May 4, 2024

Bhavana Tv

Its Your Channel

ಭಟ್ಕಳ: ಇರಾನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಟ್ಕಳ ಮೂಲದ ವ್ಯಕ್ತಿ ಬುಧವಾರ ಬೆಳಗಿನ ಜಾವ ಬೆಂಗಳೂರು ತಲುಪಿದ್ದಾರೆ.

ಭಟ್ಕಳ ; ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಯಾಸೀನ್ ಸರಕು ಹಡಗಿನಲ್ಲಿ ಸಮುದ್ರಯಾನಗಾರನಾಗಿ ಕೆಲಸ ಮಾಡುತಿದ್ದು, ೨೦೨೦ರ ಜನವರಿ ೧೨ರಂದು ಇರಾನ್ ಬಂದರಿನಲ್ಲಿ ಇಳಿದಿದ್ದ. ಕೋವಿಡ್ ಕಾರಣದಿಂದ ಹಡಗನ್ನು ಬಂದರಿನಲ್ಲೇ ಲಂಗರು ಹಾಕಲಾಗಿತ್ತು. ಈ ಹಡಗು ಮೂವರ ಪಾಲುದಾರಿಕೆ ಹೊಂದಿದ್ದು, ಹಡಗು ಮಾಲೀಕರ ನಡುವಿನ ವಿವಾದದಿಂದ ಯಾಸೀನ್ ಷಾ ಇರಾನ್ ಬಂದರಿನ ಚಬಹಾರ್‌ನ ಡಾಕಿಂಗ್ ಪ್ರದೇಶದಲ್ಲಿ ಕಠಿಣ ಜೀವನ ನಡೆಸುತ್ತಿದ್ದ. ಹಲವು ತಿಂಗಳುಗಳ ವೇತನವನ್ನೆ ಪಡೆಯದೆ ಸಂಕಷ್ಟ ಅನುಭವಿಸಿದ್ದ. ಇರಾನ್‌ಗೆ ಕರೆದೊಯ್ದಿದ್ದ ಏಜೆನ್ಸಿ ಈತನನ್ನು ನಿರ್ಲಕ್ಷಿಸಿತ್ತು ಇದೀಗ ಸರಕು ಹಡಗುಗಳ ಚಲನೆ ಪುನರಾರಂಭಗೊAಡಿದ್ದರೂ ಯಾಸೀನ್ ಇರುವ ಹಡಗು ಅಲ್ಲಿಂದ ತೆರಳಿಲ್ಲ ಎನ್ನಲಾಗಿದೆ…
ಯಾಸೀನ್ ಇರಾನ್‌ಗೆ ತೆರಳಲು ಏಜೆನ್ಸಿಯೊಂದರೊAದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಇರಾನ್‌ನಲ್ಲಿ ಬದಲಿಸಲಾಗಿತ್ತು. ಬಹುತೇಕ ಇರಾನ್ ಏಜೆನ್ಸಿಗಳು ಪರ್ಸಿಯನ್ ಭಾಷೆಯ ಒಪ್ಪಂದ ಪತ್ರಕ್ಕೆ ಸಹಿ ಹಾಕಿಸಿಕೊಂಡು, ವೇತನ ಪಾವತಿಸದೆ ಕೆಲಸಗಾರರಿಗೆ ವಂಚಿಸುತ್ತದೆ. ಆದರೆ, ಪರ್ಸಿಯನ್ ಭಾಷೆ ಅಲ್ಪಸ್ವಲ್ಪ ತಿಳಿದಿದ್ದ ಯಾಸೀನ್, ಏಜೆನ್ಸಿಯ ಒಪ್ಪಂದ ಪತ್ರಕ್ಕೆ ಸಹಿ ಹಾಕದೆ ಆಕ್ಷೇಪ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಅನೇಕ ಭಾರತೀಯರನ್ನು ಈ ರೀತಿ ಮೋಸಗೊಳಿಸಲಾಗುತ್ತಿರುವುದರಿಂದ ಯಾಸೀನ್ ಅಲ್ಲೆ ಉಳಿದು ಹೋರಾಡಲು ನಿರ್ಧರಿಸಿದ್ದ. ತಮಿಳುನಾಡಿನ ವ್ಯಕ್ತಿಯೊಬ್ಬರು ಇದೆ ತೆರನಾದ ಮೋಸ ಹೋಗಿದ್ದು ವೇತನ ಪಡೆಯದೆ ಕೇವಲ ಏರ್ ಟಿಕೆಟ್ ಪಡೆದು ಭಾರತ ತಲುಪಿದ್ದಾರೆ ಎನ್ನಲಾಗಿದೆ.
ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದಾಗ ಹಡಗು ಕಂಪನಿ ಮಾಲೀಕರನ್ನು ಸಂಪರ್ಕಿಸಲು ಅಧಿಕಾರಿಗಳು ಏಮ್ ಇಂಡಿಯಾ ಫೋರಮ್ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಏಮ್ ಇಂಡಿಯಾ ಫೋರಂ ಸ್ಥಾಪಕ ಅಧ್ಯಕ್ಷ ಶಿರಾಲಿ ಶೇಖ್ ಮುಜಾಫರ್ ಅಲ್ಲಿನ ಏಜೆಂಟರು ಹಾಗೂ ಹಡಗು ಮಾಲೀಕರ ವಿವರ ಮೊಬೈಲ್ ಸಂಖ್ಯೆಯನ್ನ ರಾಯಭಾರಿ ಕಚೇರಿಗೆ ನೀಡಿದ್ದರು. ಈ ದಿಶೆಯಲ್ಲಿ ಕಾರ್ಯಪ್ರವರ್ತರಾದ ಪ್ರಧಾನಿ ಕಚೇರಿ ಹಾಗೂ ರಾಯಭಾರಿ ಕಛೇರಿ, ವಿದೇಶಾಂಗ ವ್ಯವಹಾರಗಳ ಮಂತ್ರಿ ಡಾ. ಜೈಶಂಕರ, ಭಾರತೀಯ ರಾಯಬಾರಿ ಕಚೇರಿ ತೈವಾನ ಸಕಾರಾತ್ಮಕವಾಗಿ ಸ್ಪಂದನೆ ನೀಡಿ ಸಹಾಯ ಮಾಡಿದೆ. ಇದಲ್ಲದೆ ದುಬೈನಲ್ಲಿರುವ ಶಿರಾಲಿ ಶೇಖ್ ಮುಜಾಫರ್, ಭಟ್ಕಳ ಕಮ್ಯುನಿಟಿಯ ಇಸೂಫ್ ಬರ್ಮಾವರ, ಎಸ್ ಎಮ್ ಅಪ್ಜಲ್, ಸರ್ಪರಾಜ ಜುಕಾಕೊ ಸಹಕರಿಸಿದ್ದು, ಇರಾನಿನಲ್ಲಿ ಅಕ್ರಮವಾಸ ಅಪರಾದದಿಂದ ದಂಡಕ್ಕೆ ಗುರಿಯಾಗಿದ್ದ ಯಾಸಿನ್ ಅವರನ್ನು ಸುಗಮವಾಗಿ ಭಾರತಕ್ಕೆ ಮರಳುವಂತೆ ಮಾಡಿದ್ದಾರೆ.

ಭಟ್ಕಳದಿಂದ ಲಕ್ಷಗಟ್ಟಲೆ ಸಾಲ ಮಾಡಿ ವಿದೇಶಕ್ಕೆ ತೆರಳಿದ್ದ ಯಾಸೀನ್ ಅಲ್ಲಿ ತೆರಳಿದ ಬಳಿಕ ಸಂಕಷ್ಟಕ್ಕೆ ಈಡಾಗಿದ್ದ. ವರ್ಷಗಳ ಬಳಿಕ ವಿಮಾನದ ಟಿಕೆಟ್ ನೀಡುತ್ತೇವೆ ಭಾರತಕ್ಕೆ ಮರಳಿ ಎಂದರೂ ವೇತನ ಪಡೆಯದೆ ಹೋಗುವದಿಲ್ಲ ಎಂದು ಹಠ ಸಾಧಿಸಿದ್ದ. ಏಮ್ ಇಂಡಿಯಾ ಫೋರಮ್ ಬಳಿ ತನ್ನ ಕಷ್ಟ ತೊಡಿಕೊಂಡಿದ್ದು ಶಿರಾಲಿ ಶೇಖ್ ಮುಜಾಫರ್ ಹಡಗು ಮಾಲಿಕರನ್ನು ಸಂಪರ್ಕಿಸಿ ಭಾರತದ ಪ್ರದಾನಿ ಕಚೇರಿಗೆ ದೂರು ನೀಡಿ ತಮ್ಮ ಹಡಗಿನ ಮೇಲೆ ದಂಡ ವಿಧಿಸುವದಾಗಿ ಎಚ್ಚರಿಕೆ ನೀಡಿದ್ದರು. ಯಾಸೀನ್ ಭಾರತಕ್ಕೆ ತೆರಳುವ ಪ್ರಕ್ರಿಯೆ ಪೂರ್ಣ ಗೊಳ್ಳುತ್ತಿರುವಂತೆ ಹಡಗು ಮಾಲಿಕ ಹಾಜಿ ಅಲಿ ಗನಿಜಾದೆ ೨೦೦೦ ಯುಎಸ್ ಡಾಲರ್ ನೀಡಿದ್ದಾರೆ.

error: