ಷ ಕೃಷ್ಣ ಸೋಮಯ್ಯ ನಾಯ್ಕ ಹುರುಳಿಸಾಲ್, ಉಪಾಧ್ಯಕ್ಷ ಜಟ್ಟಪ್ಪ ನಾರಾಯಣ ನಾಯ್ಕ, ಸದಸ್ಯರಾದ ಶ್ರೀಧರ ಮಂಜುನಾಥ ನಾಯ್ಕ, ಕೃಷ್ಣ ಜಟ್ಟಪ್ಪ ನಾಯ್ಕ, ಪಾರ್ವತಿ ವೆಂಕಟೇಶ ಮೊಗೇರ, ಸಾವಿತ್ರಿ ಲಚ್ಮಯ್ಯ ನಾಯ್ಕ, ಜಯಲಕ್ಷ್ಮೀ ನಾಗಪ್ಪ ನಾಯ್ಕ, ಶ್ರೀಧರ ನಾರಾಯಣ ನಾಯ್ಕ, ಹಜರತ್ ಅಲಿ ಕಂಬಾರ, ರಮೇಶ ದುರ್ಗಪ್ಪ ನಾಯ್ಕ, ಮಂಜುನಾಥ ಸೋಮಯ್ಯ ಗೊಂಡ, ದೇವೇಂದ್ರ ಶನಿಯಾರ ದೇವಡಿಗ, ಮಾದೇವ ಮಾಸ್ತಪ್ಪ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಪೂರ್ವ ಸಹಾರ್ಧ ಸಹಕಾರಿಯ ಕಚೇರಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆ ಹಾಗೂ ಹವನವನ್ನು ನಡೆಸಲಾಯಿತು.

error: