
ಭಟ್ಕಳ: ಕೋವಿಡ್ ಆತಂಕದ ನಡುವೆಯೂ ಕೇರಳದ ಇಬ್ಬರೂ ಯುವಕರು ಸೈಕಲ್ ಏರಿ ದೇಶ ಪರ್ಯಟನೆಗೆ ಹೊರಟ್ಟಿದ್ದಾರೆ. ಕೇರಳ ಕಣ್ಣೂರಿನಿಂದ ಇದೇ ೧೧ರಂದು ಪ್ರಯಾಣ ಬೆಳೆಸಿದ ಇವರು ಭಟ್ಕಳಕ್ಕೆ ಬಂದು ತಲುಪಿದ್ದಾರೆ.
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಾಳಿಪ್ರಭಾ ನಿವಾಸಿಗಳಾದ ಜಿಮಸಾದ್ ಹಾಗೂ ನಿಯಾನ್’ ಎಂಬ ಇಬ್ಬರೂ ಯುವಕರು ಬಾಲ್ಯದಿಂದ ಸ್ನೇಹಿತರು. ದೇಶ ಪರ್ಯಟನೆ ಮಾಡುವುದು ಇಬ್ಬರದ್ದೂ ಕನಸಾಗಿತ್ತು. ದುಬೈ ದೇಶದಲ್ಲಿ ಕಂಪನಿ ಕೆಲಸಕ್ಕಿದ್ದ ಇಬ್ಬರೂ ಆರು ತಿಂಗಳ ರಜೆಯ ಮೇಲೆ ಊರಿಗೆ ಬಂದು ದೇಶ ಪರ್ಯಟನೆಗೆ ಯೋಜನೆ ರೂಪಿಸಿದ್ದರು. ಮೊದಲು ರೈಲು ಹಾಗೂ ವಿಮಾನದ ಮೂಲಕ ದೇಶ ಸುತ್ತುವ ಯೋಚನೆ ರೂಪಿಸಿದ್ದ ಗೆಳೆಯರು. ನಮ್ಮಂತಯೇ ದೇಶ ಸುತ್ತಲೂ ಬಯಸುವ ಸಾಕಷ್ಟು ಜನರಿಗೆ ಕಡಿಮೆ ವೆಚ್ಚದಲ್ಲಿ ದೇಶ ಪರ್ಯಟನೆ ಮಾಡಬಹುದು ಎನ್ನುವ ಸಂದೇಶ ರವಾನೆ ಮಾಡುವ ಉದ್ದೇಶದಿಂದ ಸೈಕಲ್ ಏರಿ ಪ್ರಯಾಣ ಆರಂಭಿಸಿದರು.
ಈ ಪ್ರಯಾಣ ಒಟ್ಟು ೬ ತಿಂಗಳಿನದ್ದಾಗಿದೆ. ದೇಶದ ಪ್ರಮುಖ ಪಟ್ಟಣ, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವ ಇವರು ನೆರೆಯ ಭೂತಾನ್ ಹಾಗೂ ನೇಪಾಳ ದೇಶಗಳಿಗೆ ಭೇಟಿ ನೀಡಲಿದ್ದಾರೆ.ಬಾಲ್ಯದಿಂದಲೂ ದೇಶ ಪರ್ಯಟನೆ ಮಾಡಬೇಕೆನ್ನುವ ಕನಸು ಹೊತ್ತಿದ್ದ ನಾವು ಸೈಕಲ್ ಏರಿ ಪ್ರಯಾಣ ಹೊರಟಿದ್ದೇವೆ. ನಮ್ಮ ಪ್ರಯಾಣ ಬಡವರಿಗೆ ಸ್ಪೂರ್ತಿದಾಯಕವಾಗಲಿ ಎನ್ನುವುದು ನಮ್ಮ ಆಶಯವಾಗಿದೆ. ದಿನಾಲು ೩೦೦ ರೂ ವೆಚ್ಚದಲ್ಲಿ ಊಟ ತಿಂಡಿ ಮುಗಿಸಿ ಡಾಬಾದಲ್ಲಿ ಮಲಗಿ ಪ್ರಯಾಣ ಮುಂದುವೆರೆಸುತ್ತಿದ್ದೇವೆ. ನಮಗೆ ಹೋದಲೆಲ್ಲಾ ಉತ್ತಮ ಬೆಂಬಲ ಸಿಗುತ್ತಿದೆ ಎಂದು ಜಿಮಸಾದ್ ಹೇಳಿದರು.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ