
ಭಟ್ಕಳ ತಾಲ್ಲೂಕಿನ ಸಮುದ್ರದ ದಡದಲ್ಲಿ ಮೀನುಗಾರ ಓರ್ವನು ಮೀನಿನ ಬಲೆಯನ್ನು ಬಿಡುವಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಮುರ್ಡೇಶ್ವರ ಮಾವಳ್ಳಿ ೧ರ ತೂದಳ್ಳಿ ಯಲ್ಲಿ ನಡೆದಿದೆ.
ಮೃತ ವ್ಯಕ್ತಿ ಜಟ್ಟಿ ತಂದೆ ನಾರಾಯಣ ಮೊಗೇರ ಮುರ್ಡೇಶ್ವರ ಮಾವಳ್ಳಿ-೦೧,ಕಿಸಗಾರಮಕ್ಕಿ ನಿವಾಸಿ ಯಾಗಿದ್ದು ಇವರು ತಮ್ಮ ಮನೆಯಿಂದ ಮೀನುಗಾರಿಕೆಗೆ ತೂದಳ್ಳಿ ಅರಬ್ಬೀ ಸಮುದ್ರದ ದಡಕ್ಕೆ ಹೋಗಿ ಸಮುದ್ರದ ದಡದಲ್ಲಿ ಮೀನು ಬಲೆಯನ್ನು ಬಿಡುವಾಗ ದೀಢರನೆ ಎದೆ ನೋವು ಬಂದAತಾಗಿ ಸಮುದ್ರದ ದಡದಲ್ಲಿ ಕುಸಿದು ಬಿದ್ದು ಮೃತ ಪಟ್ಟಿದ್ದಾರೆ. ಈ ಬಗ್ಗೆ ಮುರ್ಡೇಶ್ವರ ಠಾಣೆಯಲ್ಲಿ ನಾಗರಾಜ ಜಟ್ಟಿ ಮೊಗೇರ, ದೂರು ನೀಡಿದ್ದು ಪ್ರಕರಣ ದಾಖಲಿಸಿ ಕೊಂಡ ಮುರ್ಡೇಶ್ವರ ಠಾಣೆ ಪೋಲಿಸರು ತನಿಖೆ ಕೈಗೊಂಡಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ