ಸಾಮಾಜಿಕ ತಾಣದಲ್ಲಿ ವಿದ್ಯಾರ್ಥಿಗಳು ಬಸ್ ನಲ್ಲಿ ನೇತಾಡಿಕೊಂಡು ಹೋಗುತ್ತಿರುವ ವೀಡಿಯೋಕ್ಕೆ ವಾಯುವ್ಯ ಸಾರಿಗೆ ಅಧಿಕಾರಿಗಳು ತಹಶಿಲ್ದಾರರಿಗೆ ಬರೆದ ಪತ್ರದಲ್ಲಿ ವಿದ್ಯಾರ್ಥಿಗಳು ಬೇರೆ ಬಸ್ಸು ಇದ್ದರು ಒಂದೆ ಬಸ್ಸನಲ್ಲಿ ನೇತಾಡಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿ ಬರೆದುಕೊಂಡಿದ್ದಾರೆ, ಅಲ್ಲದೆ ನಾವು ಪ್ರತಿ ೧೫ ನಿಮಿಷಕ್ಕೆ ಒಂದು ಬಸ್ ಮತ್ತು ಇತರೆ ವೇಗದೂತಗಳು ಬರುತ್ತವೆ ಇವನ್ನು ಬಳಸಿಕೊಳ್ಳಲಿ ಎಂದಿದ್ದಾರೆ.
ಅವರ ಅಭಿಪ್ರಾಯದಂತೆ ಪ್ರತಿ ಹದಿನೈದು ನಿಮಿಷಕ್ಕೆ ಒಂದು ಬಸ್ ಲಭ್ಯವಿದೆ ಎಂದರೆ ಅದರ ಅರ್ಥ ಬೆಳಿಗ್ಗೆ ಸಮಯ ೭-೦೦ ರಿಂದ ಬೆಳಿಗ್ಗೆ ಸಮಯ ೯-೦೦ ಗಂಟೆಯವರೆಗೆ ಒಟ್ಟು ೮ ಬಸ್ಸುಗಳು ಲಭ್ಯವಿದೆಯೆಂದು ತಿಳಿಯೋಣ.
ಆದರೆ, ಬೆಳಿಗ್ಗೆ ೭-೦೦ ರಿಂದ ಬೆಳಿಗ್ಗೆ ೯-೦೦ ಗಂಟೆಯ ಮದ್ಯೆ ಸರ್ಕಾರಿ ಬಸ್ನ್ನೇ ಅವಲಂಬಿಸಿ ಹೊನ್ನಾವರದಿಂದ ಭಟ್ಕಳ ಮಾರ್ಗವಾಗಿ ಬೈಂದೂರಿನವರೆಗೆ ಸಾವಿರಾರು ಶಾಲಾಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಈ ಎರಡು ಗಂಟೆ ಅವಧಿಯಲ್ಲಿ ಈ ಮಾರ್ಗದಲ್ಲಿ ಪ್ರತಿ ಹದಿನೈದು ನಿಮಿಷಕ್ಕೆ ಒಂದರAತೆ ಸಂಚರಿಸುವ ಸಾರಿಗೆ ಇಲಾಖೆಯ ೮ ಬಸ್ಸುಗಳು ಕರೋನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಾವಿರಾರು ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರು ಹಾಗೂ ಇನ್ನಿತರ ಸಾರ್ವಜನಿಕರನ್ನು ಹೊತ್ತಯಲು ಸಾಧ್ಯವೇ ಎಂದು ಸಾರಿಗೆ ಇಲಾಖೆಯೇ ಉತ್ತರಿಸಬೇಕಾಗಿದೆ.
ಇಲ್ಲಿ ಪ್ರಾಕ್ಟಿಕಲ್ ಆಗಿ ಯೋಚಿಸಿ, ವಿದ್ಯಾರ್ಥಿಗಳ ದಟ್ಟಣೆಗೆ ಅನುಗುಣವಾಗಿ ಈ ಮೇಲಿನ ೨ ಗಂಟೆ ಸಮಯದಲ್ಲಿ ಎಷ್ಟು ಬಸ್ಸುಗಳು ವಿದ್ಯಾರ್ಥಿಗಳಿಗಾಗಿ ಸಂಚರಿಸಬೇಕು ಎನ್ನುವುದನ್ನು ನಿರ್ದರಿಸಬೇಕಾಗಿದೆಯೇ ಹೊರತು ಕೇವಲ ಪ್ರತಿ ಹದಿನೈದು ನಿಮಿಷಕ್ಕೊಂದು ಬಿಡುವ ಬಸ್ಸುಗಳು ಈ ಸಮಸ್ಯೆಯನ್ನು ಬಗೆಹರಿಸಲು ಸಾದ್ಯವೇ ಇಲ್ಲ.
ಮೇಲಿಂದಾಗಿ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತಲುಪ ಬೇಕಾಗಿರುವುದರಿಂದ, ಸಾರಿಗೆ ಇಲಾಖೆ ಹೇಳಿದಂತೆ ಬೆಳಿಗ್ಗಿನ ೨ ಗಂಟೆ ಸಮಯ ಅಂದರೆ ಬೆಳಿಗ್ಗೆ ೭-೦೦ ರಿಂದ ಬೆಳಿಗ್ಗೆ ೯-೦೦ ಗಂಟೆಯ ಮದ್ಯೆ ಪ್ರತಿ ಹದಿನೈದು ನಿಮಿಷಕ್ಕೆ ಸಂಚರಿಸುವ ೮ ಬಸ್ಸುಗಳು ಸಮಯಕ್ಕೆ ಸರಿಯಾಗಿ ಯಾವುದೇ ರೀತಿಯ ದಟ್ಟಣೆ ಇಲ್ಲದೇ ಕರೋನಾ ನಿಯಮಾವಳಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಸಾವಿರಾರು ವಿದ್ಯಾರ್ಥಿಗಳನ್ನು ಅವರ ಶಾಲಾಕಾಲೇಜುಗಳಿಗೆ ತಲುಪಿಸಲು ಹೇಗೆ ಸಾದ್ಯ. ಮೇಲಿಂದಾಗಿ ಸಾರಿಗೆ ಇಲಾಖೆಯವರು ಹೇಳಿದಂತೆ ವಿದ್ಯಾರ್ಥಿಗಳು ಸಹಕರಿಸಬೇಕು ಎಂದು ತಿಳಿದು ಎಲ್ಲಾ ವಿದ್ಯಾರ್ಥಿಗಳು ಪ್ರತಿ ಹದಿನೈದು ನಿಮಿಷದ ಬಸ್ಸಿಗೆ ಕಾಯ್ದು ಕುಳಿತಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲಾಕಾಲೇಜುಗಳಿಗೆ ಬೆಳಿಗ್ಗೆ ತಲುಪುವ ಬದಲು ಮಧ್ಯಾಹ್ನದವರೆಗೆ ಕಾಯಬೇಕಾಗುತ್ತದೆ.
ಆದ್ದರಿಂದ ಸಾರಿಗೆ ಇಲಾಖೆಯ ಈ ಮೇಲಿನ ಸಬೂಬು ಕೇವಲ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಮಾಡಿದ ಪತ್ರವಾಗಿದೆಯೇ ಹೊರತು ವಿದ್ಯಾರ್ಥಿಗಳು ಅನುಭವಿಸುತ್ತಿರುವ ದಿನನಿತ್ಯದ ಪರದಾಟಕ್ಕೆ ಪರಿಹಾರವಂತು ಅಲ್ಲವೇ ಅಲ್ಲ. ಆದ ಕಾರಣ, ಸಂಬAಧಿಸಿದವರು ಪ್ರಾಯೋಗಿಕವಾಗಿ ಯೋಚಿಸಿ, ಬೆಳಿಗ್ಗೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಹೆಚ್ಚಿನ ಸಂಖ್ಯೆಯ ವಿಶೇಷ ಬಸ್ಸುಗಳನ್ನು ಬಿಡುವ ಮೂಲಕ ವಿದ್ಯಾರ್ಥಿಗಳ ದಿನನಿತ್ಯದ ಈ ಪರದಾಟವನ್ನು ತಪ್ಪಿಸಲು ಸಹಕರಿಸಬೇಕು ಎಂದು ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಆಸರಕೇರಿ ವಿನಂತಿಸಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಗೂಬೆ ಕೂರಿಸಿ ಪ್ರತಿ ಹದಿನೈದು ನಿಮಿಷಕ್ಕೆ ಬಸ್ಸುಗಳು ಲಭ್ಯವಿದೆಯೆಂದು ನುಣುಚಿಕೊಂಡ ಕೆಎಸ್ಆರ್ಟಿಸಿ ಅಧಿಕಾರಿಗಳು

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ