
ಭಟ್ಕಳ: ತಾಲ್ಲೂಕು ಗಾಣಿಗ ಸೇವಾ ಸಂಘ ,ಶ್ರೀ ಗೋಪಾಲಕೃಷ್ಣ ಪತ್ತಿನ ಸಹಕಾರಿ ಸಂಘ ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿ ಇದರ ಸಹಭಾಗಿತ್ವದಲ್ಲಿ ಶ್ರೀಕೃಷ್ಣ ಜನ್ಮೋತ್ಸವ -೨೦೨೧ರ ಪ್ರಯುಕ್ತ ಆನ್ ಲೈನ್ ನಲ್ಲಿ ೬ ವರ್ಷದೊಳಗಿನ ಮಕ್ಕಳಿಗಾಗಿ ಮುದ್ದು ರಾಧಾ-ಮುದ್ದು ಕೃಷ್ಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಗಾಣಿಗ ಸೇವಾ ಸಂಘದ ಅಧ್ಯಕ್ಷರು ಶ್ರೀಧರ್ ಶೆಟ್ಟಿ ಹೇಳಿದ್ದಾರೆ
ಈ ಕುರಿತು ಇಲ್ಲಿನ ಗೋಪಾಲಕೃಷ್ಣ ಸಭಾಭವನದಲ್ಲಿ ಪತ್ರಿಕಾಗೋಷ್ಠಿದ್ದೇಶಿಸಿ ಮಾತನಾಡಿದ ಅವರು ಕೃಷ್ಣನ ಬಾಲ್ಯಲೀಲೆ ಮತ್ತು ಕೃಷ್ಣನ ನೆನಪಿಗೋಸ್ಕರ ಮುದ್ದು ರಾಧೆ ಮತ್ತು ಮುದ್ದುಕೃಷ್ಣ ಎನ್ನುವ ಆನ್ ಲೈನ್ ಸ್ಪರ್ಧೆಯನ್ನು ಇಂದಿನಿAದಲೇ ಆರಂಭಿಸಿದ್ದು .ಈ ಸ್ಪರ್ಧೆಯಲ್ಲಿ ಒಟ್ಟು ಬಹುಮಾನದ ಮೊತ್ತ ಮೂವತ್ತು ಸಾವಿರಕ್ಕೂ ಅಧಿಕವಿರುತ್ತದೆ ಎಂದ ಅವರು ಇಂಥಹ ಹಲವಾರು ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಾಲ್ಕೈದು ವರ್ಷಗಳಿಂದ ನಡೆಸಿಕೊಂಡು ಬಂದಿದ್ದು ನಮ್ಮ ಸಮಾಜದಲ್ಲಿ ಅತೀ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವಂತಹ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ ಹಾಗೂ ಈ ಮುದ್ದು ರಾಧೆ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದರು
ನಂತರ ಕಾರ್ಯಕ್ರಮದ ಸಂಯೋಜಕರಾದ ಪ್ರಕಾಶ ಶಿರಾಲಿ ಮಾತನಾಡಿ ೨೦೧೮ ರಲ್ಲಿ ಭಟ್ಕಳ ತಾಲೂಕಾ ಗಾಣಿಗ ಸೇವಾ ಸಂಘ ಎನ್ನುವ ಸಂಸ್ಥೆಯನ್ನು ಪ್ರಾರಂಭಿಸಿದ್ದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ ಎಂದರೆ ಶೈಕ್ಷಣಿಕ, ಸಾಮಾಜಿಕ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಎಲ್ಲಾ ಚಟುವಟಿಕೆಯನ್ನು ಮಾಡುವ ಉದ್ದೇಶದಿಂದ ಪ್ರಾರಂಭಿಸಿದ ಈ ಸಂಸ್ಥೆ ಕಳೆದ ೨ ವರ್ಷ ಮುದ್ದು ರಾಧಾ ಮುದ್ದು ಕೃಷ್ಣ ಸ್ಪರ್ಧೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದು. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಮುದ್ದು ರಾಧಾ ಮುದು ಕೃಷ್ಣ ಸ್ಪರ್ಧೆಯನ್ನು ಆನ್ ಲೈನ್ನಲ್ಲಿ ಹಮ್ಮಿಕೊಂಡಿದ್ದು ಜೊತೆಗೆ ಸಂಸ್ಕೃತಿ, ಸಂಪ್ರದಾಯ ಆಚರಣೆಯನ್ನು ಮುಂದಿನ ತಲೆಮಾರಿಗೆ ಕೊಡುಗೆಯನ್ನು ನೀಡು ಚಿಕ್ಕ ಪ್ರಯತ್ನ ಇದಾಗಿದೆ ಎಂದರು
ಸ್ಪರ್ಧೆಯ ನಿಯಮಗಳು ಈ ರೀತಿಯಿದ್ದು ಪ್ರಥಮ ೫ ಸಾವಿರ, ದ್ವಿತೀಯ ೩ ಸಾವಿರ, ತೃತೀಯ ೨ ಸಾವಿರ, ಮತ್ತು ಹತ್ತು ಸಮಾಧಾನಕರ ಬಹುಮಾನ ಹಾಗೂ ಪೇಸ್ ಬುಕ್ ನಲ್ಲಿ ಅತಿ ಹೆಚ್ಚು ಲೈಕ್ ಪಡೆದ ಸ್ಪರ್ಧಾಳುಗಳಿಗೆ ವಿಶೇಷ ಬಹುಮಾನ ನೀಡಲಾಗುವುದು ಮತ್ತು ಸ್ಪರ್ಧೆಗೆ ನೋಂದಾಯಿಸಲು ಈ ಲಿಂಕ್ ನಲ್ಲಿ ರಿಜಿಸ್ಟರ್ ಆಗಿ https://forms.gle/UEMia9KFWTrifU2t9 ಹಾಗೂ ಫೇಸ್ ಬುಕ್ ಪೇಜ್ https://www.facebook.com/GANIGASEVASANGHA/ ನಲ್ಲಿ ಲೈಕ್ ಗಾಗಿ ಫೋಟೋ ಅಪ್ ಲೋಡ್ ಮಾಡಲಾಗುವುದು ನೋಂದಣಿ ಶುಲ್ಕ ನೂರು ರೂಪಾಯಿಯನ್ನು ಈ ಪೇಮೆಂಟ್ ಮುಖಾಂತರ ೯೬೧೧೪೪೯೬೦೩ ಈ ನಂಬರ್ ಗೆ ಪಾವತಿಸಿ ಅದರ ಸ್ಕ್ರೀನ್ ಶಾಟ್ ೧ ಫೋಟೋ ಮತ್ತು ಜನನ ಪತ್ರದ ಪ್ರತಿಯೊಂದಿಗೆ ವಾಟ್ಸಾಪ್ ಗ್ರೂಪ್ ನಲ್ಲಿ ಅಪ್ ಲೋಡ್ ಮಾಡಲಾಗುವುದು ,ಪ್ರಥಮ ದ್ವಿತೀಯ ತೃತೀಯ ಮತ್ತು ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಇ-ಪ್ರಶಸ್ತಿ ಪತ್ರ ನೀಡಲಾಗುವುದು .ಫಲಿತಾಂಶವನ್ನು ದಿನಾಂಕ ೩೦-೦೮-೨೧ರಂದು ಬೆಳಿಗ್ಗೆ ೯ಗಂಟೆಗೆ ವಿಜೇತ ಸ್ಪರ್ಧಾಳುಗಳ ಫೋಟೋಗಳೊಂದಿಗೆ ಭಾವಾನಾ ವಾಹಿನಿಯಲ್ಲಿ ಘೋಷಣೆ ಮಾಡಲಾಗುವುದು, ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಫೋಟೋವನ್ನು ತಮ್ಮ ಫೇಸ್ ಬುಕ್ ಮತ್ತು ಯೂಟ್ಯೂಬ್ ಚಾನೆಲ್ ನಲ್ಲಿ ದಿನಾಂಕ ೩೧-೦೮-೨೧ ಪ್ರಸಾರ ಮಾಡಲಾಗುವುದು ಫೋಟೋ ಅಪ್ ಲೋಡ್ ಮಾಡಲು ಕೊನೆಯ ದಿನಾಂಕ ೨೫-೦೮-೨೧ ಈ ಸ್ಪರ್ಧೆಯಲ್ಲಿ ನಿರ್ಣಾಯಕರ ನಿರ್ಣಯವೇ ಅಂತಿಮ ತೀರ್ಮಾನವಾಗಲಿದೆ .
ಈ ಸಂದರ್ಭದಲ್ಲಿ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ನಾರಾಯಣ ಶೆಟ್ಟಿ,ಗಾಣಿಗ ಸೇವಾ ಸಂಘದ ಉಪಾಧ್ಯಕ್ಷ ಗಜಾನನ ಶೆಟ್ಟಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮಣ ಶೆಟ್ಟಿ ಉಪಸ್ಥಿತರಿದ್ದರು
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ