March 12, 2025

Bhavana Tv

Its Your Channel

ಭಟ್ಕಳ ಬಿಜೆಪಿಯ ಪದಾಧಿಕಾರಿಗಳು ಹಾಗೂ ಆಸರಕೇರಿಯ ಸ್ಥಳೀಯರಿಂದ ಶವಸಂಸ್ಕಾರ

ಭಟ್ಕಳ: ಶನಿವಾರ ರಾತ್ರಿ ಭಟ್ಕಳ ತಾಲೂಕಿನ ಸೋನಾರಕೇರಿಯ ವೃದ್ಧ ಮಹಿಳೆಯೊಬ್ಬರು ಕೋವಿಡ್ ಸೋಂಕಿನಿAದ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಶವಸಂಸ್ಕಾರಕ್ಕೆ ಅವರ ಕುಟುಂಬ ವರ್ಗದವರಿಗೆ ಸೂಕ್ತ ಸಹಕಾರ ಸಿಗದಿದ್ದರಿಂದ, ವಿಷಯ ತಿಳಿದ ಭಟ್ಕಳ ಬಿಜೆಪಿಯ ಪದಾಧಿಕಾರಗಳು ಹಾಗೂ ಆಸರಕೇರಿಯ ಸ್ಥಳೀಯರು ಕೂಡಲೇ ಸ್ಪಂದಿಸಿ, ಭಟ್ಕಳ ಸರ್ಕಾರಿ ಆಸ್ಪತ್ರೆಯಿಂದ ಶವವನ್ನು ಭಟ್ಕಳ ಬಂದರ್ ರೋಡ್ ನಲ್ಲಿರುವ ವಿಶ್ವ ಹಿಂದೂ ಪರಿಷತ್ ರುದ್ರಭೂಮಿಗೆ ತಂದು ವ್ಯವಸ್ಥಿತವಾಗಿ ಶವಸಂಸ್ಕಾರ ನಡೆಸುವುದರ ಮೂಲಕ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿರುತ್ತಾರೆ.

ಈ ಸಮಯದಲ್ಲಿ ಬಿಜೆಪಿಯ ಪದಾಧಿಕಾರಿಗಳಾದ ಶ್ರೀಕಾಂತ ನಾಯ್ಕ (ಸಂಚಾಲಕರು, ಜಿಲ್ಲಾ ಮಾಜಿ ಸೈನಿಕರ ಪ್ರಕೋಷ್ಟ), ಪಾಂಡುರAಗ ನಾಯ್ಕ(ಭಟ್ಕಳ ಸಾಮಾಜಿಕ ಜಾಲತಾಣ ಸಂಚಾಲಕರು), ಈಶ್ವರ ಎನ್ ನಾಯ್ಕ (ಭಟ್ಕಳ ಹಿಂದುಳಿದ ಮೋರ್ಚಾ ಉಪಾಧ್ಯಕ್ಷರು, ವಿವೇಕಾನಂದ ನಾಯ್ಕ (ಜಾಲಿ ಮಹಾಶಕ್ತಿಕೇಂದ್ರ ಅಧ್ಯಕ್ಷರು), ಈಶ್ವರ ಕೆ ನಾಯ್ಕ (ಯುವ ಮೋರ್ಚಾ ಉಪಾಧ್ಯಕ್ಷರು) ಹಾಗೂ ಆಸರಕೇರಿಯ ಸ್ಥಳಿಯರಾದ ರಾಜೇಶ ನಾಯ್ಕ, ಮಂಜುನಾಥ ನಾಯ್ಕ, ಮನಮೋಹನ ನಾಯ್ಕ, ಕೃಷ್ಣ ನಾಯ್ಕ (ನಾಮಧಾರಿ ಸಮಾಜದ ಅಧ್ಯಕ್ಷರು), ಭಾಸ್ಕರ ನಾಯ್ಕ, ವೆಂಕಟೇಶ ನಾಯ್ಕ, ಕೃಷ್ಣ ನಾಯ್ಕ, ಕೇಶವ ನಾಯ್ಕ, ಜಗದೀಶ ನಾಯ್ಕ, ಶ್ರೀನಿವಾಸ ನಾಯ್ಕ ಹನುಮಾನ್ ನಗರ ಹಾಗೂ ವೃದ್ಧ ಮಹಿಳೆಯ ಇಬ್ಬರು ಪುತ್ರರಾದ ರಾಜೇಶ್ ರಾಯ್ಕರ್ ಹಾಗೂ ದಿನೇಶ್ ರಾಯ್ಕರ್ ಹಾಗೂ ಇನ್ನೀತರರು ಶವ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

error: