
ಭಟ್ಕಳ ಪ್ರತಿಷ್ಠಿತ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದ ಭೌತಶಾಸ್ತçದ ಪ್ರಾಧ್ಯಾಪಕರಾದ ಪ್ರೊ. ಎಸ್. ಎ. ಅತ್ತಾರ ಅವರು ತಮ್ಮ ೩೩ ವರ್ಷಗಳಿಗಿಂತ ಹೆಚ್ಚು ಕಾಲದ ಸಾರ್ಥಕ ಸೇವೆಯ ನಂತರ ಸೇವಾ ನಿವೃತಿ ಹೊಂದುತ್ತಿದ್ದಾರೆ.
ಪ್ರೊ. ಅತ್ತಾರ ಮೂಲತಃ ಬಿಜಾಪುರ ಜಿಲ್ಲೆಯವರಾಗಿದ್ದು, ಭಟ್ಕಳದ ಅಂಜುಮನ್ ಪದವಿ ಕಾಲೇಜಿಗೆ ಸುದೀರ್ಘ ಸೇವೆ ಸಲ್ಲಿಸುವುದರ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮತ್ತು ಕಾಲೇಜಿನ ಶ್ರೇಯೋಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪ್ರಾಮಾಣಿಕ ಸೇವೆ ಮತ್ತು ಶಿಸ್ತಿಗೆ ಹೆಸರಾದ ಪ್ರೊ. ಎಸ್. ಎ. ಅತ್ತಾರ ಪಾಠ ಪ್ರವಚನದ ಜೊತೆಗೆ ಕಾಲೇಜಿಗೆ ಸಂಬAಧಿಸಿದ ಯಾವುದೇ ಕೆಲಸ ಕಾರ್ಯಗಳನ್ನು ವಹಿಸಿಕೊಟ್ಟರೂ ಅದನ್ನು ಅತ್ಯಂತ ದಕ್ಷತೆಯಿಂದ ಸಮಯದ ಮಿತಿಯಲ್ಲಿ ಪೂರ್ಣಗೊಳಿಸುವುದರ ಮೂಲಕ ಇತರರಿಗೆ ಮಾದರಿಯಾಗಿದ್ದರು. ವಿಷಯದ ಮೇಲೆ ಸಾಕಷ್ಟು ಪ್ರೌಢಿಮೆ ಹೊಂದಿದ ಪ್ರೊ. ಅತ್ತಾರ ಕರ್ನಾಟಕ ವಿಶ್ವವಿದ್ಯಾಲಯ, ಅಲ್ಲಿಯ ಭೌತಶಾಸ್ತç ವಿಭಾಗ, ಪರೀಕ್ಷಾಂಗ ಹಾಗೂ ಮೌಲ್ಯಮಾಪನ ವಿಭಾಗಗಳು ವಹಿಸಿಕೊಟ್ಟ ಕಾರ್ಯಗಳನ್ನೆಲ್ಲ ಅಷ್ಟೇ ನಿಷ್ಠೆಯಿಂದ ಮಾಡಿ ಸೈಯೆನಿಸಿಕೊಂಡವರು.
ಸಜ್ಜನರೂ ಉತ್ತಮ ಮಾನವೀಯ ಸಂಬAಧವನ್ನು ಹೊಂದಿದವರೂ ಆದ ಪ್ರೊ ಅತ್ತಾರ ಸಹೋದ್ಯೋಗಿಗಳಲ್ಲಿ ನೆಚ್ಚಿನ ಸಹೋದ್ಯೋಗಿಗಳಾಗಿ, ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕರಾಗಿ ಎಲ್ಲರ ಮನೋಮಂದಿರದಲ್ಲಿ ಸ್ಥಾನ ಪಡೆದವರು. ಶ್ರೀಯುತರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಮುಸ್ತಾಕ್ ಕೆ. ಶೇಖ, ಪ್ರಾಧ್ಯಾಪಕ ಮಿತ್ರರು, ಕಾಲೇಜಿನ ಸಿಬ್ಬಂಧಿಗಳು ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ