
ಭಟ್ಕಳ: ಉತ್ತರಕನ್ನಡಜಿಲ್ಲಾ ಮುಖ್ಯಾಧ್ಯಾಪಕರ ಸಂಘದ ನಿಯೋಗವು ಶನಿವಾರದಂದು ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರನ್ನು ಹುಬ್ಬಳ್ಳಿಯ ಅವರ ನಿವಾಸದಲ್ಲಿ ಭೇಟಿಯಾಗಿ ಸನ್ಮಾನಿಸಿದರು.
ಕೋವಿಡ್‌ನಿಂದಾಗಿ ಉ.ಕ.ಜಿಲ್ಲೆಯಲ್ಲಿ ಸಮಾರಂಭವನ್ನು ಏರ್ಪಡಿಸಿ ಅವರನ್ನು ಸನ್ಮಾನಿಸುವ ಉದ್ದೇಶವಿಟ್ಟುಕೊಂಡಿದ್ದೇವು. ಆದರೆ ಕೋವಿಡ್‌ನಿಂದಾಗಿ ಅದು ಸಾಧ್ಯವಾಗಿಲ್ಲ. ಆದ್ದರಿಂದ ಶನಿವಾರದಂದು ಅವರ ನಿವಾಸಕ್ಕೆ ತೆರಳಿ ಸರಳವಾಗಿ ಅವರನ್ನು ಸನ್ಮಾನಿಸಲಾಯಿತು ಎಂದು ಉತ್ತರಕನ್ನಡಜಿಲ್ಲಾ ಮುಖ್ಯಾಧ್ಯಾಪಕರ ಸಂಘ ಕಾರವಾರ ಶೈಕ್ಷಣಿಕ ಜಿಲ್ಲೆಯ ಅಧ್ಯಕ್ಷ ಎಲ್.ಎಮ್.ಹೆಗಡೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಂ ಟಿ ಗೌಡ, ಎಲ್.ಎಮ್.ಹೆಗಡೆ, ಗಣೇಶ ಭಟ್ಟ, ಸಂತೋಷಕುಮಾರ ನಾಯ್ಕ, ವೀಣಾ ವಿಜಾಪುರ ಉಪಸ್ಥಿತರಿದ್ದರು.


More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ