March 12, 2025

Bhavana Tv

Its Your Channel

ಭಟ್ಕಳದಲ್ಲಿ ಜಿಲ್ಲಾಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಸ್ಪರ್ಧಿಸಲಿದೆ – ನಾಗರಾಜ್ ನಾಯ್ಕ

ಭಟ್ಕಳ- ಸಮಾಜವಾದಿ ಪಕ್ಷದ ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷರಾದ ನಾಗರಾಜ್ ನಾಯ್ಕ ಅವರು ಸೋಮವಾರ ಪಕ್ಷ ಸಂಘಟನೆ ವಿಚಾರವಾಗಿ ಭಟ್ಕಳಕ್ಕೆ ಆಗಮಿಸಿ ಮಾಧ್ಯಮ ಸುದ್ದಿಗಾರರೊಂದಿಗೆ ಮಾತನಾಡುತ್ತ ದಿನಾಂಕ ೩೦/೮/೨೧ ರಂದು ಶಿರಸಿ ಗೆ ಸಮಾಜವಾದಿ ಪಕ್ಷದ ನೂತನ ರಾಜ್ಯಾಧ್ಯಕ್ಷರದ ಎನ್.ಮಂಜಪ್ಪ ಆಗಮಿಸುತ್ತಿದ್ದು, ಆಗಸ್ಟ್ ೩೦ ನೆ ತಾರೀಕು ಬೆಳಿಗ್ಗೆ ೧೦ ಗಂಟೆಗೆ ಶಿರಸಿಯ ಮಧುವನ ಹೋಟೆಲ್ ಆರಾಧನಾ ಸಭಾ ಭವನದಲ್ಲಿ ನೂತನ ರಾಜ್ಯ ಅಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾ ಅಧ್ಯಕ್ಶರು ಮತ್ತು ಪದಾಧಿಕಾರಿಗಳ ಸಭೆ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಮುಂದಿನ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಭಟ್ಕಳದಲ್ಲಿ ಸಮಾಜವಾದಿ ಪಕ್ಷ ಎಲ್ಲ ಕ್ಷೇತ್ರಗಳಲ್ಲಿ ಭಟ್ಕಳ್ ತಾಲೂಕ ಅಧ್ಯಕ್ಷ ಅಂತೋನ ನೇತೃತ್ವದಲ್ಲಿ ಸ್ಫರ್ಧೆ ಮಾಡಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ರಾಜ್ಯ ಮುಖಂಡ ಬಳಿಗಾರ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸಮಿಉಲ್ಲಾ ಭಟ್ಕಳ, ತಾಲೂಕಾಧ್ಯಕ್ಷ ಅಂತೋನ ಜೂಜೆ ಲೂಯಿಸ್ ಮುಂಡಳ್ಳಿ ಉಪಸ್ಥಿತರಿದ್ದರು..

error: