March 12, 2025

Bhavana Tv

Its Your Channel

ಯಾವುದೆ ಅಹಿತಕರ ಘಟನೆ ನಡೆದರೂ ೧೧೨ ಸಂಖ್ಯೆಗೆ ಕರೆ ಮಾಡಿ-ಸಿಪಿಐ ದಿವಾಕರ್ ಪಿ

ಭಟ್ಕಳ ತಾಲೂಕಿನಲ್ಲಿ ಯಾವುದೆ ಅನಾಹುತ, ಅವಘಡ, ಪ್ರಕೃತಿ ವಿಕೋಪ ಅಥವಾ ಯಾವುದೆ ಅಹಿತಕರ ಘಟನೆ ನಡೆದರೂ ೧೧೨ ಸಂಖ್ಯೆಗೆ ಕರೆ ಮಾಡಿದರೆ ಕೂಡಲೆ ನಮ್ಮ ತಂಡ ನಿಮ್ಮ ಬಳಿಗೆ ಬರುತ್ತದೆ ಎಂದು ಸಿಪಿಐ ದಿವಾಕರ್ ಪಿ ಹೇಳಿದರು.

ಅವರು ಭಟ್ಕಳ ಬಸ್ ನಿಲ್ದಾಣದ ಬಳಿ ೧೧೨ ಪೋಸ್ಟರ್‌ಗಳನ್ನು ಸಾರ್ವಜನಿಕ ಸಂಚಾರ ವಾಹನಗಳಿಗೆ ಅಂಟಿಸಿ ಹೇಳಿದರು. ಮೊದಲೆಲ್ಲಾ ಅಫಘಾತ, ಅಥವಾ ಹೊಡೆದಾಟ ನಡೆದರೆ ಮಾತ್ರ ಪೊಲೀಸರಿಗೆ ಕರೆ ಮಾಡುತ್ತಿದ್ದರು. ಆದರೆ ಈ ಎಲ್ಲಾ ಸಮಸ್ಯೆಗಳಿಗೂ ೧೧೨ ಸಂಖ್ಯೆಗೆ ಕರೆ ಮಾಡಿದರೆ ಸಾಕು. ಅಪಘಾತ, ಪ್ರಕೃತಿ ವಿಕೋಪ, ಕಾಡು ಪ್ರಾಣಿಗಳ ಉಪಟಳ, ವಿದ್ಯಾರ್ಥಿನಿಯರಿಗೆ ಕಿರುಕುಳ, ದೌರ್ಜನ್ಯ ಸೇರಿದಂತೆ ಅತಿವೃಷ್ಟಿ, ಅನಾವೃಷ್ಟಿಯಂತಹ ಸಂದರ್ಬದಲ್ಲೂ ಕರೆ ಮಾಡಬಹುದು. ಇದೊಂದು ಜಿಪಿಎಸ್ ಆಧಾರಿತ ಸಂಖ್ಯೆ ಆಗಿದ್ದು ಯಾರು, ಎಲ್ಲಿಂದ ಕರೆ ಮಾಡಿದ್ದಾರೆ ಅನ್ನುವದು ತಿಳಿಯುತ್ತದೆ. ಒಂದು ವೇಳೆ ಅಪರಾಧ ಘಟನೆಗಳು ನಡೆದರೆ ಇದರಿಂದ ಅಪರಾಧಿಗಳನ್ನು ಹಿಡಿಯಲು ಸುಲಭವಾಗುತ್ತದೆ. ಸಾರ್ವಜನಿಕರು ಈ ಸೌಲಭ್ಯದ ಅವಕಾಶ ಪಡೆಯಬೇಕು ಎಂದರು.


ಶಹರ ಠಾಣೆಯ ಪಿಎಸ್‌ಐ ಸುಮಾ ಆಚಾರ್ಯ ಮಾತನಾಡಿ ಈ ಹಿಂದೆ ಒಂದೊAದು ವಿಭಾಗಕ್ಕೆ ಒಂದೊAದು ಇಲಾಖೆಗೆ ಸಂಪರ್ಕಿಸಬೇಕಿತ್ತು. ಆದರೆ ಈಗ ೧೧೨ ಸಂಖ್ಯೆಯೊAದನ್ನೆ ನೆನಪಿನಲ್ಲಿ ಇಟ್ಟು ಕರೆ ಮಾಡಿ ಸುರಕ್ಷಿತವಾಗಿರಿ ಎಂದರು. ಸಾಂಕೇತಿಕವಾಗಿ ಹಲವು ಅಟೋ ರಿಕ್ಷಾ, ಸರ್ಕಾರಿ ಬಸ್, ಬಸ್ ನಿಲ್ದಾಣ ಸೇರಿ ಜನ ಜಂಗುಳಿ ಸೇರುವಲ್ಲಿ ಪೋಸ್ಟರ್ ಹಚ್ಚಿ ಜಾಗೃತಿ ಮೂಡಿಸಲಾಯಿತು. ಈ ಸಂದರ್ಬದಲ್ಲಿ ಪಿಎಸ್‌ಐ ಎಲ್ಲಪ್ಪ ಮಾದರ, ಅಟೋ ಯೂನಿಯನ್ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ ಪೊಲೀಸ್ ಸಿಬ್ಬಂದಿ ಸೇರಿ ಇತರರು ಇದ್ದರು.

error: