March 13, 2025

Bhavana Tv

Its Your Channel

ಭಟ್ಕಳ ತಾಲೂಕಾ ಛಾಯಾಗ್ರಾಹಕರ ಸಂಘದ ವತಿಯಿಂದ ವಿಶ್ವ ಪೋಟೋಗ್ರಾಫಿ ದಿನಾಚರಣೆ

ಭಟ್ಕಳ ತಾಲೂಕಾ ಛಾಯಾಗ್ರಾಹಕರ ಸಂಘದ ವತಿಯಿಂದ ವಿಶ್ವ ಪೋಟೋಗ್ರಫಿ ದಿನಾಚರಣೆಯ ಅಂಗವಾಗಿ ಭಟ್ಕಳ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹ್ಯಾಂಡ್ ಗ್ಲೌಸ್ ಮತ್ತು ಇತರೆ ಕಾಯಿಲೆಗಳಿಂದ ಬಳಲುತ್ತಿದ್ದ ಇಬ್ಬರಿಗೆ ತಲಾ ೫೦೦೦ ರೂಗಳನ್ನು ಭಟ್ಕಳ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯ್ಕ ವಿತರಿಸಿದರು.

ಭಟ್ಕಳ ತಾಲೂಕಾ ಛಾಯಾಗ್ರಾಹಕರ ಸಂಘದ ವತಿಯಿಂದ ವಿಶ್ವ ಪೋಟೋಗ್ರಫಿ ದಿನಾಚರಣೆಯ ಅಂಗವಾಗಿ ಭಟ್ಕಳ ಮುಗಳಿಕೋಣೆ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ದೇಶದ ಜನರ ಆರೋಗ್ಯದ ಕುರಿತು ಪ್ರಾರ್ಥಿಸಲಾಯಿತು. ನಂತರ ಸರ್ಕಾರಿ ಆಸ್ಪತ್ರೆಗೆ ತೆರಳಿ ೫೦೦೦ ರೂ ಬೆಲೆ ಬಾಳುವ ಹ್ಯಾಂಡ್ ಗ್ಲೌಸ್ ಹಾಗೂ ಪ್ಯಾರಾಶಿಟಮಲ್ ಮಾತ್ರಗಳನ್ನು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸವಿತಾ ಕಾಮತ ಅವರಿಗೆ ನೀಡಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಮುಂಡಳ್ಳಿಯ ಜಯಂತ ನಾಗಪ್ಪ ನಾಯ್ಕ ಮತ್ತು ಹೆರ್ತಾರಿನ ತ್ರಿಷಾರ್ ರೋಹಿದಾಸ್ ಗೊಂಡ ಇವರಿಗೆ ತಲಾ ೫೦೦೦ರೂ ಗಳನ್ನು ನೀಡಲಾಯಿತು. ಈ ಸಂದರ್ಬದಲ್ಲಿ ಉಪಾಧ್ಯಕ್ಷ ರಮೆಶ ನಾಯ್ಕ, ಸೆಕ್ರಟರಿ ಪ್ರವೀಣ ಶೆಟ್ಟಿ, ಸದಸ್ಯರಾದ ಕಿರಣ ಶೆಟ್ಟಿ, ರಾಘವೇಂದ್ರ ನಾಯ್ಕ, ಯೋಗೇಶ ನಾಯ್ಕ, ಕಿರಣ ಶ್ಯಾನಭಾಗ, ಈಶ್ವರ ನಾಯ್ಕ, ಮಾರುತಿ ನಾಯ್ಕ, ಮೋಹನ ನಾಯ್ಕ, ರಾಘವೇಂದ್ರ ಜೋಗಿ, ರಾಜೇಶ ಹರಿಕಾಂತ, ಕೆ.ಪಿ. ಮಣಿ, ಆಗ್ನೇಲ್ ಇತರರು ಇದ್ದರು.

error: