March 13, 2025

Bhavana Tv

Its Your Channel

ನಾಳೆ ಭಟ್ಕಳದಲ್ಲಿ ಲಸಿಕಾ ಮಹಾಅಭಿಯಾನ: ಬೆಳಿಗ್ಗೆಯಿಂದ ಸಂಜೆಯವರೆಗೆ ಸಾರ್ವಜನಿಕರಿಗೆ ಅವಕಾಶ: ಡಾ.ಸವಿತಾ ಕಾಮತ

ಭಟ್ಕಳ: ಪುರಸಭೆ ವ್ಯಾಪ್ತಿಯಲ್ಲಿ ವಿವಿಧೆಡೆ ಶುಕ್ರವಾರ (ಅ.20ರಂದು) ಬೆಳಿಗ್ಗೆ ೯ರಿಂದ ಸಂಜೆ ೫ರವರೆಗೆ ಒಟ್ಟು ೨೦೦೦ಸಾವಿರ ವ್ಯಾಕ್ಸಿನ್ ಡೋಸ್‌ಗಳು ಲಭ್ಯವಿದ್ದು ಲಸಿಕಾ ಮಹಾ ಅಭಿಯಾನ ನಡೆಯಲಿದೆ. ಕೋವಿಡ್ ನಿಯಮ ಉಲ್ಲಂಘಿಸದೆ ಮಹಾ ಅಭಿಯಾನದ ಪ್ರಯೋಜನ ಪಡೆದುಕೊಳ್ಳಿ ಎಂದು ಡಾ. ಸವಿತಾ ಕಾಮತ ಹೇಳಿದರು.
ಅವರು ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಕೋವಿಡ್ ಪಾಸಿಟಿವಿಟಿ ದರ ಈಗಾಗಲೆ ಹೆಚ್ಚುತ್ತಿದೆ. ಪಕ್ಕದ ಜಿಲ್ಲೆಯಲ್ಲಿ ವಾರಾಂತ್ಯದ ಲಾಕ್‌ಡೌನ್ ಆರಂಭವಾಗಿದೆ. ೩ನೇ ಅಲೆಯ ಆತಂಕ ಎದುರಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಕೋವಿಡ್‌ನಿಂದ ಮುಕ್ತಿ ಹೊಂದಲು ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಪಡೆಯುವುದೊಂದೆ ಪರಿಹಾರ. ತಾಲೂಕಿನಲ್ಲಿ ಲಸಿಕೆಯ ಅಭಾವವನ್ನು ಮನಗಂಡ ಜಿಲ್ಲಾ ವ್ಯಾಕ್ಸಿನೇಶನ್ ಅಧಿಕಾರಿ ಡಾ. ರಮೇಶ ರಾವ್ ನಮ್ಮ ಆಗ್ರಹದ ಮೇರೆಗೆ ಭಟ್ಕಳ ತಾಲೂಕಿಗೆ ಒಟ್ಟು ೩೫೦೦ ಲಸಿಕೆಯನ್ನು ಒದಗಿಸಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ೨೦೦೦ ವ್ಯಾಕ್ಸಿನ್‌ನೀಡಿದರೆ ತಾಲೂಕಿನ ಗ್ರಾಮೀಣ ಭಾಗಗಳಲ್ಲೂ ೧೫೦೦ ವ್ಯಾಕ್ಸಿನ್‌ನೀಡಲಾಗುವದು.
ಪಟ್ಟಣದ ಶ್ರೀ ಗುರು ರಾಘವೇಂದ್ರ ಮಠದ ಹಿಂಬಾಗದಲ್ಲಿ ೧೦೦೦ ವ್ಯಾಕ್ಸಿನ್ ಡೋಸ್, ಮಗ್ದೂಮ ಕಾಲನಿಯ ಜುಮ್ಮಾ ಮಸೀದಿ ಬಳಿಯ ಶಾದಿ ಮಹಲ್‌ನಲ್ಲಿ ೫೦೦ ಡೋಸ್, ಪುರವರ್ಗದ ಸರ್ಕಾರಿ ಶಾಲೆಯಲ್ಲಿ ೫೦೦ ಡೋಸ್‌ಗಳನ್ನು ನೀಡಲಾಗುವದು. ಸಾರ್ವಜನಿಕರು ಯಾವುದೆ ಜನಜಂಗುಳಿಗೆ ಆಸ್ಪದ ನೀಡದೆ ಬೆಳಿಗ್ಗೆಯಿಂದ ಸಂಜೆಯವರೆಗೆ ನೀಡುವ ಈ ಲಸಿಕಾಕರಣದ ಮಹಾ ಅಭಿಯಾನದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಂದು ಲಸಿಕೆ ಪಡೆಯಬೇಕು. ಕೋವಿಡ್ ಹೆಮ್ಮಾರಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಶ್ರಮಿಸಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಸ್ಟಾಪ್ ನರ್ಸಗಳಾದ ರೇಖಾ ಶೆಟ್ಟಿ, ಶಶಿಕಲಾ ಇದ್ದರು.

error: