March 12, 2025

Bhavana Tv

Its Your Channel

ಹೊಳೆಯಲ್ಲಿ ಕೈ ಕಾಲು ತೊಳೆಯಲು ಹೋಗಿದ್ದ ವ್ಯಕ್ತಿ ನೀರುಪಾಲು

ಭಟ್ಕಳ: ಗದ್ದೆ ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಹೊಳೆಗೆ ಇಳಿದ ವ್ಯಕ್ತಿ ಕಾಲು ಜಾರಿ ಬಿದ್ದು ನಾಪತ್ತೆಯಾದ ಘಟನೆ ತಾಲೂಕಿನ ಮುಂಡಳ್ಳಿಯಲ್ಲಿ ಸೋಮವಾರ ನಡೆದಿದೆ.

ಭಟ್ಕಳ ತಾಲೂಕಿನ ಮುಂಡಳ್ಳಿ ನಿವಾಸಿ ಶ್ರೀಧರ ದೇವಾಡಿಗ ಹೊಳೆಯಲ್ಲಿ ಬಿದ್ದು ನಾಪತ್ತೆಯಾದವರು. ಇವರು ಕೃಷಿ ಕೆಲಸ ಮುಗಿಸಿ ಕೈ ಕಾಲು ತೊಳೆಯ ಬಳಿ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯಲ್ಲಿ ಬಿದ್ದು ಕೊಚ್ಚಿಹೋಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸತತ ೨ ಗಂಟೆಗಳ ಕಾಲ ಮುಂಡಳ್ಳಿಯ ಹೊಳೆಯಲ್ಲಿ ಅಗ್ನಿಶಾಮಕ ದಳ ಕರ‍್ಯಚರಣೆ ನಡೆಸಿದರು. ನಾಪತ್ತೆಯಾದವರ ಪತ್ತೆ ಆಗಿಲ್ಲ. ನೀರಿನ ರಭಸ ಹೆಚ್ಚಿರುವುದರಿಂದ ರಕ್ಷಣಾ ಕರ‍್ಯವನ್ನು ಸ್ಥಗಿತಗೊಳಿಸಿದ ಅಗ್ನಿಶಾಮಕ ದಳ ಮರಳಿದೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: