March 12, 2025

Bhavana Tv

Its Your Channel

ಕಾರು ಮತ್ತು ಬೈಕ್ ನಡುವೆ ಅಪಘಾತ : ಬೈಕ್ ಸಹ ಸವಾರ ಸಾವು

ಭಟ್ಕಳ ತಾಲ್ಲೂಕಿನ ಬಂದರ ರೋಡ್ ಬಳಿ ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡ ಸಹ ಸವಾರ ಸಾವನ್ನಪ್ಪಿದ್ದ ಘಟನೆ ನಡೆದಿದೆ.

ಸಾವನ್ನಪ್ಪಿದ ಯುವಕ ಮಹ್ಮದ ಹುಸೇನ ಹನೀಪ್ ಬುಡನಗೇರಿ ಆಜಾದ ನಗರ ಶೇಡಕುಳಿ ಹೊಂಡ ನಿವಾಸಿ ಎಂದು ತಿಳಿದು ಬಂದಿದೆ. ಸವಾರ ಇಮ್ರಾನ ಗೌಸ್ ಶೇಡಕುಳಿ ಹೊಂಡ ಈತನ ಬೈಕ್‌ನ ಹಿಂಬದಿಯಲ್ಲಿ ಮಹ್ಮದ ಹುಸೇನ ಹನೀಪ್ ಬುಡನಗೇರಿ ಆಜಾದ ನಗರ ಶೇಡಕುಳಿ ಹೊಂಡ ಹಾಗೂ ಅಬ್ದುಲ್ ರಹಮಾನ ನಿಸಾರ ಅಹ್ಮದ ಆಜಾದ ನಗರ ಶೇಡಕುಳ ಹೊಂಡ ಇವರನ್ನು ಕೂಡ್ರಿಸಿಕೊಂಡು ಭಟ್ಕಳ ಸಂಶುದ್ದಿನ ಸರ್ಕಲ್ ಕಡೆಯಿಂದ ಬಂದರ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದವನು ಬಂದರ ಕಡೆಯಿಂದ ಭಟ್ಕಳದ ಸಂಶುದ್ದೀನ ಸರ್ಕಲ್ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಗೊಂಡು ಬೈಕ್ ಹಿಂದೆ ಮಧ್ಯದಲ್ಲಿ ಕುಳಿತಿದ್ದ ಮಹ್ಮದ ಹುಸೇನ ಬುಡನಗೇರಿ ಇವರಿಗೆ ತಲೆಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದು ಹಾಗೂ ಬೈಕ್ ಹಿಂದೆ ಕೊನೆಯಲ್ಲಿ ಕುಳಿತುಕೊಂಡು ಅಬ್ದುಲ್ ರಹಮಾನ ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಈ ಬಗ್ಗೆ ಭಟ್ಕಳ ಶಹರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

error: