March 12, 2025

Bhavana Tv

Its Your Channel

ಭಟ್ಕಳ ತಾಲೂಕ ನಾಯಕ್ ಹೆಲ್ತ ಸೆಂಟರನಲ್ಲಿ ಆರೋಗ್ಯ ತಪಾಸಣಾ ಶಿಬಿರ

ಭಟ್ಕಳ: ತಾಲೂಕ ಸಾಗರ ರಸ್ತೆಯಲ್ಲಿರುವ ನಾಯಕ್ ಹೆಲ್ತ ಸೆಂಟರಿನಲ್ಲಿ ಡಾ ಪಾಂಡುರAಗ ನಾಯಕ್ ಅವರು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಗಾಟಿಸಿದರು.
ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಅವರು ನಮ್ಮ ದೇಶದ ಸಂಸ್ಕ್ರತಿ ಪ್ರಪಂಚಕ್ಕೆ ಮಾದರಿಯಾಗಿದೆ, ಆರೋಗ್ಯ ಮನುಷ್ಯನಿಗೆ ಮಹತ್ವಪೂರ್ಣವಾಗಿರುತ್ತದೆ ಆರೋಗ್ಯ ಇಲ್ಲದಿದ್ದರೆ ಯಾವುದು ಉಪಯೋಗಕ್ಕೆ ಬರುದಿಲ್ಲಾ ನಮ್ಮ ದೇಶ ಸಾವಿರ ವರ್ಷದ ಮೊದಲೆ ಆರೋಗ್ಯ ಎಂಬ ಪದಕ್ಕೆ ಸರಿಯಾದ ಒಂದು ಅರ್ಥವನ್ನು ಕಲ್ಪಿಸಿಕೊಟ್ಟಿದೆ, ಆದುನಿಕ ಪದ್ದತಿಯ ಸಮರ್ಥಕರು ಈಗ ನಮ್ಮ ಆಯುರ್ವೆದ ಯೋಗ ಚಿಕಿತ್ಸೆಯ ಬಗ್ಗೆ ಮಾತನಾಡುತ್ತಿದ್ದಾರೆ ಸಮರ್ಥಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಇವರು ನಮ್ಮ ಆರೋಗ್ಯ ಪದ್ದತಿಯನ್ನೆ ರೂಪಿಸಿಕೊಳ್ಳುತ್ತಾರೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದರು.

ಈ ಸಂದರ್ಬದಲ್ಲಿ ಭಾರತ್ ವಿಕಾಸ ಪರಿಷತ್ ಭಟ್ಕಳ ಘಟಕದ ಸ್ಥಾಪಕರಾದ ಡಾ|| ನರಸಿಂಹ ಮೂರ್ತಿ ಮಾತನಾಡಿ ನಮ್ಮ ತಾಲೂಕಿನ ಡಾ. ಪಾಂಡುರAಗ ನಾಯಕ್ ಅವರ ಸೇವೆ ತುಂಬ ಗಣನಿಯ ಅವರು ನಮ್ಮ ಸಂಸ್ಕ್ರತಿ ಯೋಗ ಪುರಾತನ ಆರೋಗ್ಯ ತಪಾಸಣೆ ಆಯುರ್ವೆದ ಚಿಕಿತ್ಸೆ ಪ್ರಕೃತಿ ಚಿಕಿತ್ಸೆಗಳಿಗೆ ಮೊದಲಿನಿಂದಲೂ ಮಹತ್ವವನ್ನು ಕೊಡುತ್ತಲೆ ಬಂದಿದ್ದಾರೆ ಅವರು ಈ ಭಟ್ಕಳದಿಂದ ಬೆಂಗಳೂರಿಗೆ ಹೊಗಿ ನೆಲೆಸಿದ್ದಾರೆ ಅವರ ಸೇವೆ ನಮ್ಮ ಭಟ್ಕಳಕ್ಕೆ ಬೇಕಾಗಿದ್ದು ಅವರು ಭಟ್ಕಳದಲ್ಲೆ ನೆಲೆಸುವಂತಾಗಲಿ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ನಾಯಕ್ ಹೆಲ್ತ ಸೆಂಟರಿನ ಡಾ. ವಿಶ್ವನಾಥ ನಾಯ್ಕ ಮಾತನಾಡಿ ನಾವು ಹೊಸದಾಗಿ ನಾಯಕ್ ಹೆಲ್ತ ಸೆಂಟರ್ ಪ್ರಾರಂಬಿಸಿದ್ದೆವೆ ತಾಲೂಕಿನಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವುದು ನಮ್ಮ ಉದ್ದೇಶವಾಗಿದೆ . ಸಾರ್ವಜನಿಕರು ನಮ್ಮ ಪ್ರಯತ್ನಕ್ಕೆ ಸಹಕರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಾಯಕ್ ಹೆಲ್ತ ಸೆಂಟರಿನ ಡಾ ವಿನುತಾ ನಾಯಕ್ ಹಾಗು ಭಟ್ಕಳ ಭಾರತ್ ವಿಕಾಸ ಪರಿಷತ್ ಅಧ್ಯಕ್ಷರಾದ ಪ್ರಕಾಶ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಮನಾಥ ಬಳೆಗಾರ ಸ್ವಾಗತಿಸಿದರೆ, ಆರೋಗ್ಯ ಭಾರತಿಯ ಕಾರ್ಯಕರ್ತ ದೇವೆಂದ್ರಪ್ಪ ವಂದಿಸಿದರು.

ಈ ಸಂದರ್ಭದಲ್ಲಿ ಡಾ ಶಿವಕುಮಾರ್, ನಾಯಕ್ ಹೆಲ್ತ ಸೆಂಟರ್ , ಭಾರತ್ ವಿಕಾಸ ಪರಿಷತ್ತಿನ ವಸಂತ ನಾಯ್ಕ. ನಾಗೇಶ ನಾಯ್ಕ. ದೇವಯ್ಯ ನಾಯ್ಕ ಹಾಗು ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಇನ್ಬಿತರರು ಉಪಸ್ಥಿತರಿದ್ದರು.

error: