March 12, 2025

Bhavana Tv

Its Your Channel

ಬಿ.ಜೆ.ಪಿ ಭಟ್ಕಳ ಮಂಡಲ ವತಿಯಿಂದ ಮಂಜುನಾಥ ನಾಯ್ಕರವರಿಗೆ ಶೃದ್ಧಾಂಜಲಿ ಸಲ್ಲಿಕೆ

ಭಟ್ಕಳ: ಬೈಂದೂರು ಬಳಿಯಲ್ಲಿ ರಸ್ತೆ ಅಪಘಾತಕ್ಕೀಡಾಗಿ ಅಕಾಲಿಕ ಮರಣ ಹೊಂದಿದ ಬಿ.ಜೆ.ಪಿ. ಮುಖಂಡ ಮಂಜುನಾಥ ನಾಯ್ಕ ಅವರಿಗೆ ಮಂಡಳದ ಕಚೇರಿಯಲ್ಲಿ ಪಕ್ಷದ ವತಿಯಿಂದ ಮೌನಾಚರಣೆಯನ್ನು ಮಾಡಿ ಶೃದ್ಧಾಂಜಲಿ ಸಲ್ಲಿಸಲಾಯಿತು.

ಶೃದ್ಧಾಂಜಲಿ ಸಲ್ಲಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ ಅವರು ಮಂಜುನಾಥ ನಾಯ್ಕ ಅವರ ಪಕ್ಷನಿಷ್ಠೆ, ಅವರೊಂದಿಗಿನ ಒಡನಾಟ, ಹಾಗೂ ಪಕ್ಷದ ಪರವಾಗಿ ಅವರು ಮಾಡುತ್ತಿದ್ದ ಕಾರ್ಯಗಳನ್ನು ನೆನೆದರು. ಅಂತಹ ಪಕ್ಷ ನಿಷ್ಟನೋರ್ವನನ್ನು ಇಂದು ಬಿ.ಜೆ.ಪಿ. ಕಳೆದುಕೊಂಡಿರುವುದಕ್ಕೆ ದು:ಖವಾಗುತ್ತಿದೆ ಎಂದರು.
ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ರವಿ ನಾಯ್ಕ ಜಾಲಿ, ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತಾರಾಮ್, ಬಿ.ಜೆ.ಪಿ. ಮಂಡಳದ ಅಧ್ಯಕ್ಷ ಸುಬ್ರಾಯ ದೇವಾಡಿಗ ಮಾತನಾಡಿದರು. ಶೃದ್ಧಾಂಜಲಿ ಸಭೆಯಲ್ಲಿ ಜಿಲ್ಲಾ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಷ್ಣುಮೂರ್ತಿ ಹೆಗಡೆ, ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕ ದತ್ತಾತ್ರೇಯ ನಾಯ್ಕ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ ನಾಯ್ಕ, ಜಿಲ್ಲಾ ಎಸ್.ಸಿ. ಮೊರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರು ಗೊಮಡ, ಮಂಡಳದ ಪ್ರಧಾನ ಕಾರ್ಯದರ್ಶಿ ಮೋಹನ ನಾಯ್ಕ, ಭಾಸ್ಕರ ದೈಮನೆ ಪ್ರಮುಖರಾದ ಈಶ್ವರ ಎನ್. ನಾಯ್ಕ, ಗೋವರ್ಧನ ನಾಯ್ಕ ಸೇರಿದಂತೆ ಪಕ್ಷದ ಪ್ರಮುಖರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಂಜುನಾಥ ನಾಯ್ಕ ಅವರು ಪಕ್ಷದ ಭಟ್ಕಳ ಮಡಳದ ಒಬಿಸಿ ಮೊರ್ಚಾ ಅಧ್ಯಕ್ಷರಾಗಿ, ಜಿಲ್ಲಾ ಒಬಿಸಿ ಮೋರ್ಚಾದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದು ಪ್ರಸ್ತುತ ಜಾಲಿ ಶಕ್ತಿ ಕೇಂದ್ರದ ಪ್ರಮುಖರಾಗಿರುವುದನ್ನು ಇದೇ ಸಂದರ್ಭದಲ್ಲಿ ಸ್ಮರಿಸಲಾಯಿತು.

error: