
ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಸಿಎ, ಸಿಎಸ್ ತರಬೇತಿ ಘಟಕದ ಉದ್ಘಾಟನಾ ಕಾರ್ಯಕ್ರಮವು ಡಿಜಿಟಲ್ ಮಾಧ್ಯಮದ ಮುಖಾಂತರ ನೆರವೇರಿತು.
ವೃತ್ತಿಯಲ್ಲಿ ಲೆಕ್ಕಪರಿಶೋಧಕರಾದ ಸಿ.ಎ ಙÁ್ಞನೇಶ ಮಾನಕಾಮೆ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, “ಸಿಎ, ಸಿಎಸ್ ತರಬೇತಿಯನ್ನು ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಆರಂಭಿಸಿರುವುದು ಸಂತೋಷಕರ. ಸಾಧನೆಗೆ ಅಸಾಧ್ಯವೆಂಬುದು ಯಾವುದೂ ಇಲ್ಲ, ಕಾರಣ ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆರವಾಗಲಿದ್ದು, ಭಾಗ್ಯದ ಬಾಗಿಲು ತೆರೆದಂತಾಗಿದೆ” ಎಂದು ಹೇಳಿದರು.
ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಛೇರಮನ್ ಡಾ. ಸುರೇಶ್ ನಾಯಕ ಮಾತನಾಡಿ ” ಇನ್ನು ಮುಂದೆ ಸಿಎ, ಸಿಎಸ್ ನಮ್ಮ ವಿದ್ಯಾರ್ಥಿಗಳಿಗೆ ಗಗನಕುಸುಮವಲ್ಲ, ಹೆಚ್ಚಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು” ಎಂದರು.
ಟ್ರಸ್ಟೀ ಮ್ಯಾನೇಜರ್ ರಾಜೇಶ್ ನಾಯಕ ಮಾತನಾಡಿ ” ನಮ್ಮ ಹಲವು ವರ್ಷದ ಕನಸು ಇಂದು ನನಸಾಗಿದೆ, ಸಿಎ, ಸಿಎಸ್ ಮಾಡುವತ್ತ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಆಸಕ್ತಿ ತೋರಿಸುವಂತಾಗಬೇಕು” ಎಂದು ಹೇಳಿದರು.
ತರಬೇತಿಯ ಸಹಯೋಗಿಯಾದ ಉಡುಪಿಯ ವಿ.ರೀಚ್ ಕೋಚಿಂಗ ಅಕಾಡೆಮಿಯ ವ್ಯವಸ್ಥಾಪಕ ಸಿ.ಎಸ್ ಸಂತೋಷ ಪ್ರಭು ರವರು “ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿ, ವಿದ್ಯಾರ್ಥಿಗಳಿಗೆ ಶುಭ ಕೋರಿದರು”.
ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಪ್ರಾಸ್ತಾವಿಕವಾಗಿ ಮಾತನಾಡಿ “ಸಿಎ, ಸಿಎಸ್ಗೆ ವಿದ್ಯಾರ್ಥಿಗಳನ್ನು ತರಬೇತಿ ನೀಡುವಲ್ಲಿ ವಿ.ರೀಚ್ಗೆ ಹಲವಾರು ವರ್ಷಗಳ ಅನುಭವವಿದ್ದು, ನುರಿತ ತರಬೇತುದಾರರನ್ನು ಹೊಂದಿದ್ದು, ನಮ್ಮ ವಿದ್ಯಾರ್ಥಿಗಳಿಗೆ ಇದು ನೆರವಾಗಲಿದೆ” ಎಂದರು.
ವಿಶ್ವನಾಥ ಭಟ್ಟ ಸ್ವಾಗತಿಸಿದರೆ, ಬಿಕಾಂ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಸಿ.ಎ-ಸಿ.ಎಸ್ ಸಂಯೋಜಕರಾದ ಫಣಿಯಪ್ಪ ಹೆಬ್ಬಾರ ವಂದಿಸಿದರು. ಉಪನ್ಯಾಸಕಿ ದೀಪಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರು ಹಾಗೂ ಸಿಎ, ಸಿಎಸ್ ಆಕಾಂಕ್ಷಿಗಳು ಹಾಜರಿದ್ದರು.


More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ